ಕವಿತೆ- ಬಡತನದ ಮನ....

Upayuktha
0



ನೂರಾರು ಕನಸುಗಳು
ಎದೆಯ ಆಳದಲ್ಲಿ
ಯಾವಾಗ ನನಸಾಗುವುದೋ
ನಾ ಕಾಣೇ.....


ಮೊಳಕೆ ಸಿರಿಯಾಗುವುದೋ
ಚಿಗುರಿ ಮರೆಯಾಗುವುದೋ
ಬಡತನದ ಸೂರಿನಲ್ಲಿ
ಪ್ರಶ್ನೆಗಳೇ ತುಂಬಿದೆಯಿಲ್ಲಿ


ಕತ್ತಲಾದರೆ ಬೆಳಕಿನ ಚಿಂತೆ
ಬೆಳಗಾದರೆ ಕತ್ತಲ ಹಂಬಲ
ದಣಿವಿನ ವೇಗದಲ್ಲಿ
ಓಡಾಟದ ನಿತ್ಯ ಜೀವನ


ಕಂಡ ಕನಸುಗಳು 
ರೆಕ್ಕೆ ಬಲಿಯುವುದೆಂದೊ
ಹಾಯಾಗಿ ಖುಷಿಯಾಗಿ
ಆಕಾಶದಲ್ಲಿ ಹಾರುವುದೆಂದೊ


✍️ ಸಂಧ್ಯಾ ಎನ್, ಮಣಿನಾಲ್ಕೂರು 

Tags

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top