ಬೆಳದಿಂಗಳ ರಾತ್ರಿ ತಂಪಾಗಿತ್ತು,
ಮನಸು ಮಾತ್ರ ಹಗುರಾಗಿತ್ತು.
ಹಾಗೇ ಸುಮ್ಮನೆ ನಡೆದೆವು ದಾರಿಯಲ್ಲಿ,
ತಂಗಿಯರ ಕೈ ಹಿಡಿದು ನಸುನಗುತ್ತಾ.
ಮಂಜಿನ ಮುಂಜಾನೆ ಮೆಲ್ಲನೆ ಬಂದಿತು,
ಹೆಗಲ ಮೇಲೆ ಕೈ ಹಾಕಿ ಹಾಡು ಹಾಡಿದೆವು.
ಆ ಕ್ಷಣದಲ್ಲಿ ಚಿಂತೆ ಇರಲಿಲ್ಲ,
ಕೇವಲ ಖುಷಿ ಮಾತ್ರ ಮನ ತುಂಬಿತ್ತು.
ರಾತ್ರಿ ಇಡೀ ನಿದ್ದೆ ಗೆದ್ದು,
ಮಾತು-ಆಟದಲ್ಲಿ ಕಾಲ ಕಳೆದೆವು.
"ಇಂತಹ ದಿನಗಳು ಮತ್ತೆ ಬರುತ್ತವೆಯೋ?"
ಮನದಲ್ಲಿ ಪ್ರಶ್ನೆ ಒಂದು ಮೂಡಿತು.
ಕನಸಿಗಾಗಿ ನಿದ್ದೆ ತ್ಯಾಗ ಮಾಡುವ,
ಕ್ಷಣಕ್ಕಾಗಿ ಸಮಯವನ್ನೇ ಮರೆಯುವ,
ಇಂದಿನ ಕಾಲ ಹಾಗೇ ಆಗಿಬಿಟ್ಟಿದೆ.
ಆದರೂ ನೆನಪುಗಳು ಮಾತ್ರ ಸಿಹಿಯಾಗಿವೆ.
ಕಷ್ಟ-ಸುಖ ವಿಧಿಯ ಆಟವೇ ಸರಿ,
ಸಮಯದೊಂದಿಗೆ ನಾವು ಹೊಂದಿಕೊಳ್ಳಬೇಕು.
ಆದರೆ "ಹಾಗೇ ಸುಮ್ಮನೆ" ಕಳೆದ ಆ ಕ್ಷಣಗಳು,
ಜೀವನಕ್ಕೆ ಬಣ್ಣ ತುಂಬುವ ಚಿತ್ರಗಳೇ ಸರಿ.
- ಶಿವಾನಿ ಕೊಡಂಗಾಯಿ
ದ್ವಿತೀಯ ಬಿ.ಎ (ಪತ್ರೀಕೋಧ್ಯಮ ವಿಭಾಗ)
ವಿವೇಕಾನಂದ ಮಹಾವಿದ್ಯಾಲಯ,(ಸ್ವಾಯತ್ತ) ಪುತ್ತೂರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

