ಬಸವಾದಿ ಶರಣರ ಆಚಾರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಅಮೀನಗಡ ಶ್ರೀಗಳು

Upayuktha
0




ಹುನಗುಂದ: ಸಮಾನತೆಯ ಸಮ ಸಮಾಜ ಕಟ್ಟಬೇಕೆಂಬ ಬಸವಾದಿ ಶರಣರ ತತ್ವಕ್ಕೆ ಮತ್ತೆ ಬಲತುಂಬಿ ಕೊಂಡಿರುವುದು ತುಂಬಾ ಆಶಾಕಿರಣ ಎಂದು ಅಮೀನಗಡ- ಎರಿಗೋನಾಳದ ಪ್ರಭುಶಂಕರೇಶ್ವರ ಮಠದ ಶಂಕರರಾಜೇಂದ್ರ ಸ್ವಾಮೀಜಿ ಹೇಳಿದರು.


ಅವರು ತಾಲೂಕಿನ ಚಿತ್ರವಾಡಗಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ ಹಮ್ಮಿಕೊಂಡಿದ್ದ 428ನೇ ಮಾಸಿಕ ಶಿವಾನುಭವ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದರು. ಅಂದು ನುಡಿದಂತೆ ನಡೆದ ಬಸವಾದಿ ಶರಣರ ಸುಸಂಸ್ಕೃತ ಆಚಾರ-ವಿಚಾರಗಳನ್ನು ಇಂದಿನ ಯುವಕ ಯುವತಿಯರಿಗೆ ಮನವರಿಕೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.


ಹುನಗುಂದ ತಾಲ್ಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಡಾ. ನಾಗರಾಜ ನಾಡಗೌಡರ ಅತಿಥಿಯಾಗಿ ಮಾತನಾಡಿ ಡಾಂಬಿಕ ಭಕ್ತಿಯನ್ನು ತೊರೆದುಹಾಕಿ ಸರಳ ಸುಸಂಸ್ಕೃತ ಜೀವನದೊಂದಿಗೆ ಪರೋಪಕಾರಿಗಳಾಗಿ ಬದುಕಿದಾಗ ಮಾನವ ಜೀವನ ಸಾರ್ಥಕವಾಗಲಿದೆ ಎಂದರು. ಕಸಾಪ ಅಧ್ಯಕ್ಷ ಎಸ್. ಎಸ್. ದಾನಿಮನಿ ಅತಿಥಿಯಾಗಿ ಮಾತನಾಡಿ –ಶರಣರ– ದಾಸೋಹ ತತ್ವ ಬೆಳೆಸಿಕೊಳ್ಳಲು ತಿಳಿಸಿದರು.


ಇದೇ ಸಂದರ್ಭದಲ್ಲಿ ಹುನಗುಂದದ ವಿಜಯಮಹಾಂತೇಶ ಸಹಕಾರಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಕೀಲ ಮಹಾಂತೇಶ ಅವಾರಿ, ಉಪಾಧ್ಯಕ್ಷರಾಗಿ ಆಯ್ಕೆಯಾದ ಶಕುಂತಲಾ ಬೆಲ್ಲದ ಅವರನ್ನು ಶ್ರೀ ವೀರ ಭದ್ರೇಶ್ವರ ಟ್ರಸ್ಟಿನ ಪರವಾಗಿ ಸನ್ಮಾನಿಸಲಾಯಿತು. ದೇವಸ್ಥಾನದ ಸಂಚಾಲಕರಾದ ಎಂ. ಎಸ್. ಮಠ ಅವರು ಸ್ವಾಗತಿಸಿ, ವಂದಿಸಿದರು. ಶಂಕರಗೌಡ ಪಾಟೀಲ ನಿರೂಪಿಸಿದರು. ಚಂದ್ರಶೇಖರ ಬಡಿಗೇರ, ಅಣ್ಣಪ್ಪ ಪಾಟೀಲ, ಭರಮಗೌಡ್ರ ಪಾಟೀಲ ಸಂಗೀತ ಸೇವೆ ಸಲ್ಲಿಸಿದರು.


ಹುನುಗುಂದ: ತಾಲೂಕಿನ ಚಿತ್ರವಾಡಗಿ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ನಡೆದ 428ನೇ ಶಿವಾನುಭವ ಸಮಾರಂಭದಲ್ಲಿ ವಿ ಎಂ ಬ್ಯಾಂಕಿನ ನೂತನ ಅಧ್ಯಕ್ಷ ಮಹಾಂತೇಶ ಆವಾರಿ, ಉಪಾಧ್ಯಕ್ಷೆ ಶಕುಂತಲಾ ಬೆಲ್ಲದ ಅವರನ್ನು ಪೂಜ್ಯ ಶಂಕರರಾಜೇಂದ್ರ ಶ್ರೀಗಳು ಸತ್ಕರಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top