ಮಂಗಳೂರಿನಲ್ಲಿ ನೂತನ 'ಸ್ಫೂರ್ತಿ ಅಕ್ಲಿನ್ ಸ್ಪೆಷಾಲಿಟಿ ಕ್ಲಿನಿಕ್' ಉದ್ಘಾಟನೆ

Upayuktha
0




ಮಂಗಳೂರು: ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡುವ ಉದ್ದೇಶದಿಂದ ನಗರದ ಬಲ್ಲಾಳ್‌ಬಾಗ್‌ನ ಎಂ.ಜಿ. ರಸ್ತೆಯಲ್ಲಿರುವ ಇನ್‌ಲ್ಯಾಂಡ್ ಅವೆನ್ಯೂ ಕಟ್ಟಡದ ನೆಲಮಹಡಿಯಲ್ಲಿ ನೂತನವಾಗಿ ಆರಂಭಿಸಲಾಗಿರುವ 'ಸ್ಫೂರ್ತಿ ಅಕ್ಲಿನ್ ಸ್ಪೆಷಾಲಿಟಿ ಕ್ಲಿನಿಕ್' (Spoorthi Aklin Speciality Clinic) ಇಂದು (ಜುಲೈ 5, ಭಾನುವಾರ) ಬೆಳಿಗ್ಗೆ 11:30 ಕ್ಕೆ ಅದ್ಧೂರಿಯಾಗಿ ಉದ್ಘಾಟನೆಗೊಂಡಿತು.


ಗಣ್ಯರಿಂದ ಉದ್ಘಾಟನೆ

ಎ.ಜೆ. ಸಮೂಹ ಸಂಸ್ಥೆಗಳ ಹಾಗೂ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷರಾದ ಡಾ. ಎ. ಜೆ. ಶೆಟ್ಟಿ ಅವರು ದೀಪ ಬೆಳಗಿಸುವ ಮೂಲಕ ನೂತನ ಸ್ಪೆಷಾಲಿಟಿ ಕ್ಲಿನಿಕ್ ಅನ್ನು ಉದ್ಘಾಟಿಸಿ, ಸಂಸ್ಥೆಯ ವೈದ್ಯಕೀಯ ಸೇವೆಗೆ ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಮತ್ತು ಇನ್‌ಲ್ಯಾಂಡ್ ಗ್ರೂಪ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಿರಾಜ್ ಅಹಮದ್ ಅವರು ಪಾಲ್ಗೊಂಡು ನೂತನ ಕ್ಲಿನಿಕ್‌ಗೆ ಮತ್ತು ಅದರ ಸಿಬ್ಬಂದಿಗೆ ಯಶಸ್ಸನ್ನು ಕೋರಿದರು.


ಇದೇ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಸಂಘದ (IMA) ಕರ್ನಾಟಕ ರಾಜ್ಯ ಶಾಖೆಯ ರಾಜ್ಯ ಹಿರಿಯ ಉಪಾಧ್ಯಕ್ಷ ಡಾ. ಎಂ. ಅಣ್ಣಯ್ಯ ಕುಲಾಲ್ ಉಲ್ತೂರ್ ಅವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶೋಭೆ ತಂದರು.


ಸ್ಫೂರ್ತಿ ಅಕ್ಲಿನ್ ಸ್ಪೆಷಾಲಿಟಿ ಕ್ಲಿನಿಕ್ ಹಾಗೂ ಸ್ಫೂರ್ತಿ ಮೆಡಿಕಲ್ ಅಕಾಡೆಮಿಯ ನಿರ್ದೇಶಕರಾದ ಡಾ. ಜ್ಯೋತಿ ಜಗದೀಶ್, ಪ್ರಮುಖ ವೈದ್ಯರುಗಳಾದ ಡಾ. ದರ್ಶನ್ ಬಿ.ಎಂ., ಡಾ. ಸ್ವಾತಿ ಜೆ. ಹಾಗೂ ಮೂಳೆರೋಗ ತಜ್ಞರಾದ ಡಾ. ಸೂರಜ್ ರೇವಣ್ಕರ್ ಸೇರಿದಂತೆ ಕ್ಲಿನಿಕ್‌ನ ಎಲ್ಲಾ ತಜ್ಞ ವೈದ್ಯರು ಹಾಗೂ ಸ್ಫೂರ್ತಿ ಮೆಡಿಕಲ್ ಅಕಾಡೆಮಿಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


ಗುಣಮಟ್ಟದ ಆರೋಗ್ಯ ರಕ್ಷಣೆಗೆ ಬದ್ಧವಾಗಿರುವ ಈ ಕ್ಲಿನಿಕ್, ಮಂಗಳೂರಿನ ಜನತೆಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top