ಆರಂಭಿಕ ಬೆಲೆ ₹35,990, ಹೊಸ ಪ್ರಚಾರ ಅಭಿಯಾನ ಆರಂಭ
ಮಂಗಳೂರು, ಜುಲೈ 5: ಗೃಹೋಪಯೋಗಿ ಉಪಕರಣಗಳ ವಲಯದ ಜಾಗತಿಕ ದೈತ್ಯ ಹಾಗೂ ಸತತ 17 ವರ್ಷಗಳಿಂದ ವಿಶ್ವದ ನಂಬರ್ 1 ಬ್ರ್ಯಾಂಡ್ ಆಗಿ ಹೊರಹೊಮ್ಮಿರುವ ಹೈಯರ್ ಅಪ್ಲೈಯನ್ಸಸ್ ಇಂಡಿಯಾ, ಗೃಹ ಮನೋರಂಜನಾ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆದಿದೆ. ಗ್ರಾಹಕರಿಗೆ ಸಿನಿಮಾ ಮಂದಿರದಂತಹ ದೃಶ್ಯ ವೈಭವ ಹಾಗೂ ಅತ್ಯುತ್ತಮ ಧ್ವನಿ ಅನುಭವ ನೀಡಲು ವಿನ್ಯಾಸಗೊಳಿಸಲಾದ ತನ್ನ ಮುಂದಿನ ಪೀಳಿಗೆಯ ಸ್ಮಾರ್ಟ್ ಟಿವಿ ಶ್ರೇಣಿ ಹೆಚ್‌ಕ್ಯೂಎಲ್‌ಇಡಿ ಪಿ7 ಪ್ರೊ ಸರಣಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸುವ ಹೊಸ ಅಭಿಯಾನವನ್ನೂ ಸಂಸ್ಥೆ ಆರಂಭಿಸಿದೆ.
ಈ ಕುರಿತು ಮಾತನಾಡಿದ ಹೈಯರ್ ಅಪ್ಲೈಯನ್ಸಸ್ ಇಂಡಿಯಾದ ಸಿಇಓ ಎನ್.ಎಸ್. ಸತೀಶ್ ಅವರು, "ಇಂದಿನ ಭಾರತೀಯ ಗ್ರಾಹಕರು ಹೆಚ್ಚು ಸೊಗಸಾದ ಮತ್ತು ವೈಯಕ್ತೀಕರಿಸಿದ ಮನೋರಂಜನಾ ಅನುಭವವನ್ನು ಬಯಸುತ್ತಿದ್ದಾರೆ. ಈ ನಿಟ್ಟಿನಲ್ಲಿ, ಗ್ರಾಹಕರ ಆಧುನಿಕ ಜೀವನಶೈಲಿಗೆ ಪೂರಕವಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅತ್ಯಂತ ಸುಲಭವಾಗಿ ಬಳಸುವ ರೀತಿಯಲ್ಲಿ ನಾವು ಈ ಪಿ7 ಪ್ರೊ ಸರಣಿಯನ್ನು ವಿನ್ಯಾಸಗೊಳಿಸಿದ್ದೇವೆ" ಎಂದು ಹೇಳಿದ್ದಾರೆ.
ಈ ಹೊಸ ಸರಣಿಯ ಸ್ಮಾರ್ಟ್ ಟಿವಿಗಳಲ್ಲಿ ಅಳವಡಿಸಲಾಗಿರುವ ಇಂಟಿಗ್ರೇಟೆಡ್ ಸಬ್‌ವೂಫರ್ ಒಳಗೊಂಡ 50ಡಬ್ಲ್ಯೂ ಸಾಮರ್ಥ್ಯದ 2.1 ಚಾನೆಲ್ ಸ್ಪೀಕರ್ ಸಿಸ್ಟಮ್ ಪ್ರಮುಖ ಆಕರ್ಷಣೆಯಾಗಿದೆ. ಇದು ಅತ್ಯಂತ ಆಳವಾದ ಬೇಸ್ ಸ್ಪಷ್ಟವಾದ ಧ್ವನಿ ಮತ್ತು ಇಡೀ ಕೋಣೆಯನ್ನು ತುಂಬುವ ಶ್ರೀಮಂತ ಧ್ವನಿಯನ್ನು ಹೊರಹೊಮ್ಮಿಸುವ ಮೂಲಕ, ಮನೆಯಲ್ಲೇ ಸಿನಿಮಾ ಥಿಯೇಟರ್ ವಾತಾವರಣವನ್ನು ಸೃಷ್ಟಿಸಲಿದೆ. ಇದು ಪ್ರತಿಯೊಂದು ಚಲನಚಿತ್ರ, ಕ್ರೀಡಾ ಪಂದ್ಯ ಮತ್ತು ಸಂಗೀತದ ಪ್ರದರ್ಶನವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತದೆ. ಇದಕ್ಕೆ ಪೂರಕವಾಗಿ ಡಾಲ್ಬಿ ಅಟ್ಮಾಸ್ ಮತ್ತು ಟೋಟಲ್ ಸಾನಿಕ್ಸ್ ತಂತ್ರಜ್ಞಾನಗಳು ಧ್ವನಿಯ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸಲಿದ್ದು, ಈ ವಿಭಾಗದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಲಿದೆ.
ಹೆಚ್‌ಕ್ಯೂಎಲ್‌ಇಡಿ ಡಿಸ್ಪ್ಲೇ ತಂತ್ರಜ್ಞಾನ ಹೊಂದಿರುವ ಈ ಟಿವಿಗಳು ಶೇ 93 ರಷ್ಟು ಡಿಸಿಐ-ಪಿ3 ಕಲರ್ ಗ್ಯಾಮಟ್ ಬೆಂಬಲದೊಂದಿಗೆ ಬರಲಿವೆ. ಇದರಿಂದಾಗಿ ಸೊಗಸಾದ ಬಣ್ಣಗಳನ್ನು ಕಾಣಿಸಲಿವೆ. ಡಾಲ್ಬಿವಿಷನ್, ಎಚ್ ಡಿ ಆರ್10+ ಹಾಗೂ ಎಐ ಪಿಕ್ಚರ್ ಕ್ವಾಲಿಟಿ ತಂತ್ರಜ್ಞಾನಗಳು ದೃಶ್ಯಾವಣಿಗಳನ್ನು ಅತ್ಯುತ್ತಮಗೊಳಿಸುವುದರಿಂದ ಪ್ರತಿಯೊಂದು ದೃಶ್ಯವೂ ಹೆಚ್ಚು ಸ್ಪಷ್ಟವಾಗಿ ಮತ್ತು ಜೀವಂತಿಕೆಯಿಂದ ಕೂಡಿರಲಿದೆ.
ಗೂಗಲ್ ಟಿವಿ ಸಾಫ್ಟ್ ವೇರ್ ಹೊಂದಿರುವ ಈ ಸರಣಿಯಲ್ಲಿ ಗೂಗಲ್‌ನ ಜೆಮಿನಿ ವಾಯ್ಸ್ ಅಸಿಸ್ಟೆಂಟ್ ಅನ್ನು ನೀಡಲಾಗಿದೆ. ಹ್ಯಾಂಡ್ಸ್-ಫ್ರೀ ವಾಯ್ಸ್ ಕಂಟ್ರೋಲ್ ಮೂಲಕ ಕಾರ್ಯನಿರ್ವಹಿಸುವ ಈ ಟಿವಿ, ಮಾಹಿತಿ ಮತ್ತು ಮನೋರಂಜನಾ ಕಾರ್ಯಕ್ರಮಗಳನ್ನು ಹುಡುಕಲು ಹೆಚ್ಚು ಸುಲಭವಾದ ಮಾರ್ಗ ಕಲ್ಪಿಸಿದೆ. ಜೆಮಿನಿ ಅಸಿಸ್ಟೆಂಟ್ ಬಳಕೆದಾರರ ಇಷ್ಟಾನಿಷ್ಟಗಳನ್ನು ಅರಿತು ಕಸ್ಟಮೈಸ್ ಮಾಡಿದ ಪ್ರತಿಕ್ರಿಯೆಗಳನ್ನು ನೀಡುತ್ತದೆ. ಹೊಸ ಶೋ ಹುಡುಕುವುದು, ಆಸಕ್ತಿಯ ವಿಷಯವನ್ನು ಹುಡುಕುವುದು ಅಥವಾ ಮನೆಯ ಸ್ಮಾರ್ಟ್ ಉಪಕರಣಗಳನ್ನು ನಿಯಂತ್ರಿಸುವುದು ಇದರಿಂದ ಸುಲಭವಾಗಲಿದೆ. ದೊಡ್ಡ ಪರದೆಯ ಮೇಲೆ ದೃಶ್ಯಗಳು, ವೀಡಿಯೊಗಳು ಮತ್ತು ಪಠ್ಯವನ್ನು ಒಟ್ಟಿಗೆ ತರುವ ಮೂಲಕ, ಬಳಕೆದಾರರು ತಾವು ಬಯಸಿದ್ದನ್ನು ಸುಲಭವಾಗಿ ಕಂಡುಕೊಳ್ಳಲು ಜೆಮಿನಿ ಸಹಾಯ ಮಾಡುತ್ತದೆ. 2 ಜಿಬಿ ರಾಮ್ ಮತ್ತು 32 ಜಿಬಿ ಇಂಟರ್ನಲ್ ಸ್ಟೋರೇಜ್ ನೀಡಲಾಗಿದೆ.
ಹೈಯರ್ ಹೆಚ್‌ಕ್ಯೂಎಲ್‌ಇಡಿ ಪಿ7 ಪ್ರೊ ಸರಣಿಯು ಒಟ್ಟು 5 ಗಾತ್ರಗಳಲ್ಲಿ (75, 65, 55, 50 ಮತ್ತು 43 ಇಂಚು) ಲಭ್ಯವಿದ್ದು, ಇದರ ಆರಂಭಿಕ ಬೆಲೆ ₹35,990 ಆಗಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


