ಎಸ್‌ಎಸ್‌ಬಿ ಸಂದರ್ಶನ ಕುರಿತು ಸಂವಾದಾತ್ಮಕ ಕಾರ್ಯಾಗಾರ

Upayuktha
0

 


ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎನ್‌ಸಿಸಿ 6 ಕೆಎಆರ್ ನೇವಲ್ ಸಬ್‌ಯೂನಿಟ್‌ನ ಕೆಡೆಟ್‌ಗಳು ಜುಲೈ 15ರಂದು ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಎಸ್‌ಎಸ್‌ಬಿ (ಸರ್ವಿಸಸ್ ಸೆಲೆಕ್ಷನ್ ಬೋರ್ಡ್) ಸಂದರ್ಶನ ಕುರಿತು ಸಂವಾದಾತ್ಮಕ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಎಸ್‌ಎಸ್‌ಬಿ ಆಯ್ಕೆ ಪ್ರಕ್ರಿಯೆಯ ವಿವಿಧ ಹಂತಗಳು, ಅಭ್ಯರ್ಥಿಗಳಿಂದ ನಿರೀಕ್ಷಿಸಲಾಗುವ ಗುಣಗಳು ಹಾಗೂ ಸಂದರ್ಶನಕ್ಕೆ ತಯಾರಾಗುವ ವಿಧಾನಗಳ ಕುರಿತು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಲಾಯಿತು. ಅಧಿವೇಶನವು ವಿದ್ಯಾರ್ಥಿಗಳಿಗೆ ಎಸ್‌ಎಸ್‌ಬಿ ಆಯ್ಕೆ ಪ್ರಕ್ರಿಯೆಯ ಕುರಿತು ಮೌಲ್ಯಯುತ ಅರಿವು ಮೂಡಿಸುವಲ್ಲಿ ಯಶಸ್ವಿಯಾಯಿತು ಹಾಗೂ ಸಶಸ್ತ್ರ ಪಡೆಗಳಲ್ಲಿ ವೃತ್ತಿಜೀವನವನ್ನು ಪರಿಗಣಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿತು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top