ನವದೆಹಲಿ: ಕೊಲಂಬಿಯಾದ ಬುಕರಾಮಂಗಾದಲ್ಲಿ ಈ ತಿಂಗಳ 4 ರಿಂದ 12 ರವರೆಗೆ ನಡೆದ 56 ನೇ ಇಂಟರ್ನ್ಯಾಷನಲ್ ಫಿಸಿಕ್ಸ್ ಒಲಿಂಪಿಯಾಡ್ (IPhO) 2026 ರಲ್ಲಿ ಐದು ಜನ ಭಾರತೀಯ ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
ಪುಣೆಯ ಕನಿಷ್ಕ್ ಜೈನ್, ಇಂದೋರ್‌ನ ರಿದ್ದೇಶ್ ಅನಂತ್ ಬೆಂಡಾಲೆ, ನವದೆಹಲಿಯ ರಿಷಿತ್ ಗರ್ಗ್, ಮುಂಬೈನ ಶ್ರೇಷ್ಠ ಸುರೈಯಾ ಮತ್ತು ಅಹಮದಾಬಾದ್‌ನ ಸ್ವರಿತ್ ಜೋಶಿ ಚಿನ್ನದ ಪದಕ ವಿಜೇತರಾಗಿದ್ದಾರೆ.
ಈ ಸಾಧನೆಯೊಂದಿಗೆ, 87 ದೇಶಗಳ 381 ವಿದ್ಯಾರ್ಥಿಗಳಲ್ಲಿ ಭಾರತವು ರಷ್ಯಾ, ಚೀನಾ, ಕಝಾಕಿಸ್ತಾನ್, ದಕ್ಷಿಣ ಕೊರಿಯಾ ಮತ್ತು ತೈವಾನ್ ದೇಶಗಳೊಂದಿಗೆ ಜಂಟಿಯಾಗಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
ಈ ಅತ್ಯುತ್ತಮ ಪ್ರದರ್ಶನವು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನ ರಾಷ್ಟ್ರೀಯ ಕೇಂದ್ರವಾಗಿರುವ ಹೋಮಿ ಭಾಭಾ ಸೆಂಟರ್ ಫಾರ್ ಸೈನ್ಸ್ ಎಜುಕೇಶನ್ ಮುನ್ನಡೆಸುತ್ತಿರುವ ಭಾರತದ ಒಲಿಂಪಿಯಾಡ್ ಕಾರ್ಯಕ್ರಮದ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ.
ಪರಮಾಣು ಇಂಧನ ಇಲಾಖೆಯ ಕಾರ್ಯದರ್ಶಿ ಡಾ. ಅಜಿತ್ ಕುಮಾರ್ ಮೊಹಾಂತಿ ಅವರು ಪದಕ ವಿಜೇತರನ್ನು ಅಭಿನಂದಿಸಿದ್ದು, ಅವರ ಈ ಗಮನಾರ್ಹ ಸಾಧನೆ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


