ಕಲಬುರಗಿ: ಬ್ಯಾಂಕ್ ಆಫ್ ಬರೋಡ ಇದರ 119ನೇ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಕಲಬುರಗಿಯ ಉದ್ಯಮಿಗಳಿಂದ ಬ್ಯಾಂಕ್ ಹಿರಿಯ ಅಧಿಕಾರಿಗಳನ್ನು ಅಭಿನಂದಿಸಲಾಯಿತು.
ಕಲಬುರಗಿಯ ನಾಗೇನಹಳ್ಳಿ ರಿಂಗ್ ರಸ್ತೆಯ ಹೋಟೆಲ್ ಬೃಂದಾವನ ಗ್ರ್ಯಾಂಡ್ ನ "ಬಲ್ ದೇವ್" ಸಭಾಂಗಣದಲ್ಲಿ ಸೋಮವಾರ (ಜುಲೈ 20ರಂದು) ನಡೆದ ಬ್ಯಾಂಕ್ ಆಫ್ ಬರೋಡದ 119ನೆಯ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ಬ್ಯಾಂಕಿನ ಪ್ರಾದೇಶಿಕ ಮುಖ್ಯಸ್ಥರಾದ ಅಮಿತ್ ಶೆಟ್ಟಿ ಹಾಗೂ ಪ್ರಾದೇಶಿಕ ಉಪ ಮುಖ್ಯಸ್ಥರಾದ ಭೀಮಾಶಂಕರ್ ಅವರನ್ನು ಕಡೇಚೂರ್ ಗ್ರೂಪ್ ಆಫ್ ಹೋಟೆಲ್ ಮತ್ತು ನಗರದ ಉದ್ಯಮಿಗಳ ವತಿಯಿಂದ ಶಾಲು ಹಾರ ನೀಡಿ ಸನ್ಮಾನಿಸಿ ಕೇಕ್ ಕತ್ತರಿಸುವುದರ ಮೂಲಕ ಹಾರ್ದಿಕವಾಗಿ ಅಭಿನಂದಿಸಲಾಯಿತು.
ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ಗಳ ಬ್ಯಾಂಕ್ ಆಫ್ ಬರೋಡದಲ್ಲಿ ವಿಲೀನ ಮಾಡಿದ ಮೇಲೆ ಬ್ಯಾಂಕ್ ಆಫ್ ಬರೋಡ ತನ್ನ ಗ್ರಾಹಕರಿಗೆ ಅತ್ಯಂತ ಉತ್ತಮ ಸೇವೆ ನೀಡಿ ಕಲ್ಯಾಣ ಕರ್ನಾಟಕ ಭಾಗದ ಹಾಗೂ ವಿಜಯಪುರ, ಬಾಗಲಕೋಟೆ ಜಿಲ್ಲೆಗಳನ್ನು ಒಳಗೊಂಡಂತೆ ಸುಮಾರು 54 ಶಾಖೆಗಳ ಮೂಲಕ ಉತ್ತಮ ಸೇವೆ ನೀಡಿ ಆರ್ಥಿಕ ಅಭಿವೃದ್ಧಿಗೆ ಕೈಜೋಡಿಸಿರುವುದಕ್ಕೆ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಅಭಿನಂದನೆ ವ್ಯಕ್ತಪಡಿಸಿದರು. ರಾಷ್ಟ್ರದ ಆರ್ಥಿಕ ಪ್ರಗತಿಯಲ್ಲಿ ಈ ಭಾಗದಲ್ಲಿರುವ ಬ್ಯಾಂಕ್ ಆಫ್ ಬರೋಡದ ಶಾಖೆಗಳು ಇನ್ನಷ್ಟು ಉತ್ತಮ ಸೇವೆ ನೀಡುವಂತೆ ಪ್ರಯತ್ನಿಸಲಿ ಎಂದು ಶುಭ ಹಾರೈಸಿದರು.
ಅಭಿನಂದನಾ ಸಮಾರಂಭದಲ್ಲಿ ಕಡೇಚೂರ್ ಗ್ರೂಪ್ ನಾ ನಿರ್ದೇಶಕ ಮಹೇಶ್ ಕಡೇಚೂರ್, ಉದ್ಯಮಿ ಸಾಹಿಲ್ ಜೈನ್, ಜನರಲ್ ಮ್ಯಾನೇಜರ್ ಚೆನ್ನಬಸವ ತೊರವಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬ್ಯಾಂಕಿನ ಸಿಬ್ಬಂದಿಗಳು ಹಾಗೂ ಕುಟುಂಬ ವರ್ಗದವರು ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

