ಎಲೆಕ್ಟ್ರಿಕ್ ವಾಹನ ಖರೀದಿಗೆ ಉತ್ತೇಜನ

Upayuktha
0



ಮಂಗಳೂರು: ಭಾರತದಾದ್ಯಂತ ಪೆಟ್ರೋಲ್ ಬೆಲೆಗಳು ನಿರಂತರವಾಗಿ ಹೊರೆಯಾಗುತ್ತಿರುವ ಹಿನ್ನೆಲೆಯಲ್ಲಿ, ದೇಶಾದ್ಯಂತ ಇರುವ ದ್ವಿಚಕ್ರ ವಾಹನ ಖರೀದಿದಾರರಿಗೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಬದಲಾಗುವುದನ್ನು ಇನ್ನಷ್ಟು ಸುಲಭ ಮತ್ತು ಲಾಭದಾಯಕವಾಗಿಸುವ ಉದ್ದೇಶದಿಂದ ಅಲ್ಟ್ರಾವಯಲಟ್ ಸಂಸ್ಥೆ ಹೊಸ ಯೋಜನೆ ಪ್ರಕಟಿಸಿದೆ.


ಈ ಯೋಜನೆಯಡಿ, ಸವಾರರು ತಮ್ಮ ಹಿಂದಿನ ವಾಹನ ಚಾಲನೆಯ ಇತಿಹಾಸ ಮತ್ತು ಬಳಕೆಯ ಆಧಾರದಲ್ಲಿ ಅಲ್ಟ್ರಾವಲಯಟ್ ಮೋಟಾರ್‍ಸೈಕಲ್ ಖರೀದಿಯ ಮೇಲೆ ರೂ. 30,000 ವರೆಗಿನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಪೆಟ್ರೋಲ್ ವಾಹನಗಳಲ್ಲಿ ಈಗಾಗಲೇ ಕ್ರಮಿಸಿರುವ ಕಿಲೋಮೀಟರ್‍ಗಳನ್ನು ವಾಹನ ಖರೀದಿಯ ಲಾಭವಾಗಿ ಪರಿವರ್ತಿಸಲಾಗುತ್ತದೆ.


ಕಾರ್ಯಕ್ಷಮತೆ, ತಂತ್ರಜ್ಞಾನ, ವಿಶ್ವಾಸಾರ್ಹತೆ ಅಥವಾ ಚಾಲನಾ ಅನುಭವದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ಮರುಕಳಿಸುವ ಇಂಧನ ವೆಚ್ಚಗಳಿಂದ ಮುಕ್ತಿ ಪಡೆಯುವುದು ಇದು ಅತ್ಯುತ್ತಮ ಮಾರ್ಗವಾಗಿದೆ ಎಂದು ಸಂಸ್ಥೆಯ ಸಿಇಒ ಮತ್ತು ಸಹ-ಸಂಸ್ಥಾಪಕ ನಾರಾಯಣ್ ಸುಬ್ರಹ್ಮಣ್ಯಂ ಹೇಳಿದ್ದಾರೆ.


ನಿರಂತರ ಉತ್ಪನ್ನ ನಾವೀನ್ಯತೆ, ರಿಟೇಲ್ ವ್ಯಾಪಾರದ ವಿಸ್ತರಣೆ, ಹೆಚ್ಚುತ್ತಿರುವ ಗ್ರಾಹಕರ ಬಳಕೆ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ನಿರಂತರ ಪ್ರಗತಿಯ ಮೂಲಕ ಭಾರತದ ಪ್ರಮುಖ ಇಗಿ ಬ್ರಾಂಡ್ ಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುವುದನ್ನು ಅಲ್ಟ್ರಾವಯಲೆಟ್ ಮುಂದುವರಿಸಿದೆ. ಈ ಕ್ಷೇತ್ರವು ಬೆಳೆಯುತ್ತಿರುವಂತೆ, ಸುಧಾರಿತ ತಂತ್ರಜ್ಞಾನ, ರೋಮಾಂಚಕ ಕಾರ್ಯಕ್ಷಮತೆ ಮತ್ತು ಅತ್ಯುತ್ತಮ ಮಾಲೀಕತ್ವದ ಮೌಲ್ಯವನ್ನು ಸಂಯೋಜಿಸುವ ಉತ್ಪನ್ನಗಳನ್ನು ತಯಾರಿಸುವುದರ ಮೇಲೆ ಕಂಪನಿ ಗಮನ ಹರಿಸಿದೆ ಎಂದು ಪ್ರಕಟಣೆ ವಿವರಿಸಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top