ತೆಂಕಿಲದಲ್ಲಿ ಧರ್ಮಾಭ್ಯುದಯ – ಧರ್ಮ ಶಿಕ್ಷಣ ಸಮಿತಿಯ ಸಾಮಾನ್ಯ ಸಭೆ

Upayuktha
0

 ಸದ್ಯದಲ್ಲೇ ಓರ್ವ ಧರ್ಮ ಶಿಕ್ಷಣ ಪ್ರಸಾರಕರ ನೇಮಕಾತಿ : ಸುಬ್ರಮಣ್ಯ ನಟ್ಟೋಜ



ಪುತ್ತೂರು: ತಾಲೂಕು ಧರ್ಮ ಶಿಕ್ಷಣ ಸಮಿತಿ – ಧರ್ಮಾಭ್ಯುದಯದ ಸಾಮಾನ್ಯ ಸಭೆಯು ತೆಂಕಿಲದ ಸ್ವಾಮಿ ಕಲಾ ಮಂದಿರದಲ್ಲಿ ಭಾನುವಾರ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಸುಬ್ರಮಣ್ಯ ನಟ್ಟೋಜ ಅವರು ಶೃಂಗೇರಿ ಜಗದ್ಗುರುಗಳ ಪ್ರೇರಣೆ ಮಾರ್ಗದರ್ಶನ ಹಾಗೂ ಆಶೀರ್ವಾದಗಳಿಂದಾಗಿ ಧರ್ಮ ಶಿಕ್ಷಣ ವ್ಯವಸ್ಥೆ ಅತ್ಯಂತ ಸದೃಢವಾಗಿ ಮುನ್ನಡೆಯುತ್ತಿದೆ. ಹಿಂದೂ ಸಮಾಜದ ಮಕ್ಕಳಿಗೆ ನಮ್ಮ ಆಚಾರ ವಿಚಾರ ಪರಂಪರರೆಗಳ ವಿಚಾರಗಳು ಲಭ್ಯವಾಗುತ್ತಿವೆ ಎಂದರು.


ಕಳೆದ ಒಂದು ವರ್ಷಗಳಿಂದ ಪುತ್ತೂರು ಭಾಗದ ಹಲವು ಕಡೆಗಳಲ್ಲಿ ನಿರಂತರವಾಗಿ ಧರ್ಮ ಶಿಕ್ಷಣ ಜಾರಿಯಲ್ಲಿದೆ. ಅಸಂಖ್ಯ ಮಕ್ಕಳು ಇದರ ಪ್ರಯೋಜನಗಳನ್ನು ಪಡೆದುಕೊಳ್ಳುವಂತಾಗಿದೆ. ಆದರೆ ಇದು ಕೇವಲ ಪುತ್ತೂರಿಗೆ ಸೀಮಿತವಾಗಬಾರದು. ಇನ್ನಷ್ಟು ವ್ಯಾಪಕವಾಗಿ ಬೆಳವಣಿಗೆಯನ್ನು ಕಾಣುವಂತಾಗಬೇಕು. ಧರ್ಮ ಶಿಕ್ಷಣವನ್ನು ವೇಗವಾಗಿ ವಿಸ್ತೃತಗೊಳಿಸುವುದಕ್ಕಾಗಿ ಒಬ್ಬರು ಧರ್ಮ ಶಿಕ್ಷಣ ಪ್ರಸಾರಕರನ್ನು ನೇಮಕ ಮಾಡಿಕೊಳ್ಳಬೇಕಾಗಿದೆ. ಸೂಕ್ತ ಸಂಭಾವನೆಗಳೊಂದಿಗೆ ಒಬ್ಬರು ವ್ಯಕ್ತಿಯನ್ನು ನೇಮಕ ಮಾಡಿದಾಗ ಧರ್ಮ ಶಿಕ್ಷಣ ಪ್ರಸಾರ ಮತ್ತಷ್ಟು ವೇಗವನ್ನು ಕಾಣಬಹುದು ಎಂದು ಅಭಿಪ್ರಾಯಪಟ್ಟರು.


ಧರ್ಮಾಭ್ಯುದಯದ ಅಧ್ಯಕ್ಷ ದಂಬೆಕಾನ ಸದಾಶಿವ ರೈ ಮಾತನಾಡಿ ಪುತ್ತೂರನ್ನೂ ಮೀರಿ ನಾನಾ ಭಾಗಗಳ ಭಜನಾ ಮಂದಿರ, ದೇವಸ್ಥಾನವೇ ಮೊದಲಾದ ಹಿಂದೂ ಪರಂಪರೆಯ ತಾಣಗಳಿಗೆ ಭೇಟಿಕೊಟ್ಟು ಅಲ್ಲಿ ಧರ್ಮ ಶಿಕ್ಷಣವನ್ನು ಆರಂಭಿಸಬೇಕಾಗಿದೆ. ಶೃಂಗೇರಿ ಜಗದ್ಗುರುಗಳು ನಮಗೆ ತೋರಿದ ಹಾದಿಯಲ್ಲಿ ಪ್ರತಿಯೊಬ್ಬರೂ ಮುಂದುವರಿಯಬೇಕು ಎಂದರು.


ಸಭೆಯಲ್ಲಿ ಧರ್ಮಾಭ್ಯುದಯದ ಉಪಾಧ್ಯಕ್ಷ ಜಯಸೂರ್ಯ ರೈ ಮಾದೋಡಿ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಬೋರ್ಕರ್, ಕಾರ್ಯದರ್ಶಿ ಶೈಲೇಶ್ ಜಿ. ರಾವ್, ಖಜಾಂಜಿ ಮಾಧವ ಸ್ವಾಮಿ,  ಸದಸ್ಯರಾದ ಶಿವಕುಮಾರ್ ಪಡುಮಲೆ, ಕವಿತಾ ಎಚ್.ರೈ, ರಚನಾ ಕೆ, ಸವಿತಾ ಎಸ್, ಪಾರ್ವತಿ ಸುಮ, ಗಣೇಶ ಪ್ರಸಾದ್ ಎ, ಮಾಧವ ನಾಯಕ್ ಕೆ, ರಾಕೇಶ ಕುಮಾರ್ ಕಮ್ಮಜೆ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top