ಬಾಲ್ಯದ ಗೆಳೆತನಕ್ಕೆ ಸರಿಸಾಟಿಯಿಲ್ಲ

Upayuktha
0

  


ಬಾಲ್ಯ ಎಂದರೆ ಚಿಂತೆಗಳಿಲ್ಲದ, ನಗುವಿನಿಂದ ತುಂಬಿದ ಸುಂದರ ದಿನಗಳು. ಆ ದಿನಗಳ ಜೊತೆ ಬೆಸೆದುಕೊಂಡಿರುವ ಸ್ನೇಹಿತರು ನಮ್ಮ ಜೀವನದ ಮರೆಯಲಾಗದ ಭಾಗವಾಗಿರುತ್ತಾರೆ. ಶಾಲೆಯ ದಿನಗಳಲ್ಲಿ ಒಟ್ಟಿಗೆ ಆಟವಾಡಿ, ಜಗಳವಾಡಿ, ಮತ್ತೆ ಒಂದಾಗುತ್ತಿದ್ದ ಆ ಸ್ನೇಹ ಇಂದಿಗೂ ಮನಸ್ಸಿನಲ್ಲಿ ಹಾಗೆಯೇ ಉಳಿದಿರುತ್ತದೆ.


ಬಾಲ್ಯದ ಸ್ನೇಹಕ್ಕೆ ಯಾವುದೇ ಸ್ವಾರ್ಥವಿರುವುದಿಲ್ಲ. ಯಾರು ಶ್ರೀಮಂತ, ಯಾರು ಬಡವ, ಯಾರು ಚೆನ್ನಾಗಿ ಓದುತ್ತಾರೆ ಎಂಬುದಕ್ಕಿಂತ, ಒಟ್ಟಿಗೆ ಸಮಯ ಕಳೆಯುವುದೇ ಮುಖ್ಯವಾಗಿರುತ್ತದೆ. ಸಣ್ಣ ವಿಷಯಕ್ಕೆ ಜಗಳವಾಡಿದರೂ, ಕೆಲವೇ ಕ್ಷಣಗಳಲ್ಲಿ ಎಲ್ಲವನ್ನೂ ಮರೆತು ಮತ್ತೆ ಸ್ನೇಹಿತರಾಗುತ್ತಿದ್ದೆವು.


ಕಾಲೇಜು ಜೀವನಕ್ಕೆ ಬಂದಾಗ ಹೊಸ ಸ್ನೇಹಿತರು ಸಿಗುತ್ತಾರೆ. ಜೀವನವೂ ಬದಲಾಗುತ್ತದೆ, ನಮ್ಮ ಆದ್ಯತೆಗಳೂ ಬದಲಾಗುತ್ತವೆ. ಕೆಲವರು ನಮ್ಮ ಜೊತೆ ಉಳಿಯುತ್ತಾರೆ, ಇನ್ನು ಕೆಲವರು ದೂರವಾಗುತ್ತಾರೆ. ಆದರೆ ಬಾಲ್ಯದ ಸ್ನೇಹಿತರು ಮಾತ್ರ ನಮ್ಮ ಹಳೆಯ ನೆನಪುಗಳ ಜೊತೆ ಸದಾ ಉಳಿಯುತ್ತಾರೆ.


ವರ್ಷಗಳು ಕಳೆದರೂ ಬಾಲ್ಯದ ಸ್ನೇಹಿತನನ್ನು ಭೇಟಿಯಾದಾಗ, ಮತ್ತೆ ನಾವು ಅದೇ ಬಾಲ್ಯದ ದಿನಗಳಿಗೆ ಹಿಂತಿರುಗಿದಂತೆ ಅನಿಸುತ್ತದೆ. ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ನಗುವ ಆ ಕ್ಷಣಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.


ಜೀವನದಲ್ಲಿ ಎಷ್ಟೇ ಹೊಸ ಸ್ನೇಹಿತರು ಬಂದರೂ, ಬಾಲ್ಯದ ಸ್ನೇಹಿತನ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಏಕೆಂದರೆ ಅವರು ನಮ್ಮ ಬಾಲ್ಯವನ್ನು ಮಾತ್ರ ಹಂಚಿಕೊಂಡವರಲ್ಲ, ನಮ್ಮ ಜೀವನದ ಅತ್ಯಂತ ಸುಂದರವಾದ ನೆನಪುಗಳನ್ನೂ ಹಂಚಿಕೊಂಡವರು.


ಬಾಲ್ಯದ ಸ್ನೇಹ ಬದಲಾಗಬಹುದು, ದೂರವಾಗಬಹುದು ಆದರೆ ಅದರ ನೆನಪು ಮಾತ್ರ ಎಂದಿಗೂ ಮಾಸುವುದಿಲ್ಲ

- ಶ್ರೇಯಾ ಹೆಗ್ಡೆ

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top