ಮಂಗಳೂರು: ಜುಲೈ 29ರಂದು ಕೆನರಾ ನಂದಗೋಕುಲ ಶಾಲೆಯ ವತಿಯಿಂದ ಸುಧೀಂದ್ರ ಸಭಾಭವನದಲ್ಲಿ ಗುರುಪೂರ್ಣಿಮೆಯನ್ನು ಪೋಷಕರ ಸಮ್ಮುಖದಲ್ಲಿ ಆಚರಿಸಲಾಯಿತು. ಭಾರತೀಯ ಸಂಸ್ಕೃತಿಯಲ್ಲಿ ಗುರು ಮತ್ತು ತಂದೆ-ತಾಯಿಗೆ ಇರುವ ಶ್ರೇಷ್ಠ ಸ್ಥಾನವನ್ನು ಸ್ಮರಿಸುವ ಈ ಕಾರ್ಯಕ್ರಮ ಎಲ್ಲರ ಮನಸ್ಸನ್ನು ತಟ್ಟುವಂತಿತ್ತು.
ಮುಖ್ಯೋಪಾಧ್ಯಾಯಿನಿ ಉಜ್ವಲ್ ಮಲ್ಯ ಅವರ ಮಾರ್ಗದರ್ಶನದಲ್ಲಿ ಮಕ್ಕಳು ತಮ್ಮ ತಂದೆ-ತಾಯಿಯ ಪಾದಗಳಿಗೆ ಹೂಗಳನ್ನು ಅರ್ಪಿಸಿ, ಕೃತಜ್ಞತೆಯಿಂದ ನಮಸ್ಕರಿಸಿದರು. ಆ ಕ್ಷಣದಲ್ಲಿ ಅನೇಕ ಪೋಷಕರ ಕಣ್ಣುಗಳು ಸಂತೋಷದ ಕಣ್ಣೀರಿನಿಂದ ತುಂಬಿದವು. ಮಕ್ಕಳ ಪ್ರೀತಿಯ ಸ್ಪರ್ಶದಲ್ಲಿ ಪೋಷಕರ ತ್ಯಾಗ, ಪ್ರೀತಿ ಮತ್ತು ಆಶೀರ್ವಾದದ ಮಹತ್ವ ಎಲ್ಲರ ಹೃದಯವನ್ನು ತಟ್ಟಿತು.
"ಮಾತೃದೇವೋ ಭವ, ಪಿತೃದೇವೋ ಭವ, ಆಚಾರ್ಯದೇವೋ ಭವ" ಎಂಬ ಭಾರತೀಯ ಸಂಸ್ಕೃತಿಯ ಶಾಶ್ವತ ಸಂದೇಶವನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತುವ ಸುಂದರ ಪ್ರಯತ್ನ ಈ ಕಾರ್ಯಕ್ರಮವಾಗಿತ್ತು. ಮಹರ್ಷಿ ವೇದವ್ಯಾಸರ ಜ್ಞಾನಸಂಪತ್ತನ್ನು ಸ್ಮರಿಸುತ್ತಾ, ಗುರುಗಳ ಹಾಗೂ ಪೋಷಕರ ಬಗ್ಗೆ ಗೌರವ, ವಿನಯ, ಕೃತಜ್ಞತೆ ಮತ್ತು ಉತ್ತಮ ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪವನ್ನು ಮಕ್ಕಳು ವ್ಯಕ್ತಪಡಿಸಿದರು.
ಪುಟಾಣಿಗಳು ಶ್ಲೋಕ ಪಠಣ, ಗುರುಪೂರ್ಣಿಮೆ ಹಾಗೂ ವ್ಯಾಸಪೂರ್ಣಿಮೆಯ ಮಹತ್ವವನ್ನು ತಮ್ಮ ಮುಗ್ಧ ಮಾತುಗಳಲ್ಲಿ ವಿವರಿಸಿದರು. ಗಾಯತ್ರಿ ಹಾಗೂ ಪ್ರತಿಮಾ ರಸಪ್ರಶ್ನೆ ನಡೆಸಿದರು. ಸವಿತಾ ನಿರೂಪಿಸಿ, ಭಾಗ್ಯ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


