ಮಂಗಳೂರು: ಸಂಸ್ಕಾರ, ಗುರುಭಕ್ತಿ ಮತ್ತು ಕೃತಜ್ಞತೆಯ ಮಹತ್ವವನ್ನು ಸಾರುವ ಗುರುಪೂರ್ಣಿಮಾ ಕಾರ್ಯಕ್ರಮವನ್ನು ಕೆನರಾ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಶಾಲೆಯ ಮುಖ್ಯೋಪಾಧ್ಯಾಯಿನಿ ತೃಪ್ತಿ ರೈ ಅವರು ಮಾತನಾಡಿ, ತಾಯಿಯೇ ಮಗುವಿನ ಮೊದಲ ಗುರು ಎಂಬ ಸತ್ಯವನ್ನು ವಿವರಿಸಿದರು. ತಾಯಿಯ ಪ್ರೀತಿ, ತ್ಯಾಗ, ಕಾಳಜಿ ಮತ್ತು ಮಾರ್ಗದರ್ಶನವು ಮಗುವಿನ ಜೀವನ ರೂಪಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಶಾಲೆಯ ಶೈಕ್ಷಣಿಕ ವಿಭಾಗದ ಮುಖ್ಯಸ್ಥೆ ಉಜ್ವಲ್ ಮಲ್ಯ ಅವರು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಮಾತೃಪೂಜೆಯನ್ನು ಮಕ್ಕಳು ಶ್ರದ್ಧಾ ಭಕ್ತಿಯಿಂದ ಪೋಷಕರ ಪಾದಗಳಿಗೆ ಹೂವಿನ ದಳಗಳನ್ನು ಅರ್ಪಿಸಿ, ಆರತಿ ಬೆಳಗಿ, ಅವರ ಆಶೀರ್ವಾದ ಪಡೆಯುವಂತೆ ಮಾರ್ಗದರ್ಶನ ನೀಡಿದರು.
ಮಕ್ಕಳಿಂದ ತಾಯಂದಿರಿಗೆ ಸಮರ್ಪಿತವಾದ ಮನಮೋಹಕ ನೃತ್ಯ, ಕಥಾ ನಿರೂಪಣೆ, ಭಜನೆಗಳು ಹಾಗೂ ಶ್ರೀಕೃಷ್ಣ ಪೂಜೆಯು ಕಾರ್ಯಕ್ರಮಕ್ಕೆ ಆಧ್ಯಾತ್ಮಿಕ ಮೆರುಗು ನೀಡಿದವು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


