ಹಾವು ಕಡಿತ ಸಮಸ್ಯೆಗೆ 4ಎ ಕಾರ್ಯತಂತ್ರ

Upayuktha
0

 


ಮಂಗಳೂರು: ವಿಷಪೂರಿತ ಹಾವುಗಳು ಕಚ್ಚಿದಾಗ ನೀಡಲಾಗುವ ಜೀವರಕ್ಷಕ ಹಾವಿನ ವಿಷದ ಪ್ರತಿವಿಷ (ಎಎಸ್‍ವಿ) ತಯಾರಿಕಾ ಕಂಪನಿ ಮ್ಯಾನ್‍ಕೈಂಡ್ ಅಂಗಸಂಸ್ಥೆಯಾಗಿರುವ ಬಿಎಸ್‍ವಿ, ಹಾವು ಕಡಿತದ ಸಮಸ್ಯೆಯನ್ನು ದೇಶಾದ್ಯಂತ ಪರಿಣಾಮಕಾರಿಯಾಗಿ ಬಗೆಹರಿಸಲು ಸಮಗ್ರ ಸ್ವರೂಪದ '4ಎ' ಕಾರ್ಯತಂತ್ರ ಜಾರಿಗೆ ತಂದಿದೆ.


ಜಾಗೃತಿ, ಪ್ರವೇಶ, ಲಭ್ಯತೆ ಮತ್ತು ತ್ವರಿತ ಕ್ರಮಗಳ ಮೇಲೆ ಕೇಂದ್ರೀಕೃತವಾಗಿದೆ. ಹಾವು ಕಡಿತದ ಪ್ರಕರಣಗಳಲ್ಲಿ ತಡೆಗಟ್ಟುವಿಕೆ, ಸಮಯೋಚಿತ ಚಿಕಿತ್ಸೆ ಹಾಗೂ ಚಿಕಿತ್ಸೆಯ ಫಲಿತಾಂಶಗಳನ್ನು ಸುಧಾರಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ ಎಂದು ಬಿಎಸ್‍ವಿ-ದ ಭಾರತ ವಹಿವಾಟಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಒಒ) ಶಿವಾನಿ ಶರ್ಮಾ ದೇಕಾ ತಿಳಿಸಿದ್ದಾರೆ.


ಹಾವು ಕಡಿತದ  ಬಗ್ಗೆ ಗ್ರಾಮೀಣ ಜನರಲ್ಲಿ ಮನೆ ಮಾಡಿರುವ ತಪ್ಪು ಕಲ್ಪನೆಗಳನ್ನು ನಿವಾರಿಸಿ, ವೈಜ್ಞಾನಿಕ ಸಾಕ್ಷ್ಯಾಧಾರಿತ ಪ್ರಥಮ ಚಿಕಿತ್ಸೆ ಹಾಗೂ ಪ್ರಥಮ ಚಿಕಿತ್ಸೆಯ ಬಗ್ಗೆ  ಅರಿವು ಮೂಡಿಸುವುದು, ಹಾವು ಕಡಿತಕ್ಕೆ ಒಳಗಾದವರನ್ನು ತ್ವರಿತವಾಗಿ ವೈದ್ಯರ ಬಳಿಗೆ ಕರೆದೊಯ್ಯುವುದು, ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳಲ್ಲಿ ಗುಣಮಟ್ಟದ ಹಾವಿನ ವಿಷದ ಪ್ರತಿವಿಷ (ಎಎಸ್‍ವಿ) ಸಮರ್ಪಕವಾಗಿ ಲಭ್ಯವಿರುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದ್ದಾರೆ.


ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆಯನ್ನು ನೀಡುವುದು ಸಾವಿನ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುವುದರ ಜೊತೆಗೆ ನರಮಂಡಲದ ವಿಷಕಾರಿ ಪರಿಣಾಮ (ಪಾಶ್ರ್ವವಾಯು), ರಕ್ತ ಹೆಪ್ಪುಗಟ್ಟುವಿಕೆಯ ಅಸ್ವಾಭಾವಿಕತೆ, ತೀವ್ರ ಮೂತ್ರಪಿಂಡದ ಹಾನಿ, ಬಹು ಅಂಗಾಂಗ ವೈಫಲ್ಯ ಹಾಗೂ ಸಾವಿನಂತಹ ಗಂಭೀರ ತೊಂದರೆಗಳನ್ನು ತಡೆಗಟ್ಟಲು ನೆರವಾಗಲಿದೆ ಎಂದು ಎಂದು ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಅಸೋಸಿಯೇಟ್ pಪ್ರೊಫೆಸರ್ ಡಾ. ಆರನ್ ಡಿ'ಸೋಜಾ ಹೇಳಿದ್ದಾರೆ.


ಭಾರತದಲ್ಲಿ ಪ್ರತಿ ವರ್ಷ ಸುಮಾರು 58,000 ಮಂದಿ ಅಂದರೆ ಜಾಗತಿಕ ಪ್ರಕರಣಗಳ ಪೈಕಿ ಅರ್ಧದಷ್ಟು ಭಾರತದಲ್ಲಿ ವರದಿಯಾಗುತ್ತಿವೆ. ಇದನ್ನು ನಿಯಂತ್ರಿಸಿ, 2030ರೊಳಗೆ ಹಾವು ಕಡಿತದಿಂದ ಆಗುವ  ಸಾವಿನ ಪ್ರಮಾಣವನ್ನು ಅರ್ಧಕ್ಕೆ ಇಳಿಸುವ ಜಾಗತಿಕ ಗುರಿ ಸಾಧಿಸುವ ನಿಟ್ಟಿನದಲ್ಲಿ ಇದು ಮಹತ್ವದ ಹೆಜ್ಜೆ ಎಂದು ಅಭಿಪ್ರಾಯಪಟ್ಟಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top