ಜೂ 28: "ನಮ್ಮ ಮೀಸಲಾತಿ - ನಮ್ಮ ಹಕ್ಕು" ಬಂಜಾರಾ ಸಮುದಾಯದ ಬೃಹತ್ ಜಾಗೃತಿ ಸಭೆ

Upayuktha
0


ಕಲಬುರಗಿ : ದಿಕ್ಸೂಚಿ ಬಂಜಾರಾ  - ಕರ್ನಾಟಕ ಒಳಮೀಸಲಾತಿಯ ಅವೈಜ್ಞಾನಿಕ ಹಂಚಿಕೆಯ ಮೂಲಕ ಬಂಜಾರಾ ಸಮಾಜದ ಬಗ್ಗೆ ಸೇಡಿನ ರಾಜಕಾರಣ ಮಾಡುತ್ತಿರುವ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ದ ಜನಾಂದೋಲನವ ನ್ನು ಜೂ. 28ರಂದು ಬೃಹತ್ ಜನಜಾಗೃತಿ ಸಭೆ ಏರ್ಪಡಿಸಲಾಗಿದೆ ಎಂದು ಮಾಜಿ ಸಂಸದರಾದ ಡಾ. ಉಮೇಶ್ ಜಾಧವ್ ತಿಳಿಸಿದ್ದಾರೆ. 

   

ಕಲಬರಗಿಯ ಬಂಜಾರಾ ಭವನದಲ್ಲಿ ಜೂನ್ 28 ರಂದು ಭಾನುವಾರ ಬೆಳಗ್ಗೆ 10.30ಕ್ಕೆ  ಬಂಜಾರಾ ಸಮುದಾಯದ ವತಿಯಿಂದ  "ನಮ್ಮ ಮೀಸಲಾತಿ - ನಮ್ಮ ಹಕ್ಕು"  ಜಾಗೃತಿ ಸಭೆಯಲ್ಲಿ ಸಮುದಾಯದ ಆಕ್ರೋಶ ವ್ಯಕ್ತಪಡಿಸಲಾಗುವುದು. ಬಂಜಾರಾ ಸಮುದಾಯವನ್ನು ತೀವ್ರವಾಗಿ ಕಡೆಗಣಿಸುತ್ತಿರುವ ರಾಜ್ಯ ಸರ್ಕಾರದ ನಿಲುವಿನ ವಿರುದ್ಧ ಸಮುದಾಯದಲ್ಲಿ ಆಕ್ರೋಶ ಭುಗಿಲೆದ್ದಿದ್ದು ಈ ಬಗ್ಗೆ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಲಾಗುವುದು ಎಂದು ಮಾಜಿ ಸಂಸದರಾದ  ಡಾ.ಉಮೇಶ್ ಜಾಧವ್ ತಿಳಿಸಿದ್ದಾರೆ.


ಸಭೆಯಲ್ಲಿ ಮಾಜಿ ಸಚಿವರಾದ ಪ್ರಭು ಚೌಹಾಣ್, ಬಾಬುರಾವ್ ಚೌಹಾಣ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್ ಕುಡಚಿ ಶಾಸಕರುಗಳಾದ  ಡಾ. ಅವಿನಾಶ್ ಜಾಧವ್, ಡಾ. ಚಂದ್ರು ಲಮಾಣಿ, ಕೃಷ್ಣ ನಾಯಕ್ ಮಾಜಿ ಶಾಸಕರಾದ ಬಸವರಾಜ್ ನಾಯಕ್ , ಅಶೋಕ್ ನಾಯಕ್, ಚಂದ್ರ ನಾಯಕ್ ಸೇರಿದಂತೆ ರಾಜ್ಯದ ಪ್ರಮುಖ ಮುಖಂಡರುಗಳು ಭಾಗವಹಿಸುತ್ತಾರೆ.


ಬಂಜಾರಾ ಸಮುದಾಯದ ಈ ಜಾಗೃತಿ ಸಭೆಗೆ ಕಲಬುರಗಿ ಜಿಲ್ಲೆಯ ಎಲ್ಲಾ ತಾಂಡಾ ಗಳಿಂದ ನಾಯಕ, ಡಾವ್, ಕಾರಭಾರಿ, ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜಾಗೃತಿ ಸಭೆಯನ್ನು ಯಶಸ್ವಿಗೊಳಿಸುವಂತೆ ಡಾ. ಉಮೇಶ್ ಜಾಧವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top