ದಾವಣಗೆರೆ: ಇಲ್ಲಿನ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಇತ್ತೀಚಿಗೆ ದಾವಣಗೆರೆ ನಗರದ ಶಂಕರ ಮಠದ ಸಭಾಂಗಣದಲ್ಲಿ ಸಿ.ಆರ್.ಚನ್ನಗಿರಿ ವಿರೂಪಾಕ್ಷಪ್ಪನವರಿಗೆ ಶತಮಾನೋತ್ಸವದ ಜನುಮದಿನದ ಪ್ರಯಕ್ತ ಅಭಿನಂದಿಸಿ ಗೌರವಿಸಲಾಯಿತು.
ಅವರು ನೂರಾ ಒಂದು ವರ್ಷಕ್ಕೆ ಕಾಲಿಟ್ಟು ದಾನಿಗಳ ನಗರಿಯಲ್ಲಿ ನಿರಂತರವಾಗಿ ದಾನ, ಧರ್ಮ, ವಿದ್ಯಾರ್ಥಿಗಳಿಗೆ ಸಹಾಯ ಧನ ನೀಡಿ ಸಹಕರಿಸುತ್ತಿರುವುದಲ್ಲದೇ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಗೆ ಕಳೆದ 35 ವರ್ಷಗಳಿಂದ ಎಲ್ಲಾ ಸಮಾರಂಭಕ್ಕೆ ದೇಣಿಗೆ ನೀಡುತ್ತಾ ಬಂದಿರುತ್ತಾರೆ ಎಂದು ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ವೇದಿಕೆಯಲ್ಲಿ ಕಲಾಕುಂಚ ಗೌರವ ಅಧ್ಯಕ್ಷ ಕೆ.ಹೆಚ್.ಮಂಜುನಾಥ್, ಮಹಿಳಾ ವಿಭಾಗದ ಸಂಸ್ಥಾಪಕಿ ಜ್ಯೋತಿ ಗಣೇಶ್ ಶೆಣೈ, ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ, ಗೌರವ ಅಧ್ಯಕ್ಷೆ ವಸಂತಿ ಮಂಜುನಾಥ್, ಸಿದ್ದವೀರಪ್ಪ ಬಡಾವಣೆಯ ಶಾಖೆಯ ಅಧ್ಯಕ್ಷೆ ಲಲಿತಾ ಕಲ್ಲೇಶ್, ಎಂ.ಸಿ.ಸಿ. ಶಾಖೆಯ ಅಧ್ಯಕ್ಷೆ ಪ್ರಭಾ ರವೀಂದ್ರ, ಸಮಿತಿ ಸದಸ್ಯರಾದ ಭರತ್ ಚನ್ನಗಿರಿ, ರಶ್ಮಿ ಭರತ್, ಶಾಂತಪ್ಪ ಪೂಜಾರಿ, ಚನ್ನಬಸವ ಶೀಲವಂತ್, ಕೆ.ಬಿ.ಬಡಾವಣೆಯ ಶಾಖೆಯ ಅಧ್ಯಕ್ಷ ವಿ.ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್, ಕೋಮಲಾ ವಸಂತ್‌ಕುಮಾರ್, ಸಂಧ್ಯಾ ಶ್ರೀನಿವಾಸ್, ಗಿರಿಜಮ್ಮ ನಾಗರಾಜಪ್ಪ, ಶಿಲ್ಪಾ ಉಮೇಶ್, ರೇಣುಕಾ ರಾಮಣ್ಣ, ಲೀಲಾ ಸುಭಾಷ್ ಮುಂತಾದವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


