ಯೋಗಾಸನ, ಪ್ರಾಣಾಯಾಮ, ಧ್ಯಾನ ಮಾನವನ ಜೀವನಕ್ಕೆ ಆರೋಗ್ಯ ಭಾಗ್ಯ-ಕೆ.ಕರಿಬಸಪ್ಪ

Upayuktha
0

ದಾವಣಗೆರೆ: ಧನಾತ್ಮಕ ಚಿಂತನೆಯೊಂದಿಗೆ ವಿಶಾಲವಾದ ಸೇವಾ ಮನೋಭಾವನೆಯೊಂದಿಗೆ ಯೋಗಾಸನ, ಪ್ರಾಣಾಯಾಮ, ಧ್ಯಾನ ಮಾನವನ ಜೀವನಕ್ಕೆ ಆರೋಗ್ಯ ಭಾಗ್ಯ. ಪ್ರತಿನಿತ್ಯ ಬೆಳಗಿನ ಜಾವ ಎದ್ದು ಯೋಗದೊಂದಿಗೆ ಸತ್ಸಂಗಮಾಡಿದರೆ ಜ್ಞಾನಶಕ್ತಿ, ಪರಿಜ್ಞಾನ ಹೆಚ್ಚುತ್ತದೆ. ಅನಾರೋಗ್ಯಕ್ಕೆ ಪರಿಹಾರ ಸಿಗುವುದು ಎಂದು ಶ್ರೀ ಅಮೃತೇಶ್ವರಿ ಅಷ್ಟಾಂಗ ಯೋಗ ಕೇಂದ್ರದ ಸಂಸ್ಥಾಪಕರು, ಯೋಗ ಶಿಕ್ಷಕರಾದ ಕೆ. ಕರಿಬಸಪ್ಪ ಹೇಳಿದರು.


ಇವರು ದಾವಣಗೆರೆಯ ಕಲಾಕುಂಚ ಸಿದ್ದವೀರಪ್ಪ ಬಡಾವಣೆಯ ಶಾಖೆಯ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಉಚಿತ ಯೋಗ ಶಿಬಿರ ಉದ್ಘಾಟಿಸಿ ಮಾತನಾಡಿದರು.


ಸಮಾರಂಭದ ಅಧ್ಯಕ್ಷೆ ಲಲಿತಾ ಕಲ್ಲೇಶ್ ಮಾತನಾಡಿ, ಯೋಗ, ಧ್ಯಾನ ಕೇವಲ ಮನರಂಜನೆಗೆ ಸೀಮಿತವಾಗದೇ ಎಲ್ಲರ ಆರೋಗ್ಯ ಭಾಗ್ಯ ಪ್ರಜ್ವಲಗೊಳಿಸಲು ನಾಂದಿ. ಕೇವಲ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಬದ್ಧರಾಗದೇ ಜೀವನ ಪರ್ಯಂತ ಯೋಗ ಧ್ಯಾನಗಳನ್ನು ನಿರಂತರವಾಗಿ ರೂಢಿಸಿಕೊಳ್ಳಬೇಕು ಎಂದರು.


ಕಲಾಕುಂಚ  ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ಪ್ರಾಸ್ತಾವನೆಯಾಗಿ ಮಾತನಾಡಿ, ಪ್ರತೀ ವರ್ಷ ಈ ಉಚಿತ ಯೋಗ ಶಿಬಿರ ನಡೆಯುತ್ತಿರುವುದು ದೇವರ ಭಾಗ್ಯ. ಸುಮಾರು 30 ವರ್ಷಗಳ ಹಿಂದೆ ಶ್ರೀಕ್ಷೇತ್ರ ಧರ್ಮಸ್ಥಳದ ಡಾ. ವೀರೇಂದ್ರ ಹೆಗಡೆಯವರು ಆಗಮಿಸಿ ಸುಮಾರು 5 ಸಾವಿರ ಮಕ್ಕಳಿಗೆ ಅಷ್ಟಾಂಗ ಯೋಗ ಶಿಬಿರ ಕಲಾಕುಂಚದಿಂದ ನಡೆಸಿಕೊಟ್ಟರು ಎಂದರು.


ಯೋಗ ಶಿಕ್ಷಕಿಯರಾದ ಶ್ರೀಮತಿ ಲೀಲಾ ಸುಭಾಶ್, ಶ್ರೀಮತಿ ಸಂಧ್ಯಾ ಶ್ರೀನಿವಾಸ್, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಶ್ರೀಮತಿ ಜ್ಯೋತಿ ಗಣೇಶ್ ಶೆಣೈ, ಹಿರಿಯ ಯೋಗ ಶಿಕ್ಷಕಿ ಶ್ರೀಮತಿ ಸಾಕೂ ಸುರೇಶ್ ಪೈ ಉಪಸ್ಥಿತರಿದ್ದರು.

ಶ್ರೀಮತಿ ಸಾಕೂ ಸುರೇಶ್ ಪೈ ಪ್ರಾರ್ಥಿಸಿ, ರೇಣುಕಾ ರಾಮಣ್ಣ ಸ್ವಾಗತಿಸಿದರು, ಮಮತಾ ಕೊಟ್ರೇಶ್ ನಿರೂಪಿಸಿದರು. ಸುಮಾ ಏಕಾಂತಪ್ಪ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top