ಮಾನವೀಯ ಮೌಲ್ಯದ ಬಹುಮುಖಿ ಪ್ರತಿಭೆಯ ಅನಾವರಣ
ಕಲಬುರಗಿ: ಸಂಬಂಧಗಳು ದೂರಾಗುತ್ತಿರುವ ಕಾಲಮಾನದಲ್ಲಿ ವಿಠಲ ತಲೆಕಾನ ಅವರು ಪರಿವಾರ ಪ್ರೀತಿ ಸಮಾಜ ಪ್ರೀತಿಯೊಂದಿಗೆ ಮಾನವೀಯ ಮೌಲ್ಯದ ಬಹುಮುಖಿ ವ್ಯಕ್ತಿತ್ವವನ್ನು ಹೊಂದಿದ ಪ್ರತಿಭಾ ಸಂಪನ್ನರು ಎಂದು ಚಿಂತಕರಾದ ಡಾ. ಬಸವರಾಜ ಪಾಟೀಲ್ ಸೇಡಂ ಹೇಳಿದರು.
ಕಲಬುರಗಿಯ ನೂತನ ವಿದ್ಯಾಲಯದ ಡಿಗ್ರಿ ಕಾಲೇಜಿನ ಬಯಲು ರಂಗ ಮಂದಿರದಲ್ಲಿ ಶನಿವಾರ ಶಿರಪುರ ಪ್ರಕಾಶನ ಹಾಗೂ ಬೆಂಗಳೂರಿನ ವಿಠಲ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ವಿಠಲ ಸಂಸ್ಕಾರಣ ಗ್ರಂಥ ಲೋಕಾರ್ಪಣೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು. ಸಂಬಂಧಗಳು ದೂರಾಗಿ ಕುಟುಂಬ ಪ್ರೀತಿ ಸಮಾಜ ಪ್ರೀತಿಯಿಂದ ವಂಚಿತರಾಗುತ್ತಿರುವ ಕಾಲಘಟ್ಟದಲ್ಲಿ ಇಂತಹ ಮಾದರಿ ವ್ಯಕ್ತಿತ್ವಗಳ ಸಂಸ್ಕರಣೆ ಮಾಡುವುದರ ಮೂಲಕ ಮನಸ್ಸು ಹಾಗೂ ಸಮಾಜವನ್ನು ಜೋಡಣೆ ಮಾಡುವ ಕಾರ್ಯ ನೆರವೇರುತ್ತದೆ ಸಮಾಜದಲ್ಲಿ ಸಾಂಸ್ಕೃತಿಕ ಪ್ರೀತಿ ಕಟ್ಟಿದ ಮಹನೀಯರ ಸ್ಮರಣೆ ಮಾಡಿ ಯುವಜನರಿಗೆ ಆಶಾದಾಯಕ ಬದುಕಿಗೆ ಪ್ರೇರಣೆ ನೀಡುವಂತಾಗಿದೆ. ಆದರ್ಶ ಮತ್ತು ಮೌಲ್ಯವನ್ನು ಬಿಂಬಿಸುವ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.
ವಿಠಲ ಸಂಸ್ಕಾರನ ಕೃತಿಯನ್ನು ಸಾಹಿತಿ ಮಹಿಪಾಲ ರೆಡ್ಡಿ ಮುನ್ನೂರು ಪರಿಚಯಿಸಿ ವಿಠಲ ಕುಲಕರಣಿ ಇವರ ವ್ಯಕ್ತಿತ್ವ ಬದುಕು ಸಾಧನೆಯು ಸಾಹಿತಿಗಳಿಗೆ ಸಂಘಟಕರಿಗೆ ಹಾಗೂ ಪ್ರಾಮಾಣಿಕ , ಸಮಾಜಮುಖಿ ಜೀವನಕ್ಕೆ ಆದರ್ಶವಾಗಿದೆ ಎಂದು ಬಣ್ಣಿಸಿದರು. ಓಂಕಾರ ನಿತ್ಯ ಸಾಧನಾ ತಂಡದ ನಿರ್ದೇಶಕಿ ಡಾ. ಶುಭಾಂಗಿ ಹಾಗೂ ಶಿಲ್ಪಕಲಾ ಕ್ಷೇತ್ರದ ಸಾಧಕರಾದ ಡಾ. ಮಾನಯ್ಯ ಬಡಿಗೇರ ಅವರನ್ನು ವಿಠಲ ಪ್ರಶಸ್ತಿ ಹಾಗೂ 5 ಸಾವಿರ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಓಂಕಾರ ನೃತ್ಯ ಸಾಧನಾ ಕಲಾತಂಡದ ಕಲಾವಿದರು ವಿಶೇಷ ನೃತ್ಯ ಪ್ರದರ್ಶನ ನೀಡಿದರು. ಬಳಿಕ ಡಾ ಮಹೇಶ್ ಕುಮಾರ ಬಡಿಗೇರ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಗ್ರಂಥ ಸಂಪಾದಕರಾದ ಡಾ.ಸ್ವಾಮಿ ರಾವ್ ಕುಲಕರ್ಣಿ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ವಿಷಯ ಕುಲಕರ್ಣಿ ಪ್ರಾರ್ಥನೆ ಗೀತೆ ಹಾಡಿದರು ಹಾಗೂ ಅಥರ್ವ ದೇಶಪಾಂಡೆ ಶ್ಲೋಕ ಪಠಿಸಿದರು. ಶ್ರೀಮತಿ ಚಿತ್ರಾ ವಿಠಲ್ ರಾವ್ ಕುಲಕರ್ಣಿ, ಶ್ರೀಪತಿ ಕುಲಕರ್ಣಿ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು ನಾರಾಯಣ ರಾವ್ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


