ವಿದ್ಯಾದಾಯಿನೀ ಪ್ರೌಢ ಶಾಲೆಯ ನೂತನ ಪ್ರಭಾರ ಮುಖ್ಯೋಪಾಧ್ಯಾಯರಾಗಿ ದಿವಸ್ಪತಿ

Upayuktha
0

 


ಸುರತ್ಕಲ್: ಹಿಂದು ವಿದ್ಯಾದಾಯಿನೀ ಸಂಘದ ಆಡಳಿತಕ್ಕೊಳಪಟ್ಟ ಸುರತ್ಕಲ್ ಅನುದಾನಿತ ವಿದ್ಯಾದಾಯಿನೀ ಪ್ರೌಢ ಶಾಲೆಯಲ್ಲಿ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಸೇವೆಯನ್ನು ಸಲ್ಲಿಸಿದ ಶ್ರೀಮತಿ ರೇವತಿ ಬಿ ಇವರು ಸರಕಾರದ ನಿಯಮದಂತೆ ಮೇ 31 ರಂದು ವಯೋನಿವೃತ್ತಿ ಹೊಂದಿದ್ದು ತೆರವಾದ ಹುದ್ದೆಗೆ ಆಡಳಿತ ಮಂಡಳಿಯು ಶಾಲಾ ಜೇಷ್ಠತೆಯಲ್ಲಿ ಹಿರಿಯ ಶಿಕ್ಷಕ ದಿವಸ್ಪತಿ ಇವರನ್ನು ಮುಂದಿನ ಪ್ರಭಾರ ಮುಖ್ಯೋಪಾಧ್ಯಾಯರಾಗಿ ನೇಮಿಸಿ ನಿರ್ಣಯಿಸಿರುತ್ತಾರೆ.


ಈ ಬಗ್ಗೆ ದಿನಾಂಕ 01-06-2026ರಂದು ಶ್ರೀಮತಿ ರೇವತಿ ಬಿ ಇವರು ಎಲ್ಲರ ಸಮ್ಮುಖದಲ್ಲಿ ಶಾಲೆಯ ನೂತನ ಪ್ರಭಾರ ಮುಖ್ಯೋಪಾಧ್ಯಾಯರಾದ ದಿವಸ್ಪತಿ ಇವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಹಿಂದು ವಿದ್ಯಾದಾಯಿನೀ ಸಂಘದ ಅಧ್ಯಕ್ಷರಾದ ಜಯಚಂದ್ರ ಹತ್ವಾರ್, ಸಂಘದ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಶಾಲಾ ಸಂಚಾಲಕ ಸುಧಾಕರ ರಾವ್ ಪೇಜಾವರ್, ಜೊತೆ ಕಾರ್ಯದರ್ಶಿ ಎಂ.ಜಿ ರಾಮಚಂದ್ರ, ಕೋಶಾಧಿಕಾರಿ ಹೆಚ್.ಎಲ್. ರಾವ್, ಸಂಘದ ಸದಸ್ಯರು ಹಾಗೂ ಸ್ಥಳೀಯ ಸಿವಿಲ್ ಇಂಜಿನಿಯರ್, ಕಾಂಟ್ರಾಕ್ಟರ್ ಪ್ರಸಿದ್ಧ ಪಿ., ವಿದ್ಯಾದಾಯಿನೀ ಆಂಗ್ಲ ಮಾದ್ಯಮ ಸಿ.ಬಿ.ಎಸ್.ಸಿ ಶಾಲೆಯ ಸಿ.ಇ.ಒ. ಸೂರಪ್ಪಯ್ಯ ಕರಣಿಕ, ಗೋವಿಂದ ದಾಸ ಪದವಿ ಕಾಲೇಜಿನ ಪ್ರಾಂಶುಪಾಲ ಹರೀಶ್ ಆಚಾರ್ಯ, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಲಕ್ಷ್ಮೀ, ನಿಕಟ ಪೂರ್ವ ಪ್ರಭಾರ ಮುಖ್ಯೋಪಾಧ್ಯಾಯರಾದ ದೇವಪ್ಪ ವಸಂತ್ ಕುಮಾರ್ ನಾಯ್ಕ್, ಶಾಲಾ ಶಿಕ್ಷಕ-ಶಿಕ್ಷಕೇತರರು ಉಪಸ್ಥಿತರಿದ್ದು ಅಧಿಕಾರ ಪದಗ್ರಹಣಗೈದ ನೂತನ ಪ್ರಭಾರ ಮುಖ್ಯೋಪಾಧ್ಯಾಯರಿಗೆ ಶುಭ ಹಾರೈಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top