ಪಿ.ಎಚ್.ಸಿ. ಸುರತ್ಕಲ್: ನವೀಕೃತ ಮೆಡಿಸಿನ್ ಸ್ಟೋರೇಜ್ ಕೊಠಡಿ ಉದ್ಘಾಟನೆ

Upayuktha
0

 


ಸುರತ್ಕಲ್:‌ ಉತ್ತಮ ಆರೋಗ್ಯ ಸೇವೆ ಪ್ರತಿಯೊಬ್ಬರಿಗೂ ಲಭ್ಯವಾಗಿ ಅರೋಗ್ಯವಂತ ಸಮಾಜ ನಿರ್ಮಾಣವಾಗ ಬೇಕಾಗಿದೆ. ಆರೋಗ್ಯ, ಶಿಕ್ಷಣ, ಪರಿಸರ, ಮೂಲಭೂತ ಸೌಲಭ್ಯಗಳ ಒದಗಿಸುವಿಕೆಗೆ ಎಂ.ಆರ್.ಪಿ.ಎಲ್. ಉದ್ಯಮ ಸಂಸ್ಥೆಯು ಆದ್ಯತೆ ನೆಲೆಯಲ್ಲಿ ಸಹಾಯ ನೀಡುತ್ತಿದೆ ಎಂದು ಸಂಸ್ಥೆಯ ಸಿ.ಎಸ್.ಆರ್ ವಿಭಾಗದ ಜನರಲ್ ಮ್ಯಾನೇಜರ್ ಮಂದಾರ ಕಾಳೆ ನುಡಿದರು.

 

ಅವರು ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಂ.ಆರ್.ಪಿ.ಎಲ್ ಕೈಗಾರಿಕಾ ಸಂಸ್ಥೆಯ ಸಿ.ಎಸ್.ಆರ್. ಅನುದಾನದಲ್ಲಿ ಸುರತ್ಕಲ್ ರೋಟರಿ ಕ್ಲಬ್ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್, ಮತ್ತು ಸುರತ್ಕಲ್ ರೋಟರಿ ಕ್ಲಬ್    ರೂಪಿಸಿರುವ ನವೀಕೃತ ಮೆಡಿಸಿನ್ ಸ್ಟೋರೇಜ್ ಕೊಠಡಿಯನ್ನು ಉದ್ಘಾಟಸಿ ಮಾತನಾಡಿದರು.


ರೋಟರಿ ಕ್ಲಬ್ 3181 ವಲಯ 2 ರ ಅಸಿಸ್ಟೆಂಟ್ ಗವರ್ನರ್ ಸಿ.ಎ. ರೊ. ಶಾಂತರಾಮ ಶೆಟ್ಟಿ ಮಾತನಾಡಿ ಆಧುನಿಕ  ಸಂದರ್ಭದಲ್ಲಿ ಬಾಲ್ಯ ಹಾಗೂ ವೃದ್ಯಾಪ್ಯದಲ್ಲಿ  ಕಾಳಜಿ ಹಾಗೂ ಸೇವೆ ಅತೀ ಅಗತ್ಯವಾಗಿದೆ. ಹಿರಿಯ ನಾಗರಿಕರಿಗೆ ಆರೋಗ್ಯ ಸೇವಾ ಕೇಂದ್ರಗಳ ಅಗತ್ಯವಿದೆ. ಸುಜಜ್ಜಿತ ಔಷಧ ಶೇಖರಣಾ ಕೊಠಡಿ ಸೌಲಭ್ಯ ದಿಂದಾಗಿ ಉತ್ತಮ ಸೇವೆ ನೀಡಲು ಸಾಧ್ಯವಿದ್ದು ಎಂ. ಆರ್. ಪಿ. ಎಲ್. ಸಂಸ್ಥೆ ಯ ಕೊಡುಗೆ ವಿಶಿಷ್ಟವಾದುದು ಎಂದರು.


ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ಡಾ. ಭಾಸ್ಕರ ಕೋಟ್ಯಾನ್ ಮಾತನಾಡಿ ಉದ್ಯಮ ಹಾಗು ಸಾಮಾಜಿಕ ಸೇವಾ ಸಂಸ್ಥೆಗಳ ಸಹಯೋಗದಿಂದ ಆರೋಗ್ಯ ಕೇಂದ್ರದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಳ್ಳಲಾಗುತ್ತಿದೆ ಎಂದರು.


ಫಾರ್ಮಸ್ಟಿಸ್ಟ್ ಲಾವಣ್ಯ  ಅವರು ಮಾತನಾಡಿ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಅವಶ್ಯಕತೆಯಿದ್ದ ಔಷದಿ ಶೇಖರಣಾ ಕೊಠಡಿ ಯನ್ನು ಕೊಡುಗೆಯಾಗಿ ನೀಡಿದ ಎಂ. ಆರ್. ಪಿ. ಎಲ್. ಸಂಸ್ಥೆ ಹಾಗೂ ರೋಟರಿ ಕ್ಲಬ್ ಗಳ ಸೇವೆಯನ್ನು ಸ್ಮರಿಸಿದರು.


ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರ ಬಿ. ಕುಂದರ್ ಸ್ವಾಗತಿಸಿದರು. ರೋಟರಿ ಕ್ಲಬ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಚಂದ್ರಕಾಂತ್ ಮರಾಠೆ ವಂದಿಸಿದರು. ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು.


ರೋಟರಿ ಕ್ಲಬ್ ನ ಝೋನಲ್ ಲೆಫ್ಟಿ ನೆಂಟ್ ಸಂದೀಪ್ ರಾವ್ ಇಡ್ಯಾ, ಎಂ. ಆರ್. ಪಿ. ಎಲ್. ನ ಸಿ. ಎಸ್. ಆರ್. ವಿಭಾಗ ದ ಮುಖ್ಯ ಪ್ರಬಂಧಕ ಎಂ. ಕೆ. ರಾವ್, ಅಧಿಕಾರಿ ಪ್ರದೀಪ್,ಹಿಂದು ವಿದ್ಯಾ ದಾಯಿನೀ ಸಂಘದ ಜೊತೆ ಕಾರ್ಯದರ್ಶಿ ಎಂ. ಜಿ. ರಾಮ ಚಂದ್ರ,ರೋಟರಿ ಕ್ಲಬ್ ನ ಕಾರ್ಯದರ್ಶಿ ರಾಮ್ ಮೋಹನ್. ವೈ. ಕೋಶಾಧಿಕಾರಿ ಮೋಹನ್ ಎಚ್., ನಿಯೋಜಿತ ಅಧ್ಯಕ್ಷ ಶ್ರೀಧರ್ ಟಿ. ಎನ್., ಸದಸ್ಯರಾದ ಎಂ.ಬಿ. ಶೆಟ್ಟಿ, ಶ್ರೀನಿವಾಸ ರಾವ್, ಪಾದೆಬೆಟ್ಟು ಶ್ರೀನಿವಾಸ ರಾವ್, ಸತೀಶ್ ಸದಾನಂದ, ಪೂರ್ಣಿಮಾ ಎಸ್. ರಾವ್ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top