ಜಗತ್ತಿನ ಜೀವ ಸಂಕುಲಗಳ ಪೈಕಿ ಮಾನವನಿಂದ ಮಾತ್ರ ಪ್ರಕೃತಿಗೆ ಹಾನಿ: ರಾಘವೇಂದ್ರ ಕರ್ವಾಲು

Upayuktha
0


ಉಡುಪಿ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸುಬ್ರಹ್ಮಣ್ಯ ನಗರ ಉಡುಪಿ ಇಂದ್ರಾಳಿ ಇದರ ಆಶ್ರಯದಲ್ಲಿ ವನಮಹೋತ್ಸವ ಮತ್ತು ಗಿಡ ವಿತರಣಾ ಕಾರ್ಯಕ್ರಮ ಶಾಲಾ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಉಡುಪಿ ಇಂದ್ರಾಳಿ ಅಧ್ಯಕ್ಷ ವಿಪುಲ್ ವಹಿಸಿದ್ದರು.


ಕಸಾಪ ಉಡುಪಿ ತಾಲೂಕು ಸಂ.ಕಾಯ೯ದಶಿ೯ ರಾಘವೇಂದ್ರ ಪ್ರಭು ಕವಾ೯ಲು ಪರಿಸರದ ಕುರಿತು ಮಾಹಿತಿ ನೀಡಿ ಪ್ರಕೃತಿಯು ಮಾನವನಿಂದ ಮಾತ್ರ ಹಾಳಾಗುತ್ತಿದೆ ಹೊರತು ಬೇರೆ ಯಾವುದೇ ಪ್ರಾಣಿ ಪಕ್ಷಿಗಳಿಂದ ಅಲ್ಲ ಹೀಗಾಗಿ ಇಂದು ನಾವೆಲ್ಲರೂ ವರ್ಷಕ್ಕೆ ಕನಿಷ್ಠ ಎರಡು ಗಿಡವನ್ನಾದರೂ ನೆಟ್ಟು ಬೆಳೆಸುವ ಕಾರ್ಯ ಮಾಡಿದ್ದಲ್ಲಿ ಪ್ರಕೃತಿಗೆ ನಾವು ಕೊಡುಗೆ ನೀಡಬಹುದು ಎಂದರು.


ನಿವೃತ್ತ ಸಹಾಯಕ ಮಹಾಪ್ರಬಂಧಕ ಪುರಂದರ್ ಶೆಟ್ಟಿ ಶುಭ ಹಾರೈಸಿದರು. ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ಸುಜಾತ, ವಲಯ ಅಧಿಕಾರಿ ರಿತೇಶ್ ಸುವರ್ಣ, ಕಾರ್ಯಕ್ರಮ ನಿರ್ದೇಶಕ ಡಾ. ವಿಜಯ ನೆಗಳೂರು, ಕಾರ್ಯದರ್ಶಿ ಹರಿಪ್ರಸಾದ್, ಪೂರ್ವ ಅಧ್ಯಕ್ಷ ಅಶೋಕ್ ಪೂಜಾರಿ, ಡಾ: ಚಿತ್ರಾ ನೆಗಳೂರು, ಮಮತಾ, ಜ್ಯೋತಿ ಪ್ರಶಾಂತ್, ಕೀತೆ೯ಶ್, ಉದಯ್ ಕೆ ಶೆಟ್ಟಿ, ರಾಧಾಕೃಷ್ಣ, ಸೌಂದಯ೯, ರಾಹುಲ್', ಕರಣ್ ತನಿಶಾ, ತನಯ್, ಮುಂತಾದವರು ಉಪಸ್ಥಿತರಿದ್ದರು.


 ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಎಸ್‌ಡಿಎಂಸಿ ಅಧ್ಯಕ್ಷರು ಉಪಸ್ಥಿತರಿದ್ದರು.


  ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top