ಸುರತ್ಕಲ್: ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದಿಂದ ಶಾಲಾ ಸಮವಸ್ತ್ರ ಹಾಗೂ ವಿದ್ಯಾರ್ಥಿವೇತನ ವಿತರಣೆ

Upayuktha
0


ಸುರತ್ಕಲ್: ಇಲ್ಲಿನ ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ 51ನೇ ವರ್ಷದ ಶಾಲಾ ಮಕ್ಕಳ ಸಮವಸ್ತ್ರ ವಿತರಣಾ ಸಮಾರಂಭವು ವಿದ್ಯಾದಾಯಿನೀ ಪ್ರೌಢ ಶಾಲೆಯ ವಜ್ರ ಮಹೋತ್ಸವ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿನಯ ಆಚಾರ್ಯ ಹೊಸಬೆಟ್ಟು ವಹಿಸಿದ್ದರು.


ಈ ಸಂದರ್ಭದಲ್ಲಿ ಮೈರ್ಪಾಡಿ ಕುಳಾಯಿಯ ಅನುದಾನಿತ ಶ್ರೀ ವೆಂಕಟ್ರಮಣ ಹಿರಿಯ ಪ್ರಾಥಮಿಕ ಶಾಲೆ, ಇಡ್ಯಾ ಸುರತ್ಕಲ್‌ನ ಅನುದಾನಿತ ಇಡ್ಯಾ ವಿದ್ಯಾದಾಯಿನೀ ಹಿರಿಯ ಪ್ರಾಥಮಿಕ ಶಾಲೆ, ಸುರತ್ಕಲ್‌ನ ಅನುದಾನಿತ ವಿದ್ಯಾದಾಯಿನೀ ಪ್ರೌಢ ಶಾಲೆ ಹಾಗೂ ಇಡ್ಯಾ ಸುರತ್ಕಲ್‌ನ ವಿದ್ಯಾದಾಯಿನೀ ಆಂಗ್ಲ ಮಾಧ್ಯಮ ಶಾಲೆ (CBSE)ಯ ಅರ್ಹ ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರಗಳನ್ನು ವಿತರಿಸಲಾಯಿತು.


ಇದೇ ವೇದಿಕೆಯಲ್ಲಿ, ವಿದ್ಯಾದಾಯಿನೀ ಪ್ರೌಢ ಶಾಲೆಯ 1981-84ರ SSLC ವಿಭಾಗದ ಹಳೆ ವಿದ್ಯಾರ್ಥಿ ನರಸಿಂಹ ಕಿಣಿಯವರು ತಮ್ಮ ತಂದೆ-ತಾಯಿಗಳಾದ ಸುರತ್ಕಲ್ ಮೀರಾ ಮತ್ತು ದೇವದಾಸ ಕಿಣಿ ಅವರ ಸ್ಮರಣಾರ್ಥ ಇರಿಸಿದ್ದ ದತ್ತಿ ನಿಧಿಯಿಂದ 30 ಅರ್ಹ ಮಕ್ಕಳಿಗೆ ವಾರ್ಷಿಕ ವಿದ್ಯಾಭ್ಯಾಸದ ಖರ್ಚಿಗಾಗಿ ವಿದ್ಯಾರ್ಥಿವೇತನವನ್ನು ವಿತರಿಸಿದರು. ಹಾಗೆಯೇ, ‘ಶ್ರೀಮತಿ ಮಮತಾ ಭಟ್ ಮೆಮೋರಿಯಲ್ ಗರ್ಲ್ ಚೈಲ್ಡ್ ಎಜುಕೇಶನ್ ಫಂಡ್’ ವತಿಯಿಂದ ಇಬ್ಬರು ಅರ್ಹ ವಿದ್ಯಾರ್ಥಿನಿಯರ ವಾರ್ಷಿಕ ವಿದ್ಯಾಭ್ಯಾಸದ ವೆಚ್ಚಕ್ಕಾಗಿ ವಿದ್ಯಾರ್ಥಿವೇತನವನ್ನು ನೀಡಲಾಯಿತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಚ್ ಯು ಅನಂತಯ್ಯ, ದಿವಾಕರ ಎಂ, ಸತೀಶ್ ಮುಂಚೂರು, ಶ್ರೀಮತಿ ಭವಾನಿ ಹೆಬ್ಬಾರ್, ಮನೋಜ್ ಕಾಮತ್, ಪುಂಡಲೀಕ ಹೊಸಬೆಟ್ಟು, ಶ್ರೀಮತಿ ಸಾವಿತ್ರಿ ಎಚ್ ಭಟ್ ಹಾಗೂ ರಾಕೇಶ್ ಹೊಸಬೆಟ್ಟು ಉಪಸ್ಥಿತರಿದ್ದರು. ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು, ಶಾಲಾ ಮುಖ್ಯಸ್ಥರು, ಪೋಷಕರು ಹಾಗೂ ವಿದ್ಯಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಅಶ್ವಿನಿ ಐತಾಳ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಉಪಾಧ್ಯಕ್ಷರಾದ ಪ್ರಕಾಶ್ ಎಸ್ ಕರ್ಕೇರ ಕುಳಾಯಿ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top