ಸುದಾನ ಶಾಲೆ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(NDRF) ವತಿಯಿಂದ ಸುರಕ್ಷತಾ ಮಾಹಿತಿ

Upayuktha
0

 


ಪುತ್ತೂರು: ಇಲ್ಲಿನ ಸುದಾನ ವಸತಿ ಶಾಲೆಯಲ್ಲಿ ಇತ್ತೀಚೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(NDRF) ಯವರು ಆಕಸ್ಮಿಕವಾಗಿ ಸಂಭವಿಸುವ  ಆರೋಗ್ಯ ಸಮಸ್ಯೆ ಮತ್ತು ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಹೇಗೆ ಜೀವ ರಕ್ಷಣೆಯನ್ನು ಮಾಡಬೇಕು ಎನ್ನುವುದರ ಬಗೆಗೆ ಪ್ರಾತ್ಯಕ್ಷಿಕೆ ಸಹಿತ ಮಾಹಿತಿಯನ್ನು ನೀಡಿದರು.


 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ನಿರ್ದೇಶಕರಾದ ಇನ್ಸ್‌ಪೆಕ್ಟರ್ ಶಾಂತಿಲಾಲ್ ಜಟಿಯಾ ಅವರು " ಭೂಕಂಪ, ನೆರೆ, ಅನಾರೋಗ್ಯ ಮುಂತಾದ ಸಂದರ್ಭದಲ್ಲಿ ಜನಸಾಮಾನ್ಯರು ಧೈರ್ಯದಿಂದ ರಕ್ಷಣಾ ಕಾರ್ಯದಲ್ಲಿ  ಕಾರ್ಯೋನ್ಮುಖರಾಗಬೇಕು. ಯುವಜನರಿಗೆ ಈ ಬಗೆಗೆ ಮಾಹಿತಿ ದೊರೆತರೆ ಅದರಿಂದ  ಸಶಕ್ತ ಸಮಾಜ ನಿರ್ಮಾಣವು ಸಾಧ್ಯ. ನಮ್ಮ ಈ ಪ್ರಯತ್ನಕ್ಕೆ ಸುದಾನ ಶಾಲೆಯು  ಉತ್ತಮ ರೀತಿಯಿಂದ ಸ್ಪಂದಿಸಿದೆ." ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ  ಎನ್ ಡಿ ಆರ್ ಎಫ್ ನ ಯೋಧರು ವಿಪತ್ತು ಸಂಭವಿಸಿದಾಗ ಅದರಿಂದ ಪಾರಾಗುವುದು ಹೇಗೆ ಎನ್ನುವುದನ್ನು ಪ್ರಾತ್ಯಕ್ಷಿಕೆ ಸಹಿತ ತಿಳಿಸಿದರು. ಜೊತೆಗೆ ವಿದ್ಯಾರ್ಥಿಗಳಿಗೂ ತರಬೇತಿಯನ್ನು ನೀಡಿದರು. 


ಅಸಿಸ್ಟೆಂಟ್ ಇನ್ಸ್ಪೆಕ್ಟರ್ ಶುಭಾಷ್ ಶಿಂದೆ, ಬಾಲಕೃಷ್ಣ, ಸೆಲ್ವ ಕುಮಾರ್ ಮತ್ತು ಶ್ರೀನಿವಾಸಲು, ಸುದಾನ ಶಾಲೆಯ ಆಡಳಿತಾಧಿಕಾರಿ‌ ಶ್ರೀ ಸುಶಾಂತ ಹಾರ್ವಿನ್, ಉಪಮುಖ್ಯ ಶಿಕ್ಷಕಿ‌ ಶ್ರೀಮತಿ ಲವೀನಾ ನವೀನ್ ಹನ್ಸ್ ವೇದಿಕೆಯಲ್ಲಿ‌ ಉಪಸ್ಥಿತರಿದ್ದರು. ಶಾಲೆಯ ಜಾಗೃತಿ ಸೋಷಿಯಲ್ ಕ್ಲಬ್ ನ ಸುದಾನ ಸೇಪ್ಟಿ ಕಮಿಟಿಯು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಜಾಗೃತಿ‌ ಸೋಶಿಯಲ್ ಕ್ಲಬ್ ನ ನಿರ್ದೇಶಕಿ‌ ಶ್ರೀಮತಿ‌ ಯೋಗಿತಾ ಎ ಕಾರ್ಯಕ್ರಮವನ್ನು  ನಿರೂಪಿಸಿದರು.ಶಾಲಾ ಸುರಕ್ಷಾ ಸಮಿತಿಯ ವಿದ್ಯಾರ್ಥಿ ಪ್ರತಿನಿಧಿಯಾದ ಸಾನ್ವಿ ಎಚ್ ಸುವರ್ಣ ಮತ್ತು ಕಾರ್ಯದರ್ಶಿ ಹಿಬಾ  ಫಾತಿಮಾ ಸಹಕರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ‌ ರಾಷ್ಟ್ರೀಯ ವಿಪತ್ತು  ನಿರ್ವಹಣಾ ಪಡೆಯ ಸದಸ್ಯರೆಲ್ಲರಿಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top