ತುಮಕೂರು: ನಾಮದ ಚಿಲುಮೆಯ ಪರಿಸರವನ್ನು ಸಂರಕ್ಷಿಸುವ ಹಾಗೂ ಅರಣ್ಯದಲ್ಲಿನ ವನ್ಯಜೀವಿಗಳ ದಾಹ ನೀಗಿಸುವ ಉದ್ದೇಶದಿಂದ ‘ಸಮಾನ ಮನಸ್ಕರ ಒಕ್ಕೂಟ’ದ ವತಿಯಿಂದ ‘ಜಲಸೇವೆ ಮತ್ತು ಪ್ಲಾಸ್ಟಿಕ್ ಮುಕ್ತ ಸ್ವಚ್ಛತಾ ಆಂದೋಲನ’ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪರಿಸರ ಪ್ರೇಮಿಗಳು ಮತ್ತು ಸ್ವಯಂಸೇವಕರು ಅರಣ್ಯ ಪ್ರದೇಶದಲ್ಲಿ ಸಂಗ್ರಹವಾಗಿದ್ದ ಸುಮಾರು 40 ರಿಂದ 50 ಚೀಲಗಳಷ್ಟು (ಅಂದಾಜು 30 ಕೆ.ಜಿ.) ಪ್ಲಾಸ್ಟಿಕ್ ತ್ಯಾಜ್ಯವನ್ನು ತೆರವುಗೊಳಿಸಿ ನಾಮದ ಚಿಲುಮೆ ಪ್ರದೇಶವನ್ನು ಸ್ವಚ್ಛಗೊಳಿಸಿದರು. ಜೊತೆಗೆ ಅರಣ್ಯದ ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಮೂಲಕ ಪರಿಸರ ಕಾಳಜಿ ಹಾಗೂ ಮಾನವೀಯತೆಯನ್ನು ಮೆರೆದರು.
ಕಾರ್ಯಕ್ರಮದ ಸಮಾರೋಪದಲ್ಲಿ ಚಂದ್ರಶೇಖರ್ ಅವರು ಪರಿಸರ ಜಾಗೃತಿ ಗೀತೆಯನ್ನು ಹಾಡುವ ಮೂಲಕ ಅಭಿಯಾನಕ್ಕೆ ಅರ್ಥಪೂರ್ಣ ಅಂತ್ಯ ನೀಡಿದರು.
ಈ ಆಂದೋಲನದ ಸಂಘಟನೆ, ಆಯೋಜನೆ ಹಾಗೂ ನೇತೃತ್ವವನ್ನು ಸಲೀಂ ಖಾನ್, ತುಮಕೂರು ವಹಿಸಿಕೊಂಡಿದ್ದರು. ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸ್ವಯಂಸೇವಕರು ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಪ್ರಮುಖವಾಗಿ:
ಭಾವೈಕ್ಯ ಯುವಜನ ಸಂಘದ ಪ್ರಧಾನ ಕಾರ್ಯದರ್ಶಿ ಸಲೀಂ ಖಾನ್, ಯೂತ್ ಫಾರ್ ಸೇವಾ ತುಮಕೂರು ಚಾಪ್ಟರ್‌ನ ಜಿಲ್ಲಾ ಸಂಯೋಜಕ ಅರವಿಂದ್ ಹಾಗೂ ಸ್ವಯಂಸೇವಕರು, ಭಾರತ ಸೇವಾದಳದ ಜಿಲ್ಲಾ ಸಂಘಟಕ ಶಿವರಾಜ್, ನವಿಲು ಫೌಂಡೇಶನ್‌ನ ಚಂದ್ರಶೇಖರ್, ಅಭಿನವ ರಂಗ ಸಂಪನ್ಮೂಲ ಕೇಂದ್ರದ ಅನುರಾಗ್ ಭೀಮಸಂದ್ರ, ಐಕ್ಯ ಫೌಂಡೇಶನ್‌ನ ಶ್ರೀನಿವಾಸ್, ಕಲಾಕಲ್ಪಂ ಸಂಸ್ಥೆಯ ಲೋಕೇಶ್, ಪ್ರೇರಣಾ ಡಿಸೇಬಲ್ಡ್ ವೆಲ್ಫೇರ್ ಟ್ರಸ್ಟ್‌ನ ವೆಂಕಟೇಶ್ ಹಾಗೂ ಇವರೊಂದಿಗೆ 20ಕ್ಕೂ ಹೆಚ್ಚು ಪರಿಸರವಾದಿ ಸ್ವಯಂಸೇವಕರು ಅಭಿಯಾನದಲ್ಲಿ ಪಾಲ್ಗೊಂಡು ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


