ಅಧಿಕ ಮಾಸದಲ್ಲಿ ಹರಿ ಕುಣಿದ: ವಿಶೇಷ ದಾಸವಾಣಿ ಕಾರ್ಯಕ್ರಮ

Upayuktha
0


ಬೆಂಗಳೂರು : ದಾಸವಾಣಿ ಕರ್ನಾಟಕ ಸಂಸ್ಥೆ, ಹರಿಕಥಾ ವಿದ್ವಾನ್ ಸೋಸಲೆ ನಾರಾಯಣ ದಾಸ್ ಟ್ರಸ್ಟ್ ಹಾಗೂ ಶ್ರೀ ಮಾರುತಿ ಮಹಾ ಗಣಪತಿ ದೇವಸ್ಥಾನ (ಪುಣ್ಯಧಾಮ) ಇವುಗಳ ಸಂಯುಕ್ತಾಶ್ರಯದಲ್ಲಿ ಅಧಿಕ ಮಾಸದ ಪ್ರಯುಕ್ತ "ಅಧಿಕ ಮಾಸದಲ್ಲಿ ಹರಿ ಕುಣಿದ" ಎಂಬ ಶೀರ್ಷಿಕೆಯಲ್ಲಿ  ಪರಮಾತ್ಮನನ್ನು ಸ್ಮರಿಸುವ 33 ಹರಿದಾಸರ ಪದಗಳ ವಿಶೇಷ ದಾಸವಾಣಿ ಕಾರ್ಯಕ್ರಮವನ್ನು ಜೂನ್ 7, ಭಾನುವಾರ ಸಂಜೆ 5-00ಕ್ಕೆ ರಾಜಾಜಿನಗರ 1ನೇ ಬ್ಲಾಕ್ ನಲ್ಲಿರುವ ಪುಣ್ಯಧಾಮದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ವಿಶೇಷ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಗಾಯಕರುಗಳಾದ ಪಂಡಿತ್ ಶ್ರೀ ಕನಕಗಿರಿ ಹುಸೇನ್ ಸಾಬ್, ಪಂಡಿತ್ ಶ್ರೀ ಪ್ರಸನ್ನ ಕೊರ್ತಿ, ವಿದುಷಿ ಶ್ರೀಮತಿ ರಮ್ಯಾ ಸುಧೀರ್, ವಿದುಷಿ ಶ್ರೀಮತಿ ಅನುಕೃಪ ರೌಡೂರ್ ಪುರೋಹಿತ್ ಮತ್ತು ಶ್ರೀ ಕೆ.ಪಿ. ಶಿಶಿರ್ ಇವರುಗಳು  ಹಾಡಲಿದ್ದಾರೆ. ಇವರ ಗಾಯನಕ್ಕೆ ಕೀಬೋರ್ಡ್ ವಾದನದಲ್ಲಿ ಶ್ರೀ ಅಮಿತ್ ಶರ್ಮಾ ಮತ್ತು ತಬಲಾ ವಾದನದಲ್ಲಿ ಶ್ರೀ ಶ್ರೀನಿವಾಸ ಕಾಖಂಡಕಿ ಸಹಕರಿಸಲಿದ್ದಾರೆ. ಈ ವಿಶೇಷ ಕಾರ್ಯಕ್ರಮದ ನಿರೂಪಣೆಯನ್ನು ಡಿ ಡಿ ಚಂದನದ ನಿರೂಪಕಿ ಶ್ರೀಮತಿ ಪ್ರವೀಣಾ ಕುಲಕರ್ಣಿ ನಡೆಸಿಕೊಡಲಿದ್ದಾರೆ. 

ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪದಾಧಿಕಾರಿಗಳಾದ ಶ್ರೀ ಶ್ರೀನಿವಾಸಮೂರ್ತಿ ಮತ್ತು ಶ್ರೀ ಜಯರಾಜ್ ಕುಲಕರ್ಣಿ  ವಿನಂತಿಸಿದ್ದಾರೆ.

Post a Comment

0 Comments
Post a Comment (0)
To Top