ಸುದಾನ ಶಾಲೆಯಲ್ಲಿ ವಿದ್ಯಾರ್ಥಿ ಚುನಾವಣೆ : ವಿದ್ಯಾರ್ಥಿ ನಾಯಕನಾಗಿ ಆಯುಷ್ ಎಲ್ ರೈ ಆಯ್ಕೆ

Upayuktha
0

 


ಪುತ್ತೂರು: ಇಲ್ಲಿನ ಸುದಾನ ವಸತಿ ಶಾಲೆಯಲ್ಲಿ ಜೂನ್ 15 ರಂದು ನೂತನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಚುನಾವಣೆಯು ನಡೆಯಿತು. ಕಂಪ್ಯೂಟರೀಕೃತ ಮತದಾನ ವ್ಯವಸ್ಥೆಯನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಪಾರದರ್ಶಕ ಮತದಾನದ ಬಗೆಗೆ ಅರಿವು ಮೂಡಿಸಲಾಯಿತು. 


ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ಭಾರತದ ಸಂವಿಧಾನ, ಪ್ರಜಾಪ್ರಭುತ್ವದ ಬಗೆಗೆ ವಿವರಿಸಿ, ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ನುಡಿದರು. ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಶುಭ ಹಾರೈಸಿದರು. 


5ನೇ ತರಗತಿಯಿಂದ 10ನೇ ತರಗತಿಯ ವರೆಗಿನ ವಿದ್ಯಾರ್ಥಿಗಳು ಮತದಾನ ಮಾಡುವ ಮೂಲಕ ವಿದ್ಯಾರ್ಥಿ ನಾಯಕರನ್ನು ಆಯ್ಕೆ ಮಾಡಿದರು. ಆಯುಷ್ ಎಲ್ ರೈ (10) ವಿದ್ಯಾರ್ಥಿ ನಾಯಕನಾಗಿ, ದೇವ್‌ಮುರಾರಿ ಆರ್ ಗುಂಜನ್ (10) ಉಪ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿ ಕಾರ್ಯದರ್ಶಿ ಸ್ಥಾನಕ್ಕೆ ಎಸ್ಟಾವಿಯೋ ವೋನ್ ಜೋಸೆಫ್ (9), ಆಯ್ಕೆಯಾಗಿದ್ದು, ವಿರೋಧ ಪಕ್ಷದ ನಾಯಕನಾಗಿ ಯಶವಂತ್ ಬಿ ಹೆಚ್(10) ಚುನಾಯಿತರಾಗಿದ್ದಾರೆ. 


ಸಹ ಶಿಕ್ಷಕರಾದ  ಹರ್ಷಿತಾ, ಯೋಗಿತಾ ಎ, ನಿಶ್ಮಿತಾ,  ಆಶ್ವಿನಿ, ಲತಾ,  ಸುಂದರ್ ನಾವೂರ್, ನವೀನ್, ಸದಾಶಿವ ಭಟ್, ರಂಜಿತ್ ಮಥಾಯಿಸ್, ತೇಜ ಕುಮಾರ್ ಚುನಾವಣಾ ಅಧಿಕಾರಿಗಳಾಗಿ ಸಹಕರಿಸಿದರು. ಶಾಲೆಯ ಸೋಶಿಯಲ್ ಕ್ಲಬ್ ಜಾಗೃತಿ ಈ ಕಾರ್ಯಕ್ರಮವನ್ನು ನಿರ್ವಹಿಸಿತ್ತು. 



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top