ಜೂ. 28ರಂದು ಕಾಕೋಳಿನಲ್ಲಿ ಶ್ರೀಪಾದರಾಜರ ಮಧ್ಯಾರಾಧನಾ ಮಹೋತ್ಸವ

Upayuktha
0


 

ಬೆಂಗಳೂರು: ಶ್ರೀಮಧ್ವಾಚಾರ್ಯರ ದ್ವೈತ ಸಿದ್ಧಾಂತವನ್ನು ಜನಸಾಮಾನ್ಯರಲ್ಲಿ ಪ್ರಸಾರಗೊಳಿಸಿ ಹರಿದಾಸ ಸಾಹಿತ್ಯ ಮತ್ತು ಭಕ್ತಿ ಪರಂಪರೆಗೆ ಅಪಾರ ಕೊಡುಗೆ ನೀಡಿದ ಮಹಾನ್ ಸಂತ ಶ್ರೀ ಶ್ರೀಪಾದರಾಜರ ಮಧ್ಯಾರಾಧನಾ ಮಹೋತ್ಸವವು ಜೂನ್ 28, 2026 ಭಾನುವಾರ ಬೆಂಗಳೂರು ಹೊರವಲಯದ ಯಲಹಂಕ ತಾಲೂಕಿನ ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಕಾಕೋಳಿನ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ ಟ್ರಸ್ಟ್ ಆಶ್ರಯದಲ್ಲಿ ನಡೆಯಲಿದೆ.


ಶ್ರೀಮತಿ ಪಂಕಜಾ ಹಾಗೂ ಕೀರ್ತಿಶೇಷ ಹೊಳವನಹಳ್ಳಿ ನಾಗರಾಜಮೂರ್ತಿ ಮತ್ತು ಕುಟುಂಬದವರು ಪ್ರಧಾನ ಸೇವಾಕರ್ತರಾಗಿ, ಪಾಂಚಜನ್ಯ ಪ್ರತಿಷ್ಠಾನದ ಸಹಯೋಗದಲ್ಲಿ ಮಹೋತ್ಸವವನ್ನು ಆಯೋಜಿಸಲಾಗಿದೆ.


ಶ್ರೀಪಾದರಾಜ ಪ್ರತಿಷ್ಠಿತ ಬೃಂದಾವನಾಂತರ್ಗತ ಚತುರ್ಭುಜ ವೇಣುಗೋಪಾಲಕೃಷ್ಣ ಹಾಗೂ ಶ್ರೀ ವ್ಯಾಸರಾಜ ಪ್ರತಿಷ್ಠಾಪಿತ ಕಂಬದ ಆಂಜನೇಯ ಸನ್ನಿಧಿಯಲ್ಲಿ ಬೆಳಿಗ್ಗೆ 8.30 ಗಂಟೆಗೆ ಪಂಚಾಮೃತ ಅಭಿಷೇಕ, 9.00 ಗಂಟೆಗೆ ವೇದ ನಾಡಗೌಡ ನೇತೃತ್ವದ ವಿಜಯನಗರದಧೀಮಹಿ ಭಜನಾ ಮಂಡಳಿಯಿಂದ ಭಕ್ತಿಗಾಯನ ಕಾರ್ಯಕ್ರಮ ನಡೆಯಲಿದೆ.


ಬೆಳಿಗ್ಗೆ 10.00 ಗಂಟೆಗೆಶ್ರೀಪಾದರಾಜರ ಮಹಿಮೆ ವಿಷಯದ ಕುರಿತು ಪಂಡಿತ ಕಲ್ಲಾಪುರ ಪವಮಾನಾಚಾರ್ಯ ಹಾಗೂ ಪಂಡಿತ ಆಯನೂರು ಮಧುಸೂದನಾಚಾರ್ಯರು ವಿಶೇಷ ಉಪನ್ಯಾಸ ನೀಡಲಿದ್ದಾರೆ.


ಬೆಳಿಗ್ಗೆ 11.30 ಗಂಟೆಗೆ ಖ್ಯಾತ ಗಾಯಕಿ ಶ್ರೀಮತಿ ವಿದ್ಯಾ ದೇಶಪಾಂಡೆ ಅವರಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದ್ದು, ತಬಲಾದಲ್ಲಿ ಶ್ರೀ ಗೋಪಾಲ ಗುಡಿಬಂಡೆ ಹಾಗೂ ಹಾರ್ಮೋನಿಯಂನಲ್ಲಿ ಶ್ರೀ ಶ್ರೀಪಾದ ದಾಸ್ ಸಹಕರಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top