ಕಿರಿಯ
ಸ್ನೇಹಿತೆಯೊಬ್ಬಳು ತನ್ನ ಕ್ರೀಡಾ ಜೀವನದ
ಕುರಿತು ಲೇಖನವೊಂದನ್ನು ಬರೆದು ಅದನ್ನು ನನ್ನ ವಾಟ್ಸಪ್ ಗೆ
ಕಳುಹಿಸಿ ಅಕ್ಕ ನನ್ನ ಜೊತೆ
ನೀನು ಆಟವಾಡಿದ ನೆನಪುಗಳು ಇದ್ದರೆ ಅದನ್ನು ನನ್ನೊಂದಿಗೆ ಹಂಚಿಕೋ ಎಂದು ಹೇಳಿದಾಗ ನಾನು
ತುಣುಕು ತುಣುಕಾಗಿ ನನ್ನ ಕ್ರೀಡಾ ಜೀವನದ
ಕೆಲವು ವಿಷಯಗಳನ್ನು ಆಕೆಯೊಂದಿಗೆ ಹಂಚಿಕೊಂಡೆ.
ಚಿಕ್ಕಂದಿನಲ್ಲಿ
ಕೊಪ್ಪಳದ ರೇಲ್ವೆ ಸ್ಟೇಷನ್ ಬಳಿಯಲ್ಲಿ ಅತ್ಯಂತ ವಿಶಾಲವಾದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ನಮಗೆ ಆಡಲು ಸ್ಥಳದ
ಕೊರತೆ ಇರಲಿಲ್ಲ. ಮನೆಯ ಕಾಂಪೌಂಡ್ ನ
ಒಳ ಆವರಣದಲ್ಲಿ ಕಟ್ಟೆಯ ಕೆಳಭಾಗದಲ್ಲಿ ಎರಡು ದೊಡ್ಡ ದೊಡ್ಡ
ಗೂಣುಗಳಿದ್ದು ಐದಾರು ಜನ ಆರಾಮಾಗಿ ಕೂತು
ಆಟ ಆಡಬಹುದಿತ್ತು. ನನ್ನ ತಂದೆ ಹೈದರಾಬಾದ್
ನಿಂದ ತಂದು ಕೊಡುತ್ತಿದ್ದ ಅಂದಿನ
ಕಾಲಕ್ಕೆ ಆಧುನಿಕ ಎಂದೆನಿಸುವ ನನ್ನೆಲ್ಲಾ ಅಡುಗೆ ಆಟದ ಸಾಮಾನುಗಳನ್ನು ಜೋಡಿಸಿ
ಅಡುಗೆ ಆಟವನ್ನು ನಾವು ಸ್ನೇಹಿತರೆಲ್ಲ ಸೇರಿ
ಆಡುತ್ತಿದ್ದೆವು.
ಜಾಲಿ
ಗಿಡದ ಎಲೆಯನ್ನು ಹರಿದು ಅವಲಕ್ಕಿ ಮಾಡಿದರೆ ಚಹಾದ ಕಪ್ಪುಗಳಲ್ಲಿ ನೀರು
ಹಾಕಿ ಚಹಾ ಎಂದು ಕೊಡುತ್ತಿದ್ದೆವು
. ಮಧ್ಯಾಹ್ನದ ಊಟಕ್ಕೆ ಮನೆಗೆ ಬರುತ್ತಿದ್ದ ನನ್ನ ತಂದೆ ಬೈಕ್
ನಿಂದ ಕೆಳಗಡೆ ಇಳಿಯುತ್ತಲೇ ಇವತ್ತು ಅಡುಗೆ ಏನು ಮಾಡಿದ್ದೀರಿ ಎಂದು
ಕೇಳುತ್ತಿದ್ದರು. ಹುಮ್ಮಸ್ಸಿನಿಂದ ನಾವೆಲ್ಲಾ ಸ್ನೇಹಿತರು ಬೇರೆ ಬೇರೆ ಅಡುಗೆಗಳ
ಹೆಸರನ್ನು ಹೇಳುತ್ತಿದ್ದೆವು. ಆಗ ನನ್ನ ಅಪ್ಪ
ತಾಯಿಯನ್ನು ಕುರಿತು ನಾನು ಇವತ್ತು ಮಕ್ಕಳ
ಮನೆಯಲ್ಲಿ ಊಟ ಮಾಡುತ್ತೇನೆ ಎಂದು
ಹೇಳುತ್ತಿದ್ದರಲ್ಲದೆ ನಾವು ತಟ್ಟೆಯಲ್ಲಿ ಹಾಕಿಕೊಟ್ಟದ್ದನ್ನು
ತಿಂದಂತೆ ನಟಿಸಿ ನಮಗೆ ಶಭಾಷ್ ಗಿರಿ
ಕೊಟ್ಟು ಮತ್ತೆ ಮನೆಯ ಒಳಗೆ ಹೋಗಿ
ಊಟ ಮಾಡುತ್ತಿದ್ದರು. ನಾವು ಮಕ್ಕಳಿಗೆಲ್ಲ ಇದು
ತುಂಬಾ ಖುಷಿಯ ವಿಷಯವಾಗಿರುತ್ತಿತ್ತು.
ಒಂದೇ
ಕಂಪೌಂಡಿನಲ್ಲಿ ನಾಲ್ಕಾರು ಮನೆಗಳು ಇದ್ದು ಕಣ್ಣ ಮುಚ್ಚಾಲೆ ಆಟ
ನಮ್ಮ ಅಚ್ಚುಮೆಚ್ಚಿನ ಆಟವಾಡಲು ನಮ್ಮ ನಾಲ್ಕು ಮನೆಗಳ
ಹೊರಾವರಣವನ್ನು ನಾವು ಸುತ್ತು ಹಾಕುತ್ತಾ
ಆಡುತ್ತಿದ್ದೆವು. ಇನ್ನು ಯಾರಾದರೂ ಹೊಸ ಮನೆಗಳನ್ನು ಕಟ್ಟುತ್ತಿದ್ದರೆ
ಆ ಮನೆಯಲ್ಲಿ ಕೂಡ ಕಣ್ಣ ಮುಚ್ಚಾಲೆ
ಆಟ ಆಡುತ್ತಿದ್ದೆವು. ನಿರ್ಮಾಣ ಹಂತದ ಕಟ್ಟಡದ ಹೊರಗಿರುವ
ಉಸುಕಿನಲ್ಲಿ ಗುಬ್ಬಚ್ಚಿ ಮನೆಗಳನ್ನು ಕಟ್ಟುವ, ಅವುಗಳನ್ನು ಅಲಂಕರಿಸುವ ಆಟ ಕೂಡ ಆಡುತ್ತಿದ್ದೆವು.
ಇನ್ನು
ನಾವು ಹೆಣ್ಣು ಮಕ್ಕಳು ಆಣೆಕಲ್ಲಿನ ಆಟ, ಉಪ್ಪಿನ ಮೂಟೆ
ಆಟ, ಕುಂಟೆಬಿಲ್ಲೆ, ಕುಂಟು ಮುಟ್ಟಾಟ, ಸರಬಡಿಗೆ ಆಟ, ಜೋಡು ಮುಟ್ಟಾಟ
ಹೀಗೆ ನೂರೆಂಟು ಹೊರಾಂಗಣ ಆಟಗಳನ್ನು ಮಾಡಿದರೆ, ಮಧ್ಯಾಹ್ನದ ಬಿಸಿಲಿನ ಸಮಯದಲ್ಲಿ ಚಕ್ಕ ಎಂದು ಕರೆಯಲ್ಪಡುವ
ಕವಡೆ ಆಟ, ಹುಲಿಮನೆ ಆಟ,
ಬಳೆ ಚೂರಿನ ಆಟ ಮುಂತಾದ ಹತ್ತು
ಹಲವು ಆಟಗಳನ್ನು ಆಡುತ್ತಿದ್ದೆವು ಎಷ್ಟೋ ಬಾರಿ ಆಟ ಆಡುವಾಗ
ಬಿದ್ದು ಮೊಣಕಾಲು, ಮೊಣಕೈ ಕೆತ್ತಿಸಿಕೊಂಡದ್ದು ಕೂಡ ಉಂಟು. ಇವೆಲ್ಲ
ಚಿಕ್ಕಂದಿನಲ್ಲಿ ಆಡುತ್ತಿದ್ದ ಮನೆಯ ಹತ್ತಿರದ ಆಟಗಳಾದರೆ
ಮುಂದೆ ಶಾಲೆಗೆ ಹೋದ ನಂತರ ಅಲ್ಲಿ
ಕೂಡ ಆಟಗಳಲ್ಲಿ ನಾನು ಪಾಲ್ಗೊಳ್ಳುತ್ತಿದೆ.
ಐದನೇ
ತರಗತಿಗೆ ಮನೆಯಿಂದ ಒಂದು ಒಂದೂವರೆ ಕಿಲೋಮೀಟರ್
ದೂರದ ಹಿರಿಯ ಪ್ರಾಥಮಿಕ ಶಾಲೆಗೆ ಪ್ರವೇಶ ಪಡೆದ ನಾನು ಸರಿಸುಮಾರು
ಆರು ವರ್ಷಗಳ ಕಾಲ ಅಂದರೆ 5ನೇ
ತರಗತಿಯಿಂದ 10ನೇ ತರಗತಿಯವರೆಗೆ ಕೋಕೋ
ಆಟದಲ್ಲಿ ಜಿಲ್ಲಾ ಮಟ್ಟದವರೆಗೂ ಹೋಗಿ ಆಡಿ ಬಂದಿದ್ದೇನೆ.
ಐದನೇ ತರಗತಿಯಲ್ಲಿ ಎಕ್ಸ್ಟ್ರಾ ಪ್ಲೇಯರ್ ಎಂದು ಆಯ್ಕೆಯಾದ ನಾನು
ನಂತರ ಎರಡನೇ ಮೂರು ಜನ ಆಟಗಾರರಲ್ಲಿ
ನಂತರ ಮೊದಲನೇ ಮೂರು ಜನ ಆಟಗಾರರಲ್ಲಿ
ನಂತರ ಮುಖ್ಯ ಆಟಗಾರ್ತಿಯಾಗಿ ಕೋಕೋ ಆಟದಲ್ಲಿ ಸದಾ
ಪಾಲ್ಗೊಂಡಿದ್ದೇನೆ. ನನ್ನಿಂದ ಬಂದ ಒಳ್ಳೆಯ ಆಟ
ಮುಂದೆ ನನ್ನನ್ನು ಕೋಕೋ ಆಟದಲ್ಲಿ ಕ್ಯಾಪ್ಟನ್
ಆಗಿ ಸಿತ್ತು. ಒಂದು ಬಾರಿ ಎಂದು
ಸತತ ಏಳುವರೆ ನಿಮಿಷಗಳ ಕಾಲ ನನ್ನನ್ನು ಔಟ್
ಮಾಡಲು ಸಾಧ್ಯವಾಗದೆ ಹೋದಾಗ ಎದುರಾಳಿ ತಂಡದ ಕ್ರೀಡಾಪಟು ನನ್ನ
ಕಾಲಿಗೆ ಜೋರಾಗಿ ಹೊಡೆದಾಗ ಮುಗ್ಗರಿಸಿ ಬಿದ್ದ ನಾನು ನನ್ನ ಒಂದು
ಹಲ್ಲನ್ನು ಮುರಿದುಕೊಂಡದ್ದು ನನ್ನ ಕ್ರೀಡಾ ಬದುಕಿನ
ಮಹತ್ತರವಾದ ನೆನಪು.
ಏಳು
ಮತ್ತು 10ನೇ ತರಗತಿಯಲ್ಲಿ ನಾನು
ನಮ್ಮ ಶಾಲೆಯ ಕೋಕೋ ಆಟದ ಕ್ಯಾಪ್ಟನ್
ಆಗಿ ತಂಡವನ್ನು ಮುನ್ನಡೆಸಿದ್ದೆ.ಆರು ಮತ್ತು ಏಳನೇ
ತರಗತಿಯಲ್ಲಿ ಫೋರ್ ಇಂಟು ಹಂಡ್ರೆಡ್
ರಿಲೇ ಕ್ರೀಡಾಕೂಟದಲ್ಲಿ ಕೂಡ ನಾನು ಜಿಲ್ಲಾ
ಮಟ್ಟದವರೆಗೆ ಹೋಗಿ ಬಂದಿದ್ದೇನೆ.
9 ಮತ್ತು
10ನೇ ತರಗತಿಯಲ್ಲಿ ಕೋ ಕೋ ಆಟದ
ಜೊತೆಗೆ ವಾಲಿಬಾಲ್ ಆಟದಲ್ಲಿ ಪಾಲ್ಗೊಂಡು ಜಿಲ್ಲಾ ಮಟ್ಟದಲ್ಲಿ ಪಾಲ್ಗೊಂಡಿದ್ದೇನೆ. ಕೇವಲ ಒಂದು ಬಾರಿ
ಮಾತ್ರ ವಿಭಾಗ ಮಟ್ಟಕ್ಕೆ ಆಡಲು ಹೋಗಿದ್ದು ಸಂತಸದ
ವಿಷಯವಾಗಿತ್ತು.
ಆಗ
ನಮ್ಮನ್ನು ಜಿಲ್ಲಾಮಟ್ಟದ ಆಟಗಳಿಗೆ ಕರೆದೊಯ್ದರೂ ಕೂಡ ಮೂಲಭೂತ ಸೌಲಭ್ಯಗಳನ್ನು
ಹೊಂದಿರದ ಶಾಲೆಗಳಲ್ಲಿ ವಸತಿ ವ್ಯವಸ್ಥೆಯನ್ನು ಮಾಡಿರುತ್ತಿದ್ದರು.
ಎಲ್ಲಾ ರೀತಿಯ ಸವಲತ್ತುಗಳನ್ನು ಹೊಂದಿರದಿದ್ದರೂ ಇದ್ದುದರಲ್ಲಿಯೇ ಹೊಂದಿಕೊಂಡು ಆಟವಾಡಿ ಬರುತ್ತಿದ್ದ ನಮಗೆ ಅಲ್ಲಿ ಕೊರತೆಯ
ಭಾವ ಕಾಣುತ್ತಲೇ ಇರಲಿಲ್ಲ. ಇನ್ನು ನಮಗೆ ಕೊಡುತ್ತಿದ್ದ ಊಟ
ಕೂಡ ಅಷ್ಟೇನೂ ರುಚಿಕರವಾಗಿ ಇರದಿದ್ದರೂ ಕೂಡ ಹೊಂದಿಕೊಂಡು ಹೋಗುವ
ಸ್ವಭಾವ ನಮ್ಮದಾಗಿರುತ್ತಿತ್ತು. ಬಹುಶಹ ಕ್ರೀಡೆ ನಮಗೆ ಕಲಿಸಿದ ಪಾಠಗಳು
ನೂರೆಂಟು. ಎಲ್ಲವನ್ನು ಏಕ ಚಿತ್ತದಿಂದ ಸ್ವೀಕರಿಸುವ,
ಹೊಂದಾಣಿಕೆಯ ಸ್ವಭಾವ ಹಾಗೂ ಸಮಾಧಾನದ ಗುಣವನ್ನು
ಕ್ರೀಡೆ ನಮಗೆ ಕಲಿಸಿತ್ತು.
ಇದರ
ಜೊತೆಗೆ ಕ್ರೀಡೆಯ ಸ್ಫೂರ್ತಿ ಅದ್ಭುತವಾಗಿತ್ತು. ಸೋತಾಗ ಮನಸ್ಸಿಗೆ ಕೊಂಚ ಬೇಸರವಾದರೂ ಮತ್ತೆ
ಅದೇ ಹುಮ್ಮಸ್ಸಿನಿಂದ ಆಟದಲ್ಲಿ ಪಾಲ್ಗೊಳ್ಳುವ ಮನಸ್ಥಿತಿ ನಮ್ಮದಾಗಿತ್ತು. ಸಾಂಘಿಕ ಬದುಕಿನ ಪಾಠ ನಮಗೆ ಕ್ರೀಡೆಯಿಂದಲೇ
ದೊರೆತಿತ್ತು ಎಂಬುದು ನಿರ್ವಿವಾದದ ಸಂಗತಿ.
ಆಟವಾಡಿದ
ಪ್ರತಿಯೊಬ್ಬ ವ್ಯಕ್ತಿಗೂ ಸ್ಪರ್ಧೆಯ ಪ್ರಾಮುಖ್ಯತೆಯನ್ನು ತಿಳಿದಿರುತ್ತಾನೆ. ನಿರಂತರ ಪ್ರಯತ್ನ ಕಠಿಣ ಶಿಸ್ತುಗಳಿಗೆ ಒಳಪಟ್ಟು
ಬದುಕುವುದನ್ನು ರೂಢಿಸಿಕೊಂಡಿರುತ್ತಾನೆ. ಸೋಲು ಗೆಲುವುಗಳಿಗೆ ಆತ
ಎಂದಿಗೂ ಅಂಜುವುದಿಲ್ಲ ಸೋಲನ್ನು ಅತ್ಯಂತ ಸ್ಪರ್ಧಾತ್ಮಕವಾಗಿ ಸ್ವೀಕರಿಸಿ ಗೆಲುವನ್ನು ಕೂಡ ಸಮಚಿತ್ತದಿಂದ ಸಂಭ್ರಮಿಸುವ
ಮನಸ್ಥಿತಿ ಪ್ರತಿಯೊಬ್ಬ ಕ್ರೀಡಾಳುವಿನದಾಗಿರುತ್ತದೆ. ನಿಜ ಹೇಳಬೇಕೆಂದರೆ ಕನಿಷ್ಠ
ಎರಡು-ಮೂರು ವರ್ಷಗಳ ಕಾಲ
ಮಕ್ಕಳನ್ನು ವಿವಿಧ ಬಗೆಯ ಸ್ಪರ್ಧೆಗಳಿಗೆ ಕಳಿಸಿ
ಎಂದು ನಾನು ಪಾಲಕರಿಗೆ ಸಲಹೆ
ಜೊತೆಗೆ ಒತ್ತಾಯವನ್ನು ಕೂಡ ಮಾಡುತ್ತೇನೆ. ಕಾರಣ
ಎಲ್ಲವನ್ನು ಅತ್ಯಂತ ಕ್ರೀಡಾ ಮನೋಭಾವದಿಂದ ತೆಗೆದುಕೊಳ್ಳುವ ಮನೋಭಾವ ನಾವು ಕ್ರೀಡಾಳುಗಳಲ್ಲಿ ಇರುತ್ತದೆ.
ಆಟದಲ್ಲಿ
ಸೋಲು ಗೆಲುವುಗಳನ್ನು ಸಮಚಿತ್ತದಿಂದ ಸ್ವೀಕರಿಸಿದ ಆತ ಬದುಕಿನಲ್ಲಿ ಕೂಡ
ಇದೇ ನಿಲುವುಗಳನ್ನು ಅಳವಡಿಸಿಕೊಂಡು ಮುಂದೆ ಸಾಗುತ್ತಾನೆ. ಆದ್ದರಿಂದಲೇ ನಮ್ಮ ಹಿರಿಯರು ಹೇಳಿರುವುದು
ಕ್ರೀಡೆ ಇಲ್ಲದ ಬದುಕು ಕೀಡೆಯಂತೆ ಎಂದು.
ಆಟಗಳಲ್ಲಿ
ಪಾಲ್ಗೊಳ್ಳಿ.... ನಿಮ್ಮ ಮಕ್ಕಳಿಗೂ ಅವಕಾಶ ನೀಡಿ
ವೀಣಾ ಹೇಮಂತ್ ಗೌಡ ಪಾಟೀಲ್


