ಇಳಕಲ್ ನವಲಿ ಶ್ರೀ ಜಡೆ ಶಂಕರಲಿಂಗ ದೇವಸ್ಥಾನದಲ್ಲಿ ವಿಶೇಷ ಪೂಜೆ, ದಾಸೋಹ

Upayuktha
0

ಇಳಕಲ್: ತಾಲೂಕಿನ ಕಂದಗಲ್ಲ ಸಮೀಪದ ಐತಿಹಾಸಿಕ ಪ್ರಸಿದ್ಧ ಸುಕ್ಷೇತ್ರ, ಶಕ್ತಿಕೇಂದ್ರ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರ, ಸುಂದರ ಪರಿಸರದ ಕೃಷ್ಣನದಿ ದಡದಲ್ಲಿ ಇರುವ ಸುಂದರವಾದ ಪುಣ್ಯಕ್ಷೇತ್ರ ನವಲಿಯ ಜಡೆಯ ಶಂಕರಲಿಂಗ ದೇವಸ್ಥಾನದಲ್ಲಿ ಅಧಿಕ ಮಾಸ ಹಾಗೂ ಅಮಾವಾಸ್ಯೆಯ ವಿಶೇಷ ಪೂಜೆ, ಅಭಿಷೇಕ್ ಮತ್ತು ದಾಸೋಹ ಸೇವೆ ದೇವಸ್ಥಾನದ ಆವರಣದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.


ಚನ್ನಪ್ಪ ಹರಸೂರ ಮಸ್ಕಿ ಅಧ್ಯಕ್ಷರು ದಾಸೋಹ ಸಮಿತಿ ಮತ್ತು ಅಧ್ಯಕ್ಷರು ಬಣಗಾರ್ ಸಿಂಪಿ ಸಮಾಜ ಬೆಂಗಳೂರು ಇವರು ಸಭೆ ಅಧ್ಯಕ್ಷತೆ ವಹಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.


ಸುಕ್ಷೇತ್ರ ನವಲಿ ಶ್ರೀ ಜಡೆಯ ಶಂಕರಲಿಂಗ ದೇವಸ್ಥಾನದಲ್ಲಿ ಪ್ರತಿ ಅಮಾವಾಸ್ಯೆ ದಿವಸ ವಿಶೇಷ ಕಾರ್ಯಕ್ರಮಗಳೊಂದಿಗೆ ಪ್ರಸಾದ ಸೇವೆ ಇದ್ದು ಭಕ್ತರು ಶ್ರದ್ಧಾ ಭಕ್ತಿಯಿಂದ ಭಾಗವಹಿಸಿ ಪ್ರತಿ ಅಮಾವಾಸ್ಯೆ ದಿವಸ ನಡೆಯುವ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕೆಂದು ದಾಸೋಹ ಸಮಿತಿಯ ಕಾರ್ಯದರ್ಶಿ ಸುರಪುರದ ಪ್ರಕಾಶ ಬಣಗಾರ್ ಕರೆ ನೀಡಿದರು.


ಪ್ರತಿಯೊಬ್ಬ ಸಮಾಜ ಬಾಂಧವರು ಸುಕ್ಷೇತ್ರ ಶ್ರೀ ಜಡೆಯ ಶಂಕರಲಿಂಗ ದೇವಸ್ಥಾನಕ್ಕೆ ಆಗಮಿಸಿ ಅಭಿವೃದ್ದಿ, ಹಾಗೂ ಸಂಘಟನೆ ಬಗ್ಗೆ  ಚರ್ಚೆ ಮತ್ತು ಬಣಗಾರ ಸಮಾಜದ ಕುಲ ಗುರು ಶರಣ ಶ್ರೀ ಶಂಕರ್ ದಾಸಿಮಯ್ಯಯನವರ ಜನ್ಮಸ್ಥಳ ಕಂದಗಲ್ಲ ಗ್ರಾಮದ ದೇವಸ್ಥಾನದ  ಅಭಿವೃದ್ಧಿಯ ಬಗ್ಗೆ  ಎಲ್ಲಾ ಸಮಾಜ ಬಾಂಧವರು ಮತ್ತು ಸದ್ಭಕ್ತರು ವಿಚಾರ ವಿನಿಮಿಯ ಮಾಡಿ ಅಭಿವೃದ್ಧಿಯತ್ತ ಗಮನಹರಿಸಬೇಕು ಎಂದು ಹಟ್ಟಿಯ ಶಿವರಾಜ್ ಕಂದಗಲ್ಲ ವಿನಂತಿಸಿಕೊಂಡರು. ವೀರೇಶ್ ಸಿಂಪಿ ಪತ್ರಕರ್ತರು ಹಾಗೂ ಅಧ್ಯಕ್ಷರು ಮೂಲ ಶರಣ ಶ್ರೀ ಶಂಕರ ದಾಸಿಮಯ್ಯ ಹಾಗೂ ಶಂಕರಲಿಂಗ ದೇವಸ್ಥಾನ ಕಂದಗಲ್ಲ, ಶೇಖರ ನಾಗಲಿಕರ್, ಉಮಾ ಹರಸೂರ ಮಸ್ಕಿ, ಬಸವರಾಜ ಸಮಾಳದ, ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.  ಸಮಾಜ ಸಂಘಟನೆ ಮತ್ತು ಅಭಿವೃದ್ಧಿ ಬಗ್ಗೆ ಜಗದೀಶ ಸರಾಫ್ ಇಲಕಲ್, ಶ್ರೀಧರ ಮಸ್ಕಿ, ಅಂಬರೀಶ್ ಅರಸೂರ ಮಸ್ಕಿ ಮಾತನಾಡಿದರು.


ಈ ಸಂದರ್ಭದಲ್ಲಿ ವಾಸು ವೀರೇಶ ಅನೆಹೂಸೂರ, ಪಂಚಾಕ್ಷರಿ ಹಿರೇಮಠ, ವೈ ಬಿ ಚಳ್ಳಿಮರದ, ಇನ್ನು ಅನೇಕ ಸಮಾಜ ಬಾಧವರು  ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top