ಬದುಕಿನ ವಾಸ್ತವ: ದಿನಬಳಕೆಯ ಸುಳ್ಳುಗಳು

Upayuktha
0

ಟೀಚರು ಹೇಳುವ ಸುಳ್ಳು: 

ಉಸಿರು ತೆಗೆದರೆ ಒದ್ದು ಹೊರಗೆ ಹಾಕ್ತೇನೆ.


ವಿದ್ಯಾರ್ಥಿ ಹೇಳುವ ಸುಳ್ಳು:

ಎಲ್ಲ ಸರಿಯಾಗಿಯೇ ಬರೆದಿದ್ದೇನೆ. ಮೇಷ್ಟ್ರು ಮಾರ್ಕು ಕೊಡಲಿಲ್ಲ.


ಅಪ್ಪ ಹೇಳುವ ಸುಳ್ಳು:

ಅವನಿಗೆ ನಾಳೆಯಿಂದ ಊಟ ಹಾಕ್ಬೇಡ. ಬುದ್ಧಿ ಬರಲಿ.


ಅಮ್ಮ ಹೇಳುವ ಸುಳ್ಳು:

ಇನ್ನು ಮುಂದೆ ಹೀಗೆ ಮಾಡ್ಬೇಡ್ವೋ. ಅಪ್ಪ ಕೊಂದುಬಿಡ್ತಾರೆ.


ಗಂಡ ಹೇಳುವ ಸುಳ್ಳು:

ನೀನಿಲ್ಲದೆ ಸಂಸಾರ ಸಾಗುವುದಿಲ್ಲ ಅಂದ್ಕೊಂಡೆಯಾ? ಹೋಗು ನಿಮ್ಮಪ್ಪನ ಮನೆಗೆ. ತನ್ನ ಕೋಳಿ ಕೂಗಿದರೆ ಮಾತ್ರ ಬೆಳಕು ಅಂತ ತಿಳೀಬೇಡ.


ಹೆಂಡತಿ ಹೇಳುವ ಸುಳ್ಳು:

ನೀವು ಹೀಗೆ ಮಾಡಿದ್ರೆ ನಾನು ಸತ್ತು ಹೋಗ್ತೇನೆ. ಆಗ್ಲೇ ನೀವು ನನ್ನ ಆಸೆ ಈಡೇರಿಸುವುದು.


ಮಗ ಹೇಳುವ ಸುಳ್ಳು:

ಅಪ್ಪನಿಗೆ ಹೇಳು.. ಕೊಡಿಸದಿದ್ರೆ ನಾನು ಮನೆಬಿಟ್ಟು ಹೋಗ್ತೇನೆ.


ಮಗಳು ಹೇಳುವ ಸುಳ್ಳು:

ನಾನು ನಾಳೆಯಿಂದ ಕಾಲೇಜಿಗೇ ಹೋಗುವುದಿಲ್ಲ. ಅಪ್ಪ ಏಕೆ ಹೀಗೆ? 


ರೋಗಿ ಹೇಳುವ ಸುಳ್ಳು:

ಡಾಕ್ಟೇ, ನನ್ನ ಜೀವ ಹೋಗ್ತಾ ಇದೆ.


ಡಾಕ್ಟ್ರು ಹೇಳುವ ಸುಳ್ಳು:

ನಿಮಗೇ ಏನೂ ಆಗುವುದಿಲ್ಲ. ನಾಳೆಗೆ ಹುಷಾರಾಗ್ತೀರಿ.


ಅಧಿಕಾರಿ ಹೇಳುವ ಸುಳ್ಳು:

ಟೈಮಿಲ್ಲ ರೀ. ನಾನೀಗ ತುಂಬ ಬಿಸಿ’


ಆಳು ಹೇಳುವ ಸುಳ್ಳು:

ಸಖತ್ ಕಾಯಿಲೆ ಸರ್/ ಟ್ರಾಫಿಕ್ ಜಾಮಾಗಿತ್ತು ಸರ್


ಅತಿಥಿ ಹೇಳುವ ಸುಳ್ಳು:

ಯಾವುದೋ ಅರ್ಜೆಂಟ್ ಕೆಲಸ ಇತ್ತು.  ಬೇಗ ಬರಲಾಗಲಿಲ್ಲ.


ಸಾಲ ಕೇಳಿದವರಿಗೆ ಹೇಳುವ ಸುಳ್ಳು:

ಛೆ. ನಿನ್ನೆ ಯಾರಿಗೋ ಕೊಟ್ಟುಬಿಟ್ಟೆ. ಒಂದು ದಿನ ಮೊದಲೇ ಕೇಳುವುದಲ್ವೇ?


ಸಾಲಿಗ ಹೇಳುವ ಸುಳ್ಳು:

ನಾಳೆ ಕೊಟ್ಟು ಬಿಡ್ತೇನೆ ಸರ್. ಖಂಡಿತ. ವರಿ ಮಾಡ್ಬೇಡಿ.


ವ್ಯಾಪಾರಿ ಹೇಳುವ ಸುಳ್ಳು:

ತುಂಬ ಚೆನ್ನಾಗಿದೆ. ನಿಮಗೆ ಮಾತ್ರ ಅಸಲು ಬೆಲೆಗೇ ಕೊಟ್ಟುಬಿಡ್ತೀನಿ ಸರ್. ಬೋಣಿ ಮಾಡಿ.


ಜಾಹೀರಾತು ಹೇಳುವ ಸುಳ್ಳು:

ಕೂದಲು ಉದುರುವುದೇ? ನಮ್ಮ ಶ್ಯಾಂಪೂ ಬಳಸಿ. ಒಂದೇ ವಾರಕ್ಕೆ ಫಲಿತಾಂಶ ಗ್ಯಾರೆಂಟಿ.


ರಾಜಕಾರಣಿ ಹೇಳುವ ಸುಳ್ಳು:

ಜನತಾ ಸೇವೆಯೇ ಜನಾರ್ದನ ಸೇವೆ. ಓಟು ಕೊಟ್ಟು ನಿಮ್ಮ ಸೇವೆ ಮಾಡುವ ಅವಕಾಶ ಕೊಡಿ.


ಸ್ನೇಹಿತ ಹೇಳುವ ಸುಳ್ಳು:

ಖಂಡಿತ ನಾನು ಯಾರಿಗೂ ಹೇಳುವುದಿಲ್ಲ ಕಣೋ. ಹೇಳು ಏನದು ವಿಚಾರ?


ಇವೆಲ್ಲ ಸುಳ್ಳುಗಳೆಂದು ನೀವೇನೂ ಸುಳ್ಳು ಹೇಳುವುದಿಲ್ಲ ತಾನೆ?


-ಡಾ. ಪ್ರಮೀಳಾ ಮಾಧವ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top