ತಿರುವನಂತಪುರ: ಮಳೆಕೊಯ್ಲು, ಜಲಮರುಪೂರಣ ಹಾಗೂ ಸೌರಯೋಜನೆಯ ಮೂಲಕ ಬರಡು ನೆಲದಲ್ಲಿ ಹಸುರು ಕ್ರಾಂತಿಯನ್ನುಂಟು ಮಾಡಿ ತನ್ನ ಯೋಜನೆಗಳೆಲ್ಲವನ್ನೂ ಸಾಮಾಜಿಕ ಜಾಗೃತಿಗೆ ಮೀಸಲಿಟ್ಟು ಗಮನ ಸೆಳೆದಿರುವ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಹಾಗೂ ಕಣ್ಣೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ.ರತ್ನಾಕರ ಮಲ್ಲಮೂಲೆ ಗೆ ವನಮಿತ್ರ ಪ್ರಶಸ್ತಿಯನ್ನು ಕೇರಳ ಸರ್ಕಾರದ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಸಚಿವ ಶಿಬು ಬೇಬಿ ಜೋನ್ ನೀಡಿ ಅಭಿನಂದಿಸಿದರು.
ವಿಶ್ವ ಪರಿಸರದಿನದ ಭಾಗವಾಗಿ ಕೇರಳ ಸರಕಾರದ ಅರಣ್ಯ ಇಲಾಖೆಯವರು ತಿರುವನಂತಪುರ ನಂದವನದ ತಮ್ಮ ಮುಖ್ಯ ಕಛೇರಿಯ ವನಶ್ರೀ ಸಭಾಂಗಣದಲ್ಲಿ ಆಯೋಜಿಸಿದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಸಿ.ಪಿ ಜೋನ್ ಅಧ್ಯಕ್ಷತೆ ವಹಿಸಿದರು. ಶಿಬು ಬೇಬಿ ಉದ್ಘಾಟಿಸಿ ಪ್ರಶಸ್ತಿಪ್ರದಾನ ಮಾಡಿದರು. ಇಲಾಖೆಯ ಉನ್ನತ ಅಧಿಕಾರಿಗಳು, ವಿವಿಧ ಜಿಲ್ಲೆಯ ಪ್ರತಿನಿಧಿಗಳು, ವಿವಿಧ ಇಲಾಖೆಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ರತ್ನಾಕರ ಮಲ್ಲಮೂಲೆ ಯವರು ಕುಟುಂಬ ಸಮೇತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾಸರಗೋಡಿಗೆ ಆಗಮಿಸುವ ಸಂದರ್ಭದಲ್ಲಿ ಮಲ್ಲಮೂಲೆಯವರ ಬನವಾಸಿ ಹಸಿರು ಯೋಜನೆಯನ್ನು ಖುದ್ದಾಗಿ ವೀಕ್ಷಿಸಲು ಬರುವುದಾಗಿ ಸಚಿವರು ಭರವಸೆ ನೀಡಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


