ಪುತ್ತೂರು: ಸುದಾನ ಶಾಲಾ ಪ್ರಾರಂಭೋತ್ಸವ

Upayuktha
0

 


ಪುತ್ತೂರು: ಇಲ್ಲಿನ ಸುದಾನ ವಸತಿ ಶಾಲೆಯಲ್ಲಿ  ನೂತನ ಶೈಕ್ಷಣಿಕ ವರ್ಷ 2026-27ನ್ನು ಪ್ರಾರಂಭೋತ್ಸವ ನಡೆಯಿತು. ದೀಪೋಜ್ವಲನೆಯನ್ನು ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಶಾಲಾ ಸಂಚಾಲಕರಾದ ರೆ. ವಿಜಯ ಹಾರ್ವಿನ್ ವಿದ್ಯಾರ್ಥಿಗಳು ಜ್ಞಾನವನ್ನು ಪಡೆಯಲು ಸದಾ ಪ್ರಯತ್ನಿಸಬೇಕು  ಅವಕಾಶಗಳನ್ನು ಬಳಸಿಕೊಳ್ಳಿ ಎಂದು ಕರೆನೀಡಿದರು.

ಶಾಲಾ ಆಡಳಿತ ಮಂಡಳಿಯ  ಕಾರ್ಯದರ್ಶಿಯವರಾದ  ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಶಿಕ್ಷಣವು ಹೊರೆಯಲ್ಲ ಅದು ಯಶಸ್ಸನ್ನು ಪಡೆಯಲಿರುವ ರಹದಾರಿ ಎಂದು  ನುಡಿದರು

ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾನಾಗರಾಜ್ ಶುಭಾಶಂಸನೆಗೈದರು. ಪ್ರೌಢಶಾಲಾ ವಿದ್ಯಾರ್ಥಿಗಳು ಆರಂಭೋತ್ಸವದ ಹಾಡುಗಳನ್ನು ಹಾಡಿದರು.  ಸುದಾನ ವಸತಿ ನಿಲಯದ ವಿದ್ಯಾರ್ಥಿಗಳಾದ ಕುಶಾಲ್ ಡಿ ಎಸ್ ಮತ್ತು ಶರೋನ್ ಜಾಯ್ ಸ್ಟನ್ ಟಾಮ್ ಹಾಗೂ ಜೆರಿಗಳಾಗಿ ವಿದ್ಯಾರ್ಥಿಗಳನ್ನು ಮನರಂಜಿಸಿದರು.  ವಿದ್ಯಾರ್ಥಿನಿ  ರಿಯೋನಾ ವೆನಿಶಾ ವೇಗಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಆಡಳಿತಾಧಿಕಾರಿ ಸುಶಾಂತ್ ಹಾರ್ವಿನ್,ಉಪಮುಖ್ಯಶಿಕ್ಷಕಿ ಲವೀನಾ ನವೀನ್ ಹನ್ಸ್, ಸಂಯೋಜಕರಾದ  ಪ್ರತಿಮಾ,ಗಾಯತ್ರಿ ಕೆ, ಅಮೃತವಾಣಿ ಮತ್ತು ಪೋಷಕರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top