ಕವನ: ಸಂಭ್ರಮದ ಸ್ವಾಗತ

Upayuktha
0



ಶಾಲೆಯ ಬಾಗಿಲು ತೆರೆದಿದೆ ಚಿಣ್ಣರೆ

ಹರುಷದಿ ಬನ್ನಿರಿ ಹೊಸ ಜಗಕೆ

ಗೆಳೆಯರ ಜೊತೆ ಒಡನಾಡುವುದಕ್ಕೆ

ಮುದದಲಿ ಬನ್ನಿರಿ ನಿಮ್ಮನೆಗೆ||


ದಿನದಿನ ಹೊಸತನ ಅರಿವಿನ ಬೆಳಕು

ಪ್ರೀತಿಯ ತೋರುವ ಶಿಕ್ಷಕರು

ಸುತ್ತಲು ಹಸಿರು ಸಂತಸದುಸಿರು

ಸ್ವಾಗತಿಸಿಹುದು ತರಗತಿಯು||


ಬದುಕಿನ ಪಾಠವ ಕಲಿಯುತ ನೀವು

ನಾಳೆಗಳನ್ನು ರೂಪಿಸಿರಿ

ಶಾಲೆಯು ಅಮ್ಮನ ಹಾಗೆಯೆ ಮಗುವನು

ಪೊರೆವುದು ಎಂದು ಮರೆಯದಿರಿ||


ವಿದ್ಯೆಯ ಜೊತೆಗೆ ಸದ್ಗುಣ ಬೆಳೆಸಿರಿ

ನೊಂದವರನ್ನು ಸಂತೈಸಿ

ಗುರುಹಿರಿಯರಿಗೆ ಗೌರವ ಸಲ್ಲಿಸಿ

ದೇವರ ನಂಬಿ ಶರಣೆನ್ನಿ||


ಕೆಡುಕನು ಅಳಿಸುತ ಒಳಿತನು ಬೆಳೆಸುವ

ವೀರ ಯೋಧರು ನೀವಾಗಿ

ದೇಶದ ಏಳಿಗೆ ನಿಮ್ಮಯ ಹೊಣೆಯು

ನಾಡನು ಸಂಪದವಾಗಿಸಿರಿ||


-ಕವಿತಾ ಅಡೂರು, ಪುತ್ತೂರು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Tags

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top