ಎಸ್ಸೆಸ್ಸೆಲ್ಸಿ 100% : ಪಾಣಾಜೆ ಸುಬೋಧ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ, ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ

Upayuktha
0

ಪಾಣಾಜೆ: ಪಾಣಾಜೆ ಸುಬೋಧ ಪ್ರೌಢಶಾಲೆ 2025-26ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಪಡೆದ ಹಿನ್ನೆಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಹಾಗೂ ಶಿಕ್ಷಕೇತರ ಸಿಬ್ಬಂದಿಯವರಿಗೆ ಆಡಳಿತ ಮಂಡಳಿ ವತಿಯಿಂದ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮ ಜೂನ್ 7ರಂದು ಶಾಲೆಯಲ್ಲಿ ನಡೆಯಿತು.


ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಲೆಯ ಹಿರಿಯ ವಿದ್ಯಾರ್ಥಿ ಬಾಲಪ್ರಭಾ ಹಿರಿಯ ಪ್ರಾಥಮಿಕ ಶಾಲೆ ಕಾಟುಕುಕ್ಕೆ ಇಲ್ಲಿಯ ನಿವೃತ್ತ ಮುಖ್ಯ ಶಿಕ್ಷಕ ಶ್ರೀಪತಿ ಭಟ್ ಖಂಡೇರಿ ಅವರು ಶೇಕಡ 100 ಫಲಿತಾಂಶ ಬರಲು ಕಾರಣಕರ್ತರಾದ ವಿದ್ಯಾರ್ಥಿಗಳನ್ನು ಶಿಕ್ಷಕರನ್ನು ಶಿಕ್ಷಕೇತರ ಸಿಬ್ಬಂದಿಯವರನ್ನು ನಗದು ಬಹುಮಾನ ಸ್ಮರಣಿಕೆ ನೀಡಿ ಅಭಿನಂದಿಸಿರುವುದು ಔಚಿತ್ಯಪೂರ್ಣ ಕಾರ್ಯ ಎಂದು ಶ್ಲಾಘಿಸಿದರು. 


ವಿದ್ಯಾರ್ಥಿಗಳು ಅಂಕ ಗಳಿಸುವುದರ ಜೊತೆಗೆ ಸಾಮಾನ್ಯ ಜ್ಞಾನವನ್ನು ಹೊಂದಿರಬೇಕಾದದು ಅನಿವಾರ್ಯ. ಕೇವಲ ಅಂಕಗಳೇ ಜಗಬೆಳಗಲು ಸಾಲದು. ಸಾಮಾನ್ಯ ಜ್ಞಾನದೊಂದಿಗೆ ಉತ್ತಮ ಅಂಕಗಳನ್ನು ಗಳಿಸಿ ಭವಿಷ್ಯವನ್ನು ಉಜ್ವಲ ಗೊಳಿಸಿ ಎಂದು ಕಿವಿ ಮಾತು ಹೇಳಿದರು.


ಮಗುವಿನ ಬೆಳವಣಿಗೆಯ ಹಿಂದೆ ಶಿಕ್ಷಕರ ಪರಿಶ್ರಮವಿದೆ ಸೂರಂಬೈಲು ಉನ್ನತ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಊರ್ಮಿಳಾ ಕೆ ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಶಿಕ್ಷಕರ ಪೋಷಕರ ಪರಿಶ್ರಮವಿದೆ. ವಿದ್ಯಾರ್ಜನೆ ಮಾಡಿದ ಶಾಲೆಯನ್ನು ಎಂದೂ ಮರೆಯಬಾರದು ಎಂದು ಕಿವಿ ಮಾತು ಹೇಳಿದರು. 


ಸತತವಾಗಿ ಶೇ 100 ಫಲಿತಾಂಶ ಬರಬೇಕು ಸುಬೋಧ ಪ್ರೌಢಶಾಲೆ ಸತತ ನಾಲ್ಕನೇ ವರ್ಷ ಶೇ 100 ಫಲಿತಾಂಶ ಗಳಿಸಿದೆ. ಮುಂದೆಯೂ ಶೇ 100 ಫಲಿತಾಂಶ ಬರುವಂತೆ ಪ್ರಯತ್ನಿಸಬೇಕು, ಶಾಲೆಯ ಗ್ರಾಮದ ಕೀರ್ತಿಯನ್ನು ಎತ್ತಿ ಹಿಡಿಯಬೇಕು.ಹಿಂದಿನಂತೆ ಮುಂದೆಯೂ ನಗದು ಬಹುಮಾನ ನೀಡಿ ಗೌರವಿಸುತ್ತೇನೆ ಎಂದು ಸ್ನೇಹ ಟೆಕ್ಸ್ಟೈಲ್ಸ್ ನ ಮಾಲಕ ವರದರಾಯ ನಾಯಕ್ ಭರವಸೆ ನೀಡಿದರು.


ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಎಲ್ಲಾ ಮಕ್ಕಳಿಗೆ ಶಿಕ್ಷಕರಿಗೆ ಹಾಗೂ ಶಿಕ್ಷಕೇತರ ಸಿಬ್ಬಂದಿಯವರಿಗೆ ಶಾಲು ಹೊದೆಸಿ ಸ್ಮರಣಿಕೆ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಪೇಂದ್ರ ಬಲ್ಯಾಯ ಅವರು ನೀಡಿದ ನೆನಪಿನ ಕಾಣಿಕೆ ಹಾಗೂ ದಿ.ಮಣ್ಣಂಗಳ ಶಾಮ ಭಟ್ ಮತ್ತು ದೇವಕಿ ಅಮ್ಮನವರ ಸ್ಮರಣಾರ್ಥ ಅವರ ಮಕ್ಕಳು ನೀಡಿದ ನಗದು ಬಹುಮಾನವನ್ನು ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಯವರಿಗೆ ವಿತರಿಸಲಾಯಿತು.


ಅಗ್ನಿವೀರನಿಗೆ ಸನ್ಮಾನ ಸುಬೋಧ ಪ್ರೌಢಶಾಲೆಯ 2021-22ನೇ ಸಾಲಿನ ಹಿರಿಯ ವಿದ್ಯಾರ್ಥಿ ವಿಜಿತ್ ಕುಮಾರ್ ರೈ ಅಗ್ನಿವೀರರಾಗಿ  ಆಯ್ಕೆಯಾಗಿರುತ್ತಾರೆ. ಈ ಸಂದರ್ಭದಲ್ಲಿ ಅವರನ್ನು ಶಾಲು ಹಾಕಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. 


ಎನ್ ಎಮ್ ಎಮ್ ಎಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸ್ಕಾಲರ್ ಶಿಪ್ಪಿಗೆ ಅರ್ಹತೆ ಪಡೆದ ಶಾಲಾ ವಿದ್ಯಾರ್ಥಿನಿಯರಾದ ಲಿಖಿತಾ ಹಾಗೂ ಸಮೀಕ್ಷಾ ರವರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.


ವಿದ್ಯಾರ್ಥಿಗಳಾದ ದೀಪಕ್ ಪಿ ಎಸ್, ಲಾವಣ್ಯ ಹಾಗೂ ದೀಪ್ತಿಲಕ್ಷ್ಮಿ ಹಾಗೂ ಹೆತ್ತವರ ಪರವಾಗಿ ಉಮ್ಮರ್ ಜನಪ್ರಿಯ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.


ನಿವೃತ್ತ ಪ್ರಥಮ ಮುಖ್ಯೋಪಾಧ್ಯಾಯ ಪಿಲಿಂಗಲ್ಲು ಕೃಷ್ಣ ಭಟ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಡಾ ಹಾಜಿ ಎಸ್ ಅಬೂಬಕ್ಕರ್ ಶುಭಾಶಂಸನೆಗೈದರು.


ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಪೇಂದ್ರ ಬಲ್ಯಾಯ ದೇವಸ್ಯ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಚಾಲಕ ಗಿಳಿಯಾಲು ಮಹಾಬಲೇಶ್ವರ ಭಟ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಶೇ 100 ಫಲಿತಾಂಶಕ್ಕೆ ಕಾರಣಕರ್ತರಾದ ಎಲ್ಲಾ ವಿದ್ಯಾರ್ಥಿಗಳನ್ನು ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಯವರನ್ನು ಅಭಿನಂದಿಸಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು. ಶಾಲಾ ವಿದ್ಯಾರ್ಥಿನಿಯರಾದ  ದೀಪಿಕಾ ಪಿ ಎಸ್ ಹಾಗೂ ವೈಶಾವಿ ಪ್ರಾರ್ಥಿಸಿ ಮುಖ್ಯ ಶಿಕ್ಷಕಿ ನಿರ್ಮಲ ಕೆ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ  ಸುಧೀರ್ ಎಸ್ ಪಿ ಕಾರ್ಯಕ್ರಮ ನಿರೂಪಿಸಿದರು. ಆಡಳಿತ ಮಂಡಳಿ ಸದಸ್ಯರು. ಶಿಕ್ಷಕರು ಹೆತ್ತವರು ಮಕ್ಕಳು ಹಾಜರಿದ್ದರು.


ವರದರಾಯ ನಾಯಕ್ ಅವರಿಂದ ವಿಶೇಷ ಬಹುಮಾನ:

ಸ್ನೇಹ ಟೆಕ್ಸ್‌ಟೈಲ್ಸ್ ನ ಮಾಲಕ ವರದರಾಯ ನಾಯಕ್ ಅವರು ಸತತ 4 ವರ್ಷಗಳಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಶಾಲೆಗೆ ಪ್ರಥಮ ಸ್ಥಾನ ಪಡೆದ ದೀಪಕ್ ಪಿ ಎಸ್ ಅವರಿಗೆ ರೂ 3000 ದ್ವಿತೀಯ ಸ್ಥಾನ ಪಡೆದ ಲಾವಣ್ಯ ಅವರಿಗೆ ರೂ 2000, ತೃತೀಯ ಸ್ಥಾನ ಪಡೆದ ಪ್ರಜೀಶ್ ಅವರಿಗೆ ರೂ 1000, ಹಾಗೂ ಉಳಿದ ಎಲ್ಲಾ ವಿದ್ಯಾರ್ಥಿಗಳಿಗೆ ರೂ 500 ರಂತೆ ನಗದು ಬಹುಮಾನ ಹಾಗೂ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಯವರಿಗೆ ವಿಶೇಷ ಬಹುಮಾನ ನೀಡಿ ಗೌರವಿಸಿದರು.


  ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top