ಪಕ್ಷಿಕೆರೆ ಶ್ರೀ ಶನೀಶ್ವರ ಭಕ್ತ ವೃoದದ ಮುಂಬೈ ಯಕ್ಷಯಾನ

Upayuktha
0



ಮಂಗಳೂರು: ದೇಶ ವಿದೇಶ ಗಳಲ್ಲಿ ಶ್ರೀ ಶನೀಶ್ವರ ಮಹಾತ್ಮೆ ಪೂಜಾ ಸಹಿತ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಗಳನ್ನು ನೀಡುತ್ತಿರುವ ಕರಾವಳಿಯ ಪ್ರಸಿದ್ದ ಪಕ್ಷಿಕೆರೆ ತಂಡವು ಮುಂಬೈಯಕ್ಷ ಯಾನ-2026 ಕ್ಕೆ ಸಜ್ಜಾಗಿದೆ. ಕಳೆದ ಮೂರು ದಶಕ ಗಳಿಂದ ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ ಅವರ ನೇತೃತ್ವದ ಶನಿ ಪೂಜೆಯ ಮಂಡಳಿ ಕಾರ್ಯಕ್ರಮ ಸಂಯೋಜನೆ ಮಾಡುತ್ತಿದೆ.


ಸದಾ ಕಿನ್ನಿಗೋಳಿ, ಮೂಲ್ಕಿ ಪರಿಸರದಲ್ಲಿ ವರ್ಷದಲ್ಲಿ ಹತ್ತಾರು ಕಾರ್ಯಕ್ರಮ ನಡೆಯುತ್ತಿತ್ತು. ಆದರೆ ಸುಸಜ್ಜಿತ ತಂಡವಾಗಿ ಕಾಣಿಸಿಕೊಂಡದ್ದು ದುಬೈ, ಅಬುದಾಬಿ ಪ್ರವಾಸದ ಸಂದರ್ಭದಲ್ಲಿ. ಕದ್ರಿ ನವನೀತ ಶೆಟ್ಟಿ ಅವರು ತಂಡಕ್ಕೆ ಸೇರಿದ ನಂತರ ಸ್ವರೂಪ ಬದಲಾವಣೆಯಾಯಿತು. 


ಮಂಗಳೂರಿನ ಎ.ಬಿ. ಶೆಟ್ಟಿ ಸಭಾಂಗಣದಲ್ಲಿ ವಿಜಯ ಬ್ಯಾಂಕ್ ಯೂನಿಯನ್ ನವರು ಮೂಲ್ಕಿ ಕರುಣಾಕರ ಶೆಟ್ಟಿ ಅವರ ಸಂಯೋಜನೆ ಯಲ್ಲಿ ನಡೆಸಿದ ಶನಿ ಪೂಜೆ ನಮ್ಮ ಕುಡ್ಲ ವಾಹಿನಿಯಲ್ಲಿ ನೇರ ಪ್ರಸಾರವಾಯಿತು. ತಂಡದ ಜನಪ್ರಿಯತೆ ಹೆಚ್ಚಿತು. ದುಬೈ, ಅಬುದಾಬಿ ಕಾರ್ಯಕ್ರಮ ಜೋಡಣೆಯಾಯಿತು. ಸಾಂಗ್ಲಿ, ಶಿರಸಿ ಕಾರ್ಯಕ್ರಮಗಳು ಮುಂಬೈ ಪ್ರವಾಸ ಮಾಡಲು ಸ್ಫೂರ್ತಿ ನೀಡಿತು.  6 ಘಂಟೆಯ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮೂರುವರೆ ಘಂಟೆಗಳಲ್ಲಿ ನಿರ್ವಹಿಸುತ್ತಿರುವುದು, ತಂಡದ ಶಿಸ್ತು, ಕಲಾವಿದರ ಶ್ರದ್ದೆ ಯಶಸ್ಸಿಗೆ ಕಾರಣವಾಗಿದೆ.


ಈ ವರ್ಷದ ಮುಂಬೈ ಯಕ್ಷಯಾನದಲ್ಲಿ ನವನೀತ ಶೆಟ್ಟಿ ಕದ್ರಿ ಹಾಗೂ ಗಣೇಶ್ ಶೆಟ್ಟಿ ಕನ್ನಡಿ ಕಟ್ಟೆ ಅವರ ವಿಕ್ರಮಾದಿತ್ಯ , ತಲಪಾಡಿ ಸದಾಶಿವ ಆಳ್ವ ಅವರ  ಶನೀಶ್ವರ  ಪಾತ್ರಗಳು ವಿಭಿನ್ನ ನಿರೂಪಣೆಯಿಂದ ಕೂಡಿದೆ. ವಿಜಯ ಕುಮಾರ್ ಶೆಟ್ಟಿ ಮೊಯಿಲೊಟ್ಟು ಅವರ ನಂದಿ ಶ್ರೇಷ್ಟಿ ಹಾಗೂ ಗಾಣಿಗನ ಪಾತ್ರದಲ್ಲಿ  ಹಾಸ್ಯದ ಹೊನಲು ಹರಿಯಲಿದೆ . ಕಂಚಿನ ಕಂಠದ ಅತ್ತೂರು ಗುತ್ತು ಪ್ರಸನ್ನ ಶೆಟ್ಟಿ ಅವರ ಆಲೋಲಿಕೆಯ ಮಾತಿನ ಮೊನಚು, ರವಿ ಭಟ್ ಪಡುಬಿದ್ರಿ ಅವರ ರಾಜ ಹಾಸ್ಯದ ಕಾರವಾನ ಶನಿ,ರವಿಚಂದ್ರ ಕನ್ನಡಿ ಕಟ್ಟೆ ಅವರ ಭಾಗವತಿಕೆ,ಯುವ ಪ್ರತಿಭೆ ಕುಮಾರಿ ವಾರುಣಿ ನಾಗರಾಜ್ ಆಚಾರ್ಯ ಅವರ ಭಾವನಾತ್ಮಕ ಪ್ರಸ್ತುತಿ ಯ ಸುಶೀಲೆ ಪಾತ್ರವಿದೆ .  


ಬಿರುವ ಜವಣೆ ರ್ ಮಸ್ಕತ್ ಮೂರೂ ಬಾರಿ ಈ ಒಂದೇ ತಂಡವನ್ನು ಮಸ್ಕತ್ ಗೆ ತರಿಸಿ ಶನೀಶ್ವರ ಮಹಾತ್ಮೆ ಅಲ್ಲದೆ ಸತ್ಯನಾರಾಯಣ ಮಹಾತ್ಮೆ, ಕೊರಗಜ್ಜ ಪ್ರಸಂಗ ಗಳನ್ನು ಪ್ರದರ್ಶಿಸಿ ಜನ ಮೆಚ್ಚುಗೆ ಪಡೆದಿದ್ದಾರೆ.ಸಂಚಾಲಕ ಪದ್ಮನಾಭ ರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ 2024 ರಲ್ಲಿ ದೊರಕಿದೆ. ವಿಜಯ ಕುಮಾರ್ ಶೆಟ್ಟಿ ಮೊಯ್ಲೊಟ್ಟು ಅವರು ಯಕ್ಷಗಾನ ಅಕಾಡೆಮಿ ಸದಸ್ಯರಾಗಿದ್ದಾರೆ. ಈ ಮಂಡಳಿ ಕಳೆದ ವರ್ಷದಲ್ಲಿ ಸುಮಾರು 50 ಕಾರ್ಯಕ್ರಮ ಗಳನ್ನು ನೀಡಿದೆ.


ಇದೀಗ ಮುಂಬೈಯಲ್ಲಿ ಜುಲೈ10 ರಿಂದ 19 ರವರೆಗೆ  6 ನೇ ವರ್ಷದ ಯಕ್ಷಯಾನ  ನಡೆಸಲಿದೆ. ಈ ಪೂರ್ವದಲ್ಲಿ   ಕರ್ನೂರು ಮೋಹನ್ ರೈ, ಅಜೆಕಾರು ಬಾಲಕೃಷ್ಣ ಶೆಟ್ಟಿ, ಕಾಪು ಕಲ್ಯಾ ದಿನೇಶ್ ಶೆಟ್ಟಿ ಅವರ ಸಾರಥ್ಯ ದಲ್ಲಿ ಮುಂಬೈ ಪ್ರವಾಸ ಮಾಡಿದೆ. ಕಳೆದೆರಡು ವರ್ಷ ಗಳಿಂದ ವಿಜಯ ಕುಮಾರ್ ಮೊಯ್ಲೊಟ್ಟು  ಅವರು ಯಕ್ಷಯಾನದ ಸಾರಥ್ಯ ವಹಿಸಿಕೊಂಡಿದ್ದಾರೆ.


ಈ ಮಂಡಳಿಯ ಪೂಜಾ ಸಹಿತ ತಾಳಮದ್ದಳೆ  ಹೊಸ ಯಕ್ಷಗಾನ ಪ್ರೇಕ್ಷಕ ರನ್ನು ಸೃಷ್ಟಿ ಸಿದೆ. ಭಕ್ತಿ ಪ್ರಧಾನ ಕಾರ್ಯಕ್ರಮ ದಲ್ಲಿ ಸಜ್ಜನ ಪ್ರೇಕ್ಷಕರು ಶ್ರದ್ದೆ, ಭಕ್ತಿ ಯಿಂದ ತಾಳಮದ್ದಳೆ ಯ ಸೊಗಡನ್ನು ಆಸ್ವಾದಿಸುತ್ತಿದ್ದಾರೆ. ಮಹಿಳೆಯರು ದೀಪಕ ಮಾಲಾ ಹಾಡಿನ ಸಂದರ್ಭದಲ್ಲಿ ದೀಪ ಬೆಳಗುವ ಸಂಭ್ರಮ ಇದೆ.


ಮುಂಬೈ ಯಕ್ಷಯಾನ - 10 ದಿನ 10 ಪ್ರದರ್ಶನ

ಜುಲೈ 10ರಿಂದ 19ರ ತನಕ 10 ದಿನ 10 ತಾಳಮದ್ದಳೆ ಕಾರ್ಯಕ್ರಮಗಳು ನಡೆಯಲಿದೆ. ಜು. 10ರಂದು ಶುಕ್ರವಾರ ಅಂಬರ್ನಾತ್ ನಲ್ಲಿ ಯಕ್ಷಯಾನ ದ ಉದ್ಘಾಟನೆ ಹಾಗೂ 20 ರಂದು ವಿಕ್ರೋಲಿ (ಪ) ದಲ್ಲಿ ಅಯ್ಯಪ್ಪ ಸೇವಾ ಸಂಗಮದ ನೆರಳಲ್ಲಿ ಸಮಾರೋಪ ಜರಗಲಿದೆ. ಥಾನಾ ,  ಮಿರ ರೋಡ್, ಪೂನಾ, ಡೊಂಬಿವಲಿ, ಘಂನ್ಸೋಲಿ, ಮುಲುಂಡ್, ನಾಲಾ ಸೊಪರ್ ಪ್ರದೇಶ ಗಳಲ್ಲಿ  ಪ್ರದರ್ಶನ ಇದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top