ಭೂಗರ್ಭ ತಜ್ಞ ನಿಸಾರ್ ಅಹಮ್ಮದ್ ಕನ್ನಡ ಸಾಹಿತ್ಯದ ಭಾವಗರ್ಭ ತಜ್ಞ: ಡಾ ಸುರೇಶ ನೆಗಳಗುಳಿ
ಮಂಗಳೂರು: ಕೆ ಎಸ್ ನಿಸಾರ್ ಅಹಮದ್ ಅವರು ನಾಡು ಕಂಡ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ಕರ್ನಾಟಕದ ಸೌಂದರ್ಯವನ್ನು ಅತ್ಯಂತ ಶ್ರೀಮಂತವಾಗಿ ಮತ್ತು ಅತ್ಯಂತ ಸುಂದರವಾಗಿ ವರ್ಣಿಸುವುದರಲ್ಲಿ ಕೆ ಎಸ್ ನಿಸಾರ್ ಅಹ್ಮದ್ ತನ್ನ ಸಾಹಿತ್ಯದ ಪ್ರಖರತೆಯನ್ನು ತೋರಿಸಿದ್ದಾರೆ. ಈ ಕಾರಣದಿಂದಾಗಿಯೇ ಬಹುತೇಕ ಕನ್ನಡ ಕಾರ್ಯಕ್ರಮಗಳಲ್ಲಿ ನಿತ್ಯೋತ್ಸವ ಗೀತೆಗಳು ಮೂಡಿಬರುವುದು ಕೆ ಎಸ್ ನಿಸಾರ್ ಅಹಮದರ ಸಾಹಿತ್ಯದ ಔನ್ನತ್ಯ ಎಂದು ಲೋಕೋಪಯೋಗಿ ಅಭಿಯಂತರ, ಕವಿ, ಲೇಖಕ ಡಾಕ್ಟರ್ ಆನಂದ್ ಬಂಜನ್ ಅಭಿಪ್ರಾಯಪಟ್ಟರು.
ಅವರು ಮಂಗಳೂರಿನ ಕದ್ರಿ ಬಾಲ ಭವನದಲ್ಲಿ ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಆಯೋಜಿಸಿದ ಕೆ ಎಸ್ ನಿಸಾರ್ ಅಹ್ಮದ್ ನಿತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ ಕೆ ಎಸ್ ನಿಸಾರ ಅಹ್ಮದರ ಹೆಸರು ಸರ್ವಕಾಲಕ್ಕೂ ಅಜರಾಮರ. ಇಂತಹ ಮೇರು ಕವಿಯ ನೆನಪಿನಲ್ಲಿ ನಿತ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದ ರಾಣಿ ಪುಷ್ಪಲತಾದೇವಿ ಮತ್ತು ಬಳಗ ಅಭಿನಂದನಾರ್ಹರು ಎಂದರು.
ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆದರೆ ಹಿರಿ-ಕಿರಿ ಕವಿಗಳಿಗೆ ತಮ್ಮ ಸಾಹಿತ್ಯ ಪ್ರಕಾರವನ್ನು ಸಾದರಪಡಿಸುವುದಕ್ಕೆ ಅವಕಾಶ ಸಿಗುತ್ತದೆ ಎಂದ ಅವರು ಇಂತಹ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನ KSSAP ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ವಹಿಸಿದ್ದು ಮುಖ್ಯ ಅತಿಥಿಗಳಾಗಿ ಸಾಮಾಜಿಕ ಚಿಂತಕ ರಂಜನ್ ಕುಮಾರ್ ಹಾಗೂ ಎನ್ ಎಸ್ ಸಿ ಡಿ ಎಫ್ ಅಧ್ಯಕ್ಷ ಗಂಗಾಧರ್ ಗಾಂಧಿ ಉಪಸ್ಥಿತರಿದ್ದರು
ಡಾಕ್ಟರ್ ಸುರೇಶ್ ನೆಗಳಗುಳಿ ಇವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಜಯಂತಿ ನಂದಲಿಕೆ ಕಾರ್ಕಳ, ಆಂಟೋನಿ ಲೂಯಿಸ್ ಮಣಿಪಾಲ, ಶರಣ್ಯ ಬೆಳುವಾಯಿ, ಮಂಜುನಾಥ ಗುಂಡ್ಮಿ, ವಿನೋದ ಪ್ರಕಾಶ್ ಪಡುಬಿದ್ರಿ, ಶಾಲಿನಿ ಕೆಮ್ಮಣ್ಣು, ಆಕೃತಿ ಐ ಎಸ್ ಭಟ್ ಮಂಗಳೂರು, ಅಶ್ವಿನಿ ಕೊಂಜಾಡಿ, ಪೂರ್ಣಿಮಾ ಕೋಟ್ಯಾನ್ ಮಾರ್ನಾಡ್, ಕೆ. ವಾಣಿಶ್ರೀ ಅಶೋಕ್ ಐತಾಳ್, ಪ್ರಶಾಂತ್ ಆಚಾರ್ಯ ಎಡಪದವು, ನಿರೀಕ್ಷಿತಾ ಮಂಗಳೂರು, ಗಿರೀಶ್ ಪೆರಿಯಡ್ಕ, ಮಂಡ್ಯ ಅನಾರ್ಕಲಿ ಸಲೀಂ, ಸುಮಯ್ಯಾ ಎಂ ಪಾಟೀಲ್ ದೇರಳಕಟ್ಟೆ, ಸುಲೋಚನ ನವೀನ್, ಡಾ.ಪ್ಲಾವಿಯಾ ಕ್ಯಾಸ್ಟಲಿನೊ ಮಣಿಪಾಲ, ಸಿಹಾನ ಬಿ.ಎಂ., ಅವನೀಶ್ ಐತಾಳ್.ಪಿ ಶಂಶೀರ್ ಬುಡೋಳಿ, ಆಯಿಷಾ ಪೆರ್ನೆ, ರೇಖಾ ಸುದೇಶ್ ರಾವ್, ಸುಖಲತಾ ಶೆಟ್ಟಿ ಬೋಂದೆಲ್ ತಮ್ಮ ಸ್ವರಚಿತ ಕವನ ವಾಚನ ಮಾಡಿದರು.
ಡಾ ಸುರೇಶ ನೆಗಳಗುಳಿ ಮಾತನಾಡುತ್ತಾ ಎಲ್ಲಾ ಕವಿಗಳ ಕವನದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ನಿಸಾರ್ ಅಹಮದ್ ಅವರ ಬಗೆಗಿನ ಸ್ವರಚಿತ ಗಜಲ್ ಹಾಗೂ ಮುಕ್ತಕ ವಾಚಿಸಿ ರಾಣಿ ಪುಷ್ಪಲತಾ ಅವರ ಸಾಹಿತ್ಯ ಸೇವೆಯನ್ನು ಕೊಂಡಾಡಿದರು. ರೇಖಾ ಸುದೇಶ್ ರಾವ್ ಪ್ರಾರ್ಥಿಸಿದರು, ಶರಣ್ಯ ಬೆಳುವಾಯಿ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.png)
