ದೇಶಸೇವೆಗೆ ಬದುಕನ್ನೇ ಮುಡಿಪಿಟ್ಟ ನೀಲಕಂಠಜಿ: ಕಪ್ಪತಗುಡ್ಡ ನಂದಿವೇರಿಮಠ ಶಿವಕುಮಾರ ಸ್ವಾಮೀಜಿ ಅಭಿಮತ

Upayuktha
0




ಬಾಗಲಕೋಟೆ: ಕರ್ನಾಟಕದ ಸರ್ವೋದಯ ಕಾರ್ಯಕರ್ತ ನೀಲಕಂಟಠಜಿ ಗಣಾಚಾರಿ ಅವರು ಮಹಾತ್ಮಾ ಗಾಂಧೀಜಿ ಮತ್ತು ಅಚಾರ್ಯ ವಿನೋಬಾ ಭಾವೆ ಅವರ ತಮ್ಮ ಬದುಕನ್ನೇ ಮುಡಿಪಾಗಿಟ್ಟರು. ಕರ್ನಾಟಕದ ಒಬ್ಬ ಶ್ರೇಷ್ಠ ಸಂತರಾಗಿದ್ದರು' ಎಂದು ಕಪ್ಪತಗುಡ್ಡ ಸಂದಿವೇರಿಮಠ ಶಿವಕುಮಾರ ಕುಮಾರೇಶ್ವರ ಸಭಾ ಭವನದಲ್ಲಿ ಭಾನುವಾರ ಮುಖ್ಯ ಶಿಕ್ಷಕಿ ಜಯಶ್ರೀ (ಭಂಡಾರಿ) ಸೇವಾ ನಿವೃತ್ತಿ ಮತ್ತು 'ಗಾಂಧೀಜಿಯವರ ತಾನುಯಾಯಿ ನೀಲಕಂಠಜಿ ಸಂಸ್ಮರಣ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.


'ಮಹಾತ್ಮಾ ಗಾಂಧೀಜಿಯವರು ,1924ರಲ್ಲಿ ಬೆಳಗಾವಿಗೆ ಬಂದಾಗ ನೀಲಕಂಠ ಗಣಾಚಾರಿ ಸ್ವಾತಂತ್ರ್ಯ ಕೋರಾಟದಲ್ಲಿ ಧುಮುಕಿದರು. ಸಾಬರಮತಿ ಮತ್ತು ವರ್ಧಾ ಅಕ್ರಮದಲ್ಲಿ ನೆಲೆಸಿ ಬ್ರಿಟಿಷರ ವಿರುದ್ಧ ಹೋರಾಟದ ರೂಪ) ನೀಯಗಳನ್ನು ತಯಾರಿಸುತ್ತಿದ್ದರು. ಸ್ವತಂತ್ರ್ಯ ಹೋರಾಟದ ಸಲುವಾಗಿ ಕರ್ನಾಟಕದಿಂದ ಒಬ್ಬ ಸಂಪನ್ಮೂಲ ಪಾತ್ರವಾಗದ್ದರು' ಎಂದು ಹೇಳಿದರು.


'ಸ್ಥಾತಂತ್ರ್ಯದ ನಂತರವೂ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ನನಸು ಮಾಡಲು ನೀಲಕಂಠಜಿ ಅವರು ಬರಿ ಮೈಯಲ್ಲಿ ಮತ್ತು ಬರಿಗಾಲಿನಿಂದ ಗ್ರಾಮಗಳಿಗೆ ತೆರಳುತ್ತ ಗ್ರಾಮೋದ್ಯೋಗ, ಗೋಹತ್ಯೆ ನಿಷೇಧ, ಮದ್ಯಪಾನ ನಿರ್ಮೂಲನೆ, ಕೃಷಿ ಅಭಿವೃದ್ಧಿ, ಹೈನುಗಾರಿಕೆ, ಸಹಕಾರ ಸಂಘಗಳ ಸ್ಥಾಪನೆ, ಶಿಕ್ಷಣಕ್ಕಾಗಿ ಶಾಲೆಗಳ ಆರಂಭ ಮುಂತಾದ ಕಾರ್ಯಗಳಿಗೆ ಜನಜಾಗೃತಿಯನ್ನುಂಟು ಮಾಡುತ್ತಿದ್ದರು' ಎಂದರು.


'ನೀಲಕಂಠಜಿ ಅವರಿಗೆ ಅರು ಮಕ್ಕಳು ಇದ್ದರು. ಸ್ವಾತಂತ್ರ್ಯದ ಹೋರಾಟದ ಸಲುವಾಗಿ ಮತ್ತು ಸ್ವಾತಂತ್ರ್ಯದ ನಂತರವೂ ಕುಟುಂಬದತ್ತ ತಿರುಗಿ ನೋಡಲಿಲ್ಲ. ಮಹಾತ್ಮ ಗಾಂಧೀಜಿಯವರಂತೆ ಜನ ಜಾಗೃತಿಗೆ ನಾಡನ್ನು ಸುತ್ತು ಹಾಕುತ್ತ ವೈರಾಗ್ಯ ಮೂರ್ತಿಯಾಗಿದ್ದರು' ಎಂದು 'ನಾಡಿನ ಸರ್ವೋದಯ ಕಾರ್ಯಕರ್ತ ನೀಲಕಂಠಜಿ ಗಣಾಚಾರಿ  ಸೇವೆಯನ್ನು ಯುವಕರು ಅರಿತು ಅವರ ದೇಶಾಭಿಮಾನ, ನಿಸ್ವಾರ್ಥ ಕೊಳ್ಳಬೇಕಿದೆ. ಅವರ ಚರಿತ್ರೆಯನ್ನು ಅಧ್ಯಯನ ಮಾಡಬೇಕು' ಎಂದು ಪ್ರಾಧ್ಯಾಪಕ ಚಂದ್ರಶೇಖರ್ ಹೆಗಡೆ ಹೇಳಿದರು.


'ಭಾರತೀಯ ಪರಂಪರೆಯಲ್ಲಿ ಅನೇಕ ಶರಣರು, ದಾರ್ಶನಿಕರು ಜೀವನದ ಮೌಲ್ಯಗಳನ್ನು ಸಮಾಜಕ್ಕೆ ಕೊಟ್ಟಿರುವಂತೆ ಕರ್ನಾಟಕದ ಸರ್ವೋದಯ ಕಾರ್ಯಕರ್ತ ನೀಲಕಂಠಜಿ ಅವರು ದೇಶಾಭಿಮಾನ ಮತ್ತು ಸಾಮಾಜಿಕ ಮೌಲ್ಯಗಳನ್ನು ಕೊಟ್ಟಿದ್ದಾರೆ ಅವರ ಆದರ್ಶಗಳನ್ನು ತಿಳಿದುಕೊಳ್ಳಬೇಕು' ಎಂದು ಶಿಕ್ಷಣ ಇಲಾಖೆಯ ನಿವೃತ್ತ ಆಯುಕ್ತ ಎಸ್. ಆ‌ರ್.ಮನಹಳ್ಳಿ ಹೇಳಿದರು.                  


ಎಂ.ಬಿ. ಹಂಗರಗಿ ಅಧ್ಯಕ್ಷತೆ ವಹಿಸಿದ್ದರು. ಎಲ್.ಬಿ. ಕುರ್ತಕೋಟಿ, ಅಜೀಜ್ ಮುಲ್ಲಾ ವೇದಿಕೆಯಲ್ಲಿ ಇದ್ದರು. ಸೇವಾ ನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕಿ ಮತ್ತು ಪುಸ್ತಕ ಸಂಪಾದಕಿ ಜಯಶ್ರೀ ಗಣಾಚಾರಿ (ಭಂಡಾರಿ) ಪ್ರಾಸ್ತಾವಿಕವಾಗಿ ಮಾತನಾಡಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top