ಸಂಸ್ಕೃತಿ ಉಳಿವಿಗೆ ಸಂಗೀತ, ಸಾಹಿತ್ಯ ಅಗತ್ಯ: ಬಾಲರಾಜ್ ಗುತ್ತೇದಾರ್

Upayuktha
0

ಗಾನ ಯಾನ ಸಾಂಸ್ಕೃತಿಕ ಕಾರ್ಯಕ್ರಮ- ಸಾಧಕ ಪ್ರಶಸ್ತಿ ಪ್ರದಾನ




ಕಲಬುರಗಿ: ಕಲೆ, ಸಾಹಿತ್ಯ ಹಾಗೂ ಸಂಗೀತದ ಮೂಲಕ ಕನ್ನಡ ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಗೆ ಗಾನ ಯಾನ ಕಾರ್ಯಕ್ರಮಗಳು ಸಹಕಾರಿ ಎಂದು ಯುವ ಮುಖಂಡರಾದ ಬಾಲರಾಜ್ ಗುತ್ತೇದಾರ್ ಹೇಳಿದರು.


ಕಲಬುರಗಿಯ ಶ್ರೀ ಕನಕ ಪುರಂದರ ಕಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ಸೇವಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜೂ.21ರಂದು ಕನ್ನಡ ಭವನ ಸುವರ್ಣ ಸೌಧದಲ್ಲಿ ಗಾನ ಯಾನ ಸಾಂಸ್ಕೃತಿಕ ಕಾರ್ಯಕ್ರಮ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಕಲ್ಯಾಣ ಕರ್ನಾಟಕ  ಸಂಗೀತ ಕ್ಷೇತ್ರದಲ್ಲಿ ಕಲಾವಿದರು ಉತ್ತಮ ಸಾಧನೆ ಮಾಡಿ ಕೀರ್ತಿ ತಂದಿದ್ದಾರೆ. ಕಲೆಗೆ ಬೆಲೆ ಇಲ್ಲ ಎಂಬ ಮಾತು ಸುಳ್ಳಾಗಿಸಿ ಇಸ್ತೆಕ ಸಹಜ ಸಂಗೀತ ಕಲಾವಿದರು ಸನ್ಮಾನ ಸ್ವೀಕರಿಸುವುದು ಹೆಮ್ಮೆಯ ಸಂಗತಿ ಎಂದರು.


ಸಂಗೀತ ದಿಗ್ಗಜರ ಕೊಡುಗೆ ಅಪಾರ

ಉತ್ತರ ಕರ್ನಾಟಕದ ಸಂಗೀತ ಪರಂಪರೆ ಇತಿಹಾಸ ದೊಡ್ಡ. ಅದರಲ್ಲಿ ಸಾಧನೆ ಮಾಡಿದ ಸಾಧಕರು ದಕ್ಷಿಣ ಕರ್ನಾಟಕದ ಕಲಾವಿದರನ್ನು ಮೀರಿಸಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸಾನ್ನಿಧ್ಯ ವಹಿಸಿದ ಅಫಜಲಪುರದ ಶ್ರೀ ವಿಶ್ವಾರಾಧ್ಯ ಮಲೇಂದ್ರ ಶಿವಾಚಾರ್ಯರು ಹೇಳಿದರು.


ಅಕಾಡೆಮಿಗಳಲ್ಲಿ ಈ ಭಾಗದ ಕಲಾವಿದರಿಗೆ ಆದ್ಯತೆ ಸಿಗಲಿ

ಕಲ್ಯಾಣ ಕರ್ನಾಟಕ ಭಾಗದ ಸಂಗೀತ ಸೇರಿದಂತೆ ಸಾಂಸ್ಕೃತಿಕ ರಂಗದ ಸಾಧಕರಿಗೆ ರಾಜ್ಯ ಅಕಾಡೆಮಿಗಳಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗಲಿ. ಸಂಗೀತ ಮತ್ತು ನೃತ್ಯ ಅಕಾಡೆಮಿಗೆ ಈ ಭಾಗದವರನ್ನು ಅಧ್ಯಕ್ಷರಾಗಿ ನೇಮಿಸಲು ಸರಕಾರ ಚಿಂತನೆ ಮಾಡಲಿ ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ.ಸದಾನಂದ ಪೆರ್ಲ ಹೇಳಿದರು.



ಕಾರ್ಯಕ್ರಮದಲ್ಲಿ ನಾಗಪ್ಪ ಹೊನ್ನಳ್ಳಿ, ಕುರುಬ ಗೊಂಡ ನೌಕರರ ಸಂಘದ ಜಿಲ್ಲಾಧ್ಯಕ್ಷ ಯಲಗೊಂಡ, ಬಿ.ಎಚ್. ನಿರಗುಡಿ, ಶ್ರೀಮತಿ ಸಾವಿತ್ರಿ ಪಾಟೀಲ್, ನಾಗಪ್ಪ ಹೊನ್ನಳ್ಳಿ, ಶಂಕರ್ ರಾವ್ ಹುಲ್ಲೂರ, ಅಂಬಯ್ಯ ಗುತ್ತೇದಾರ್, ಹಿರೇಕುರುಬರ, ಹಿರಿಯ ಕಲಾವಿದ ಸಂಸ್ಥೆಯ ಅಧ್ಯಕ್ಷರಾದ ಬಸಯ್ಯ ಬಿ. ಗುತ್ತೇದಾರ ತೆಲ್ಲೂರ, ದೇವೇಗೌಡ ತೆಲ್ಲೂರ, ಮಲ್ಲಯ್ಯ ಬಿ. ಗುತ್ತೇದಾರ್ ಮಹಾಂತೇಶ್ ಪಂಚಾಳ್, ಶಿವಪುತ್ರ ಕರಣಿಕ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಡಾ.ಶಿವಶಂಕರ್ ಬಿರಾದರ್ ಪ್ರಾರ್ಥನಾ ಗೀತೆ ಹಾಡಿದರು.


ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕ ಡಾ. ರಮೇಶ್ ಕುಲಕರ್ಣಿ, ಸಂಗೀತ ಶಿಕ್ಷಕರಾದ ಮಳ್ಳಿ ಹಣಮಂತರಾವ ಹಾಗೂ ಮಲ್ಲಿಕಾರ್ಜುನ ಭಜಂತ್ರಿ, ಜಡೇಶ್ ಹೂಗಾರ್ ಅಂಬರೀಶ್ ಹೂಗಾರ್, ಶಿವರುದ್ರಯ್ಯ ಗೌಡಗಾಂವ, ಸೈದಪ್ಪ ಸಪ್ಪನಗೋಳ, ಶಿವಾನಂದ ಮಂದೇವಾಲ, ಮಹಾಲಿಂಗಯ್ಯ ಸ್ಥಾವರಮಠ ದತ್ತರಾಜ ಕಲಶೆಟ್ಟಿ, ಶ್ರೀಶೈಲ ಕೊಂಡೆದ, ಭೀಮಾಶಂಕರ ಹೂಗಾರ್, ಶಿವಲಿಂಗಯ್ಯ ಮಠಪತಿ ಮತ್ತಿತರ ಕಲಾವಿದರ ಸಂಗೀತ ಕಾರ್ಯಕ್ರಮ, ಸಂಗೀತಾಸಕ್ತರ ಮೆಚ್ಚುಗೆಗೆ ಪಾತ್ರವಾಯಿತು. ಭರತನಾಟ್ಯ ಕಲಾವಿದೆ ಕು. ಅನನ್ಯ ಗೋಲ್ಡ್‌ಸ್ಮಿತ್ ಅವರ ನೃತ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.


ಕು. ಶೃತಿ ರಮೇಶ್ ಕುಲಕರ್ಣಿ ದಾಸವಾಣಿ ನಡೆಸಿಕೊಟ್ಟರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 30ಕ್ಕೂ ಹೆಚ್ಚು ಸಾಧಕರಿಗೆ ಬ್ರಹ್ಮಶ್ರೀ ನಾರಾಯಣ ಗುರು ಪ್ರಶಸ್ತಿ ನೀಡಿ ಗೌರವಿಸಲಾಯಿತು.


ವೈವಿಧ್ಯಮಯ ಸಂಗೀತ, ನೃತ್ಯ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ನಡೆದ ‘ಗಾನಯಾನ’ ಕಾರ್ಯಕ್ರಮಕ್ಕೆ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ದೊರಕಿ ಯಶಸ್ವಿಯಾಗಿ ನೆರವೇರಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top