ಜಗತ್ತಿನ ಮಹಾನ್ ಶಕ್ತಿಯಾಗಿ ಮೋದಿಜೀ ಬೆಳಗಲಿ: ಪ್ರಭಾಕರ ಪ್ರಭು

Upayuktha
0


ಬಂಟ್ವಾಳ: ಸನಾತನ ಹಿಂದೂ ಧರ್ಮದ ಪರಿಪಾಲನೆ, ರಾಷ್ಟೀಯ ವಿಚಾರ ಧಾರೆಯ ಮೂಲಕ, ರಾಷ್ಟ್ರಿಯ ಸ್ವಯಂ ಸೇವಕ ಸಂಘದ ಅನುಸರಣೆಯ ಪ್ರಕಾರ ಭಾರತ ಸರಕಾರದ ಅಧಿಕಾರ ಪಡೆದ ಬಿಜೆಪಿ ನೇತೃತ್ವದ ಸರಕಾರದಲ್ಲಿ ಅತೀ ಸುಧೀರ್ಘ ಅವಧಿಯಲ್ಲಿ ಪ್ರಧಾನಿಯಾಗಿ ಯಶಸ್ವಿ ಆಡಳಿತ ನಡೆಸಿ, ದೇಶ ಅಲ್ಲದೇ ಪ್ರಪಂಚದಲ್ಲಿಯೇ ಅತ್ಯುನ್ನತ ನಾಯಕರಾಗಿ ಸರ್ವರಿಗೂ ಸಮಪಾಲು ಎಂಬ ಕಲ್ಪನೆಯಂತೆ ಅಧಿಕಾರ ನಡೆಸಿ ಲೋಕ ನಾಯಕರಾಗಿರುವ ಮೋದಿಜಿ ಇನ್ನಷ್ಟು ಧೀರ್ಘವಧಿ ಅಧಿಕಾರ ನಡೆಸಲು ಶಕ್ತಿ ನೀಡುವುದರೊಂದಿಗೆ ಜಗತ್ತಿನ ಮಹಾನ್ ಶಕ್ತಿಯಾಗಿ ಮೋದಿಜೀ ಬೆಳಗಲಿ ಹಾಗೂ ಹಾಗೂ ಆಯುರಾರೋಗ್ಯ ವರ್ಧನೆಗಾಗಿ, ಮೋದಿಜಿಗೆ ಬರುವ ಎಲ್ಲಾ ವಿಘ್ನಗಳಿಗೆ ಪರಿಹಾರ ಪ್ರಾಪ್ತಿಯಾಗಬೇಕು ಎಂದೂ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಪ್ರಾರ್ಥನೆ ಮಾಡಿದರು.


ಈ ಐತಿಹಾಸಿಕ ಪ್ರಗತಿ ಹಿನ್ನೆಲೆಯಲ್ಲಿ ಕುಕ್ಕಿಪಾಡಿ ಹಾಗೂ ಎಲಿಯನಡುಗೋಡು ಬಿಜೆಪಿ ಶಕ್ತಿ ಕೇಂದ್ರಗಳ ವತಿಯಿಂದ ವಾಮದಪದವು ಸಮೀಪದ ಮಾವಿನಕಟ್ಟೆ ಶ್ರೀ ಚಾಮುಂಡೇಶ್ವರಿ ಸನ್ನಿದಿಯಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬ್ಯಾಂಕಿನ ಅಧ್ಯಕ್ಷರಾದ ಪ್ರಭಾಕರ ಪ್ರಭು, ನಿರ್ದೇಶಕರಾದ ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಕುಕ್ಕಿಪಾಡಿ ಶಕ್ತಿ ಕೇಂದ್ರದ ಪ್ರಮುಖರಾದ ಯೋಗೀಶ್ ಆಚಾರ್ಯ ಹಾಗೂ ಶೇಖರ್ ಶೆಟ್ಟಿ, ಬೂತ್ ಅಧ್ಯಕ್ಷರಾದ ಲಿಂಗಪ್ಪ ಪೂಜಾರಿ, ಪುಷ್ಪರಾಜ್ ಪೂಜಾರಿ, ಬೂತ್ ಕಾರ್ಯದರ್ಶಿ ಶಿವಾನಂದ ಪೂಜಾರಿ, ಪ್ರಭಾತ್ ನಾಯಕ್, ಪ್ರವೀಣ್ ಶೆಟ್ಟಿ, ಪಕ್ಷದ ಪ್ರಮುಖರಾದ ಹರೀಶ್ ಪೂಜಾರಿ, ರಾಜು ಪೂಜಾರಿ, ಯಶವಂತ ಆಚಾರ್ಯ, ಪೂವಪ್ಪ ಪೂಜಾರಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top