ಚಿಣ್ಣರಲ್ಲಿ ಕಲಾ ಪ್ರೌಢಿಮೆ ವೃದ್ಧಿಸಲಿ: ಮಂತ್ರಾಲಯ ಶ್ರೀಗಳು

Upayuktha
0


 

ಮಂಗಳೂರು: ಯಕ್ಷಗಾನ ಸೇರಿದಂತೆ ಎಲ್ಲಾ ಕಲಾಪ್ರಕಾರಗಳೂ ಗೌರವಿಸಲ್ಪಡಬೇಕಾದವುಗಳೇ ಆಗಿವೆ. ಮಕ್ಕಳು ಕಲೆಯ ಮೇಲಿನ ಆಸಕ್ತಿಯಿಂದ ಶ್ರೀಮಠದವರೆಗೂ ಬಂದು ತಮ್ಮ ಕಲಾ ಜಾಣ್ಮೆಯನ್ನು ಪ್ರದರ್ಶಿಸಿರುವುದು ಶ್ಲಾಘನೀಯ. ಶ್ರೀಕ್ಷೇತ್ರದಲ್ಲಿ ನಾವು ಸದಾ ವಿವಿಧ ಕಲೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದು, ಇಂದು 'ಸರಯೂ ಮಕ್ಕಳ ಮೇಳ'ವು ಶ್ರೀ ಗುರುರಾಯರ ಸನ್ನಿಧಿಯಲ್ಲಿ ಅತ್ಯುತ್ತಮವಾಗಿ ಯಕ್ಷಗಾನ ಪ್ರಸ್ತುತಪಡಿಸಿದೆ. ಮುಂದಿನ ದಿನಗಳಲ್ಲೂ ಈ ಬಾಲ ಕಲಾವಿದರ ತಂಡವನ್ನು ಶ್ರೀಮಠಕ್ಕೆ ಆಹ್ವಾನಿಸಲಾಗುವುದು. ಮಕ್ಕಳು ಕಲಾಪ್ರೌಢಿಮೆಯೊಂದಿಗೆ ಬೆಳೆದು ಬೆಳಗಲಿ ಎಂದು ಮಂತ್ರಾಲಯದ ಶ್ರೀ ಶ್ರೀ 1008 ವಿಭುದೇಂದ್ರ ತೀರ್ಥ ಸ್ವಾಮೀಜಿಯವರು ಹರಸಿದರು.


ಶ್ರೀಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ 'ನಾದನಮನ ಕಲಾಸೇವೆ'ಯ ಪ್ರಯುಕ್ತ, ಜೂನ್ 29ರ ಸೋಮವಾರದಂದು (ಹುಣ್ಣಿಮೆ) ದಕ್ಷಿಣ ಕನ್ನಡ ಜಿಲ್ಲೆಯ ಪ್ರಪ್ರಥಮ ಮಕ್ಕಳ ಮೇಳವಾದ 'ಸರಯೂ ಮಕ್ಕಳ ಮೇಳ'ದ ವತಿಯಿಂದ 'ಶ್ರೀ ರಾಮ ದರ್ಶನ' ಎಂಬ ಯಕ್ಷಗಾನ ಬಯಲಾಟ ಪ್ರದರ್ಶನ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಜರುಗಿತು. ಮಂತ್ರಾಲಯ ಕ್ಷೇತ್ರದಲ್ಲಿ ಮಕ್ಕಳ ತಂಡವೊಂದು ಯಕ್ಷಗಾನ ಪ್ರದರ್ಶನ ನೀಡಿದ್ದು ಇದೇ ಮೊದಲು ಎಂಬುದು ವಿಶೇಷ.


ಕಾರ್ಯಕ್ರಮದ ಹಿಮ್ಮೇಳದಲ್ಲಿ ರವಿ ಕೃಷ್ಣ ದಂಬೆ, ವರ್ಕಾಡಿ ಮಧುಸೂದನ ಅಲೆವೂರಾಯ ಹಾಗೂ ಅಕ್ಷಯ ರಾವ್ ವಿಟ್ಲ ಸಹಕರಿಸಿದರು. ಈ ಪ್ರದರ್ಶನವನ್ನು ವರ್ಕಾಡಿ ರವಿ ಅಲೆವೂರಾಯ ಅವರು ನಿರ್ದೇಶಿಸಿದ್ದರು.


ವಿಜಯಲಕ್ಷ್ಮೀ ಎಲ್.ಎನ್., ಅಕ್ಷಯ್ ಕೋಡಿಕಲ್, ನಿತ್ಯಶ್ರೀ ಪೂಜಾರಿ, ಸೈಶಾ ಭಂಡಾರಿ, ದೃಶಾಲ್ ಕೆ., ಉದಿತ್ ಕೋಟ್ಯಾನ್, ಆಗಮ್ ಶರ್ಮಾ, ಪ್ರಮೋದ್ ಕೆ., ಗೌತಂ ಭಂಡಾರಿ, ದೀಪಕ್ ಶರ್ಮಾ ಹಾಗೂ ಕುಸುಮಾ ಅವರು ವಿವಿಧ ಪಾತ್ರಗಳಲ್ಲಿ ಕಲಾಪ್ರತಿಭೆ ಮೆರೆದರು.


ತಂಡದ ಸಹಾಯಕರಾಗಿ ಶ್ರೀಮತಿ ಪೂರ್ಣಿಮಾ ಪ್ರಭಾಕರ ರಾವ್, ಶ್ರೀಮತಿ ಭಾರತಿ, ಶ್ರೀಮತಿ ಜಯಶ್ರೀ ಮನೋಜ್‌, ಶ್ರೀಮತಿ ಪೂಜಾ ಮತ್ತು ರೂಪೇಶ್ ಪೂಜಾರಿ ಸಹಕರಿಸಿದರು. ಕಾರ್ಯಕ್ರಮದ ಯಶಸ್ಸಿನ ಬಳಿಕ ಶ್ರೀಗಳು ಇಡೀ ತಂಡಕ್ಕೆ ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top