ಕುಳಾಯಿ: ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ.) ಇದರ ಮಹಾಸಭೆಯು ಇತ್ತೀಚೆಗೆ ಕುಳಾಯಿ ಮಹಿಳಾ ಮಂಡಲದ ವಠಾರದಲ್ಲಿರುವ ಶ್ರೀ ಗಣೇಶ ಕಲಾ ಮಂಟಪದಲ್ಲಿ ಜರುಗಿತು. ವಿಠಲ್ ಸಾಲಿಯಾನ್ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ 2026-2028ರ ಸಾಲಿಗೆ ಸಮಿತಿಯ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಮಿತಿಯ ಗೌರವ ಅಧ್ಯಕ್ಷರಾಗಿ ಕೆ.ಪಿ. ಚಂದ್ರಶೇಖರ ಮತ್ತು ಅಧ್ಯಕ್ಷರಾಗಿ ವಿಠ್ಠಲ್ ಸಾಲಿಯಾನ್ ಅವರು ಪುನರಾಯ್ಕೆಯಾಗಿದ್ದಾರೆ.
ಪದಾಧಿಕಾರಿಗಳ ವಿವರ:
ಸಮಿತಿಯ ಉಪಾಧ್ಯಕ್ಷರುಗಳಾಗಿ ಯೋಗೀಶ್ ಸನಿಲ್ ಕುಳಾಯಿ, ಕುಮಾರ್ ಬಂಗೇರ ಪಣಂಬೂರು ಹಾಗೂ ರೇವತಿ ನವೀನ್ (ಸ್ಥಾನ ನಿಮಿತ್ತ) ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾಗಿ ಯೋಗೀಶ್ ಸಾಲ್ಯಾನ್ ಮತ್ತು ರಂಜಿತ್ ಕುಳಾಯಿ, ಕೋಶಾಧಿಕಾರಿಯಾಗಿ ಶ್ರೀನಿವಾಸ ಕುಳಾಯಿ ಹಾಗೂ ಆಂತರಿಕ ಲೆಕ್ಕ ಪರಿಶೋಧಕರಾಗಿ ಶ್ರೀಧರ ಯಚ್ ಅವರನ್ನು ನೇಮಕ ಮಾಡಲಾಯಿತು.
ಕಾರ್ಯಕಾರಿ ಸಮಿತಿ:
ಸಮಿತಿಯ ಸದಸ್ಯರುಗಳಾಗಿ ಶೇಖರ ದೇವಾಡಿಗ, ಶಂಕರ ಜೆ. ಶೆಟ್ಟಿ, ಭರತ್ ಕುಮಾರ್ ಕುಳಾಯಿ, ದಿನೇಶ ದೇವಾಡಿಗ, ರಾಮಚಂದ್ರ ಶೆಟ್ಟಿ, ಅಶೋಕ್ ಕುಚ್ಚಿ ಗುಡ್ಡೆ, ರಮೇಶ್ ಅಳಪೆ, ಚಂದ್ರಶೇಖರ MCC, ಮಾಧವ ಸಾಲ್ಯಾನ್, ಮಾಧವ ಬೈಕಂಪಾಡಿ, ಸುಕುಮಾರ ಭಂಡಾರಿ, ರತನ್ ಕುಮಾರ್, ಭಾಸ್ಕರ್ ಅಮೀನ್, ರಾಜೇಶ್ ಕುಳಾಯಿ, ಕೆ.ಎಸ್. ಮನೋಹರ್, ದೇವದಾಸ ಯನ್. ಶೆಟ್ಟಿ, ಶ್ರೀರಂಗ ಯಚ್, ವಾಸುದೇವ ದೇವಾಡಿಗ, ಯಶಸ್ ಕುಳಾಯಿ, ಹರಿಶ್ಚಂದ್ರ ಕುಳಾಯಿ, ಲಕ್ಷ್ಮಣ ಸಾಲಿಯಾನ್, ಯಾದವ ಬಿ. ಎಂ, ರವಿ ಅಮೀನ್ ಮೂಡುಬೆಟ್ಟು ಆಯ್ಕೆಯಾದರು.
ಮಹಿಳಾ ಸದಸ್ಯೆಯರಾಗಿ ರಮಾ ವೆಂಕಟ್ರಾವ್, ತೇಜಾವತಿ ಕುಳಾಯಿ, ಸಾವಿತ್ರಿ ಯಚ್, ರಾಜೇಶ್ವರಿ ದಿನಕರ್, ದೇವಕಿ ಯೋಗೀಶ್ ಸಾಲ್ಯಾನ್ ಹಾಗೂ ಪವಿತ್ರ ನಿರಂಜನ್ ಅವರನ್ನು ಒಳಗೊಂಡ ಬಲಿಷ್ಠ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ನೂತನ ಸಮಿತಿಯು ಮುಂದಿನ ಎರಡು ವರ್ಷಗಳ ಕಾಲ ಸಮಿತಿಯ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮುಂದಾಳತ್ವವನ್ನು ವಹಿಸಿಕೊಳ್ಳಲಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


