ವಿವೇಕಾನಂದ ಕಾಲೇಜಿನಲ್ಲಿ ಎಐ ಸಂಬಂಧಿತ ಬೂಟ್ ಕ್ಯಾಂಪ್
ಪುತ್ತೂರು: ಮಾನವ ಯಾವುದೇ ಕೃತಕ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳದಿದ್ದರೂ, ಎಐಯನ್ನು ಒಪ್ಪಿಕೊಳ್ಳುತ್ತಿದ್ದಾನೆ . ಎಐಯನ್ನು ಬಳಸುವುದು ಮಾತ್ರವಲ್ಲದೆ, ಅದನ್ನು ನಿಯಂತ್ರಿಸುವ ವಿಧಾನವನ್ನೂ ಮನುಷ್ಯ ಅರಿಯಬೇಕು. ಆದರೆ ನಾವು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆಯ ಮೇಲೆ ಅವಲಂಬಿತರಾಗಬಾರದು. ಅದಕ್ಕಿಂತ ಮನುಷ್ಯ ಬುದ್ಧಿವಂತನಾಗಬೇಕಾದ ಅಗತ್ಯವಿದೆ. ಎಐ ಇದ್ದರೂ ಸಹ, ಇವುಗಳ ಮಧ್ಯೆ ನಾವು ಭಾರತೀಯರೆಂಬ ಗುರುತನ್ನು ಮರೆಯಬಾರದು ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ನುಡಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಕಾಲೇಜು, ಪುತ್ತೂರು ಇಲ್ಲಿನ ಗೂಗಲ್ ಡೆವಲಪ್ಮೆಂಟ್ ಗ್ರೂಪ್, ಗಣಕ ಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ಘಟಕದ ವತಿಯಿಂದ ನಡೆದ 'Build with AI' ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೋ. ಶ್ರೀಕೃಷ್ಣ ಗಣರಾಜ್ ಭಟ್ ಮಾತನಾಡಿ, ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಇದೊಂದು ಉತ್ತಮ ಅವಕಾಶ. ಈಗಿನ ಸಮಾಜ ಇಂತಹ ಕೌಶಲ್ಯಗಳನ್ನು ಹೊಂದಿರುವ ವಿದ್ಯಾರ್ಥಿಗಳನ್ನು ಬಯಸುತ್ತಿದೆ. ಹಾಗಾಗಿ ಯುವಜನತೆ ಇಂತಹ ಕಾರ್ಯಕ್ರಮಗಳನ್ನು ಉತ್ತಮವಾಗಿ ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮುಖ್ಯ ಅಥಿತಿಗಳಾದ ಗೂಗಲ್ ಕ್ಲೌಡ್ ಫೆಸಿಲಿಟೇಟರ್ ವಿ. ಶ್ರೀನಿವಾಸ್ ಮತ್ತು ಅಸೋಸಿಯೇಟ್ ಪ್ರೋಗ್ರಾಮ್ ಮ್ಯಾನೇಜರ್ @Hack2skill ನ ಕುಶಾಗ್ರ ತಂದೂನ್, ಕಾಲೇಜಿನ ಪರೀಕ್ಷಾಂಗ ವಿಭಾಗದ ಕುಲಸಚಿವ ಪ್ರಕಾಶ್ ಕುಮಾರ್, ಉಪನ್ಯಾಸಕಿ ಹೇಮಾ ಶುಭಾಷಿನಿ ಹಾಗೂ ಜಿಡಿಜಿಓಸಿ ಸಂಘಟಕ ಸಚಿನ್ ಉಪ್ಪರ್ಣ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 425ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿನಿ ಶ್ರೀಜಾ ಸ್ವಾಗತಿಸಿ, ಬಿ. ಜಯಂತ್ ಸುಧಾನ್ವ ಪೈ ವಂದಿಸಿ, ಕಂಪ್ಯೂಟರ್ ಲ್ಯಾಬ್ ಸಹಾಯಕಿ ನಿರೀಕ್ಷಾ. ಹೆಚ್ ಪ್ರಾರ್ಥಿಸಿದರು. ವಿದ್ಯಾರ್ಥಿನಿ ದಿಶಾ ಕೆ. ನಿರೂಪಿಸಿದರು.
ಉದ್ಘಾಟನಾ ಕಾರ್ಯಕ್ರಮದ ನಂತರ ಗೂಗಲ್ ಕ್ಲೌಡ್ ಫೆಸಿಲಿಟೇಟರ್ ವಿ. ಶ್ರೀನಿವಾಸ್ ಮತ್ತು ಅಸೋಸಿಯೇಟ್ ಪ್ರೋಗ್ರಾಮ್ ಮ್ಯಾನೇಜರ್ @Hack2skill ನ ಕುಶಾಗ್ರ ಟಂಡನ್ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಸಿಕೊಟ್ಟರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


