ಕೆನರಾ ನಂದಗೋಕುಲದಲ್ಲಿ ತಂದೆಯಂದಿರ ದಿನಾಚರಣೆ

Upayuktha
0

 ತಂದೆಯ ನೆರಳು ಮಗುವಿನ ಮೊದಲ ಭದ್ರತೆ, ತಂದೆಯ ಪ್ರೀತಿ ಮಗುವಿನ ಮೊದಲ ಶಕ್ತಿ



ಮಂಗಳೂರು: ಕೆನರಾ ನಂದಗೋಕುಲ, ಕೊಡಿಯಾಲ್ ಬೈಲ್ ಹಾಗೂ ಅದರ ಶಾಖೆಯಾದ ಪದವಿನಂಗಡಿ ಸಂಸ್ಥೆಯು ಟಿ.ವಿ. ರಮಣ್ ಪೈ ಸಭಾಂಗಣದಲ್ಲಿ ತಂದೆಯಂದಿರ ದಿನವನ್ನು ಆಚರಿಸಲಾಯಿತು.


ಮಕ್ಕಳು ಮತ್ತು ತಂದೆಯಂದಿರು ಒಟ್ಟಾಗಿ ವಿವಿಧ ಮನೋರಂಜನಾತ್ಮಕ ಆಟಗಳಲ್ಲಿ ಉತ್ಸಾಹದಿಂದ ಭಾಗವಹಿಸಿ, ಕೇವಲ ಗೆಲುವಿನ ಸಂತೋಷವನ್ನಷ್ಟೇ ಅಲ್ಲದೆ, ಜೀವನಪರ್ಯಂತ ನೆನಪಿನಲ್ಲಿ ಉಳಿಯುವ ಅಮೂಲ್ಯ ಕ್ಷಣಗಳನ್ನು ಸೃಷ್ಟಿಸಿದರು. ಮಕ್ಕಳ ನಗುವಿನಲ್ಲಿ ತಂದೆಯ ಹೆಮ್ಮೆ, ತಂದೆಯ ಕಣ್ಣಿನಲ್ಲಿದ್ದ ವಾತ್ಸಲ್ಯ ಹಾಗೂ ಮಕ್ಕಳ ಕೈ ಹಿಡಿದ ಕ್ಷಣದಲ್ಲಿ ಅವರ ಬಾಂಧವ್ಯದ ಸೌಂದರ್ಯ ಎಲ್ಲರ ಮನಸ್ಸನ್ನೂ ಸ್ಪರ್ಶಿಸಿತು.


ಶಾಲೆಯ ಶೈಕ್ಷಣಿಕ ಮುಖ್ಯೋಪಾಧ್ಯಾಯಿನಿ ಉಜ್ವಲ್ ಮಲ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಮಕ್ಕಳ ಹಾಗೂ ಪೋಷಕರನ್ನು ಹೃತ್ಪೂರ್ವಕವಾಗಿ ಪ್ರೋತ್ಸಾಹಿಸಿ ಶುಭ ಹಾರೈಸಿದರು.


ಕಾರ್ಯಕ್ರಮವನ್ನು ನಯನಾ ನಿರೂಪಿಸಿ, ಅಪರ್ಣಾ "ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ತಂದೆಯ ಪಾತ್ರ" ಎಂಬ ವಿಷಯದ ಕುರಿತು ಭಾವಪೂರ್ಣವಾಗಿ ಮಾತನಾಡಿ, ತಂದೆಯ ಪ್ರೀತಿ, ಮಾರ್ಗದರ್ಶನ ಹಾಗೂ ಪ್ರೋತ್ಸಾಹವು ಮಗುವಿನ ವ್ಯಕ್ತಿತ್ವ ರೂಪಿಸುವಲ್ಲಿ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಮನಮುಟ್ಟುವಂತೆ ವಿವರಿಸಿದರು. ಅವಿಟಾ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top