ಸ್ಪೂರ್ತಿ ಸೆಲೆ: ಬದುಕಿನಲ್ಲಿ ಆಯ್ಕೆಗಳು

Upayuktha
0

ಲೋ, ಹೇಗಿದ್ದೀರಾ?

ಬದುಕೆಂಬ  ಸಂಕೀರ್ಣತೆಯಲ್ಲಿ  ಆಯ್ಕೆಗಳು ಪ್ರಮುಖ ಪಾತ್ರ ವಹಿಸುತ್ತವೆ.  ಕೆಲವೊಂದು ಸಾರಿ ನಮಗೆ ಗೊತ್ತಿಲ್ಲದಂತೆ ನಮ್ಮ ಆಯ್ಕೆಗಳು ನಮ್ಮ ಜೀವನದ ಚಿತ್ರಣವನ್ನು ಬದಲಿಸಿ ಬಿಡುತ್ತವೆ. ನಮಗೆ ಬೇರೆಯವರು ಎಷ್ಟೋ ಸಲಹೆ, ಸೂಚನೆಗಳನ್ನು ಕೊಟ್ಟರೂ ಅಂತಿಮವಾಗಿ ನಮ್ಮದೇ ಆಯ್ಕೆ, ನಮ್ಮ ಜವಾಬ್ದಾರಿ ಆಗಿ ಬಿಡುತ್ತದೆ.


ಜೀವನದಲ್ಲಿ  ನಮ್ಮ ಜೀವನ ಸಂಗಾತಿ, ಶಿಕ್ಷಣ, ಉದ್ಯೋಗ ಇವೆಲ್ಲವೂ ನಮ್ಮ ಆಯ್ಕೆ ಆಗಿ ನಮಗೆ ಗೊತ್ತಿಲ್ಲದಂತೆ ನಮ್ಮ ಜೀವನದ ದಿಕ್ಕನ್ನು ಬದಲಿಸಿ ಬಿಡುತ್ತವೆ.


ಜೀವನದ  ಆಯ್ಕೆಗಳು ನಮ್ಮ ಬುದ್ಧಿವಂತಿಕೆ, ನಮ್ಮ ಪಕ್ವವಾದ ವ್ಯಕ್ತಿತ್ವದ ಪ್ರತೀಕ  ಎಂದು ಹೇಳಬಹುದು. ನಾವು ಇಲ್ಲಿ ಇನ್ನೊಬ್ಬರನ್ನು  ಹೊಣೆಗಾರರನ್ನಾಗಿ ಮಾಡಿ ನಾವು ತಪ್ಪಿಸಿಕೊಳ್ಳಲಿಕ್ಕೆ ಸಾಧ್ಯ ಇಲ್ಲ. ಅದಕ್ಕೆ ಪ್ರತಿ ಸಾರಿ ನಮ್ಮ ಜೀವನ  Choice is yours ಎಂದು ಹೇಳುತ್ತದೆ.


ಇದು ಒಂದು ರೀತಿಯಲ್ಲಿ ವಾಹನದ ಡ್ರೈವಿಂಗ್ ಸೀಟಿನಲ್ಲಿ ಕುಳಿತ ಹಾಗೆ. ನಾವಷ್ಟು ಬುದ್ಧಿವಂತಿಕೆಯಿಂದ, ಅನುಭವದ ಆಧಾರದ ಮೇಲೆ ಆಯ್ಕೆಗಳನ್ನು ಮಾಡುತ್ತೇವೆಯೋ ಅಷ್ಟು ಕಡಿಮೆ ರಿಸ್ಕ್ ನಮ್ಮ ಬದುಕಿನಲ್ಲಿ ಇರುತ್ತದೆ. ದುಡುಕಿ, ಭಾವಾವೇಶದಲ್ಲಿ ನಿರ್ಧಾರ ತೆಗೆದು ಕೊಂಡರೆ ಮುಂದೆ ಅದಕ್ಕೆ ನಾವೇ ಪಶ್ಚಾತ್ತಾಪ ಪಡಬೇಕಾಗುತ್ತದೆ. ಕೋಪದಲ್ಲಿ ಮೂಗು  ಕೊಯ್ದುಕೊಂಡ ಹಾಗೆ.


ಬನ್ನಿ, ಜೀವನದಲ್ಲಿ ಉತ್ತಮ ಆಯ್ಕೆಗಳನ್ನು ಮಾಡಿ  ಉತ್ತಮ ಜೀವನವನ್ನು ಸಂಭ್ರಮಿಸೋಣ. ಏನಂತೀರಾ?


-ಗಾಯತ್ರಿ ಸುಂಕದ, ಬದಾಮಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top