ಯಕ್ಷ ಶಿಕ್ಷಣ ಎಳೆಯದರಲ್ಲೇ ದೊರಕಿದರೆ ಸಮಾಜಕ್ಕೆ ಲಾಭ: ಕಮಲಾದೇವಿಪ್ರಸಾದ ಆಸ್ರಣ್ಣ

Upayuktha
0

ಮಂಗಳೂರು: "ಚುರುಕು ನಡೆ, ಗಾಂಭೀರ್ಯ, ಲಾಲಿತ್ಯ, ವೇಷದ ನಡೆ, ಪೌರಾಣಿಕ ಜ್ಞಾನ ಇವಿಷ್ಟಿದ್ದರೆ ಓರ್ವ ಉತ್ತಮ ಕಲಾವಿದನಾಗಿ ಮೂಡಿ ಬರಬಹುದು. ಇದಕ್ಕೆ ಎಳವಿನಿಂದಲೇ ಸಾಧನಾಶೀಲ ಗುಣ ಬೇಕು. ಆ ಪ್ರಯತ್ನವೇ ಮುಂದೆ ಆತನನ್ನು ಪ್ರಬುದ್ಧ ಕಲಾವಿದನನ್ನಾಗಿ ರೂಪಿಸುತ್ತದೆ. ಇದರಿಂದ ಸಾಂಸ್ಕೃತಿಕತೆ ಮತ್ತು ಸಾಮಾಜಿಕತೆ ಜೊತೆಯಲ್ಲೇ ಸಾಗುತ್ತದೆ. ಉತ್ತಮ, ಸ್ವಾಸ್ಥ್ಯ ಸಮಾಜದ ಅವಿಭಾಜ್ಯ ಅಂಗವಾಗಿ ಕಲಾವಿದ ಬೆಳೆಯುತ್ತಾನೆ. ಇದಕ್ಕೆ ದುರ್ಗಾ ಮಕ್ಕಳ ಮೇಳವೂ ಒತ್ತು ನೀಡುತ್ತದೆ. 26 ವರ್ಷಗಳಿಂದ ಸರಯೂ ಕೂಡಾ ಶ್ರಮಿಸುತ್ತದೆ. ಬೆಳೆಯುವ ಯಕ್ಷ ಚಿಣ್ಣರಿಗೆ ನಮ್ಮ ಆಶೀವಾ೯ದ ಸದಾ ಇರುತ್ತದೆ" ಎಂದು ಕದ್ರಿಯ ಶ್ರೀಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಶ್ರೀ ಕಮಲಾದೇವಿಪ್ರಸಾದ ಆಸ್ರಣ್ಣರು ಹೇಳಿದರು.


ಅವರು ಸರಯೂ ಅಷ್ಠಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಪ್ರೊ.ಎಂ.ಬಿ. ಪುರಾಣಿಕ್, ಪ್ರದೀಪ ಕುಮಾರ ಕಲ್ಕೂರರು ಸರಯೂ ಚಿಣ್ಣರಿಗೆ ಶುಭ ಕೋರಿದರು. ಸಕ್ಕಟ್ಟು ಬಣ್ಣದ ಲಕ್ಷ್ಮೀನಾರಾಯಣಯ್ಯ ಪ್ರತಿಷ್ಠಾನದ ಮಂಜುನಾಥಯ್ಯ ಅತಿಥಿಯಾಗಿದ್ದರು.


ಕಿನ್ನಿಗೋಳಿ ಯುಗಪುರುಷದ ಭುವನಾಭಿ ರಾಮ ಉಡುಪ, ಸೌಕೂರು ಸುಬ್ರಹ್ಮಣ್ಯ ಉಡುಪ, ಸೂರ್ಯ ಶೆಟ್ಟಿ, ಮಲ್ನಾಡು, ಸುಧಾಕರ ರಾವ್, ಪೇಜಾವರ ಮುಖ್ಯ ಅತಿಥಿಗಳಾಗಿದ್ದರು. ಧರ್ಮದರ್ಶಿ ಡಾ. ಪುನರೂರುರವರು ಸಮಾರೋಪ ಭಾಷಣ ಮಾಡಿದರು.


ಜನಾರ್ಧನ ಅಮ್ಮುಂಜೆ ಯವರು ನಿರ್ವಹಿಸದರೆ, ಅಧ್ಯಕ್ಷ ಮಧುಸೂದನ ಎ. ಧನ್ಯವಾದವಿತ್ತರು. ಬಳಿಕ ವರ್ಕಾಡಿ ರವಿ ಅಲೆವೂರಾಯ ವಿರಚಿತ 'ಗೋವಿನ ಗೀತೆ ಆಧಾರಿತ "ಪುಣ್ಯ ನಿಧಿ ಪುಣ್ಯಕೋಟಿ" ಎಂಬ ನೂತನ ಪ್ರಸಂಗ ಬಯಲಾಟ ರೂಪದಲ್ಲಿ ಪ್ರದರ್ಶನಗೊಂಡಿತು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top