ಇಡ್ಯಾ ವಿದ್ಯಾದಾಯಿನೀ ಹಿ.ಪ್ರಾ.ಶಾಲೆ ಸುರತ್ಕಲ್: ಶಾಲಾ ಪ್ರಾರಂಭೋತ್ಸವ

Upayuktha
0


ಸುರತ್ಕಲ್: ಹಿಂದೂ ವಿದ್ಯಾದಾಯಿನೀ ಸಂಸ್ಥೆಗೆ ಒಳಪಟ್ಟ ಅನುದಾನಿತ ಇಡ್ಯಾ ವಿದ್ಯಾದಾಯಿನೀ ಹಿ.ಪ್ರಾ.ಶಾಲೆ ಸುರತ್ಕಲ್ ಇಲ್ಲಿ ದಿನಾಂಕ 1-6-2026 ರಂದು 2026-2027ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಜರುಗಿತು. 


ಶೈಕ್ಷಣಿಕ ಚಟುವಟಿಕೆಗಳ ಪ್ರಾರಂಭದ ದಿನವಾದ ಅಂದು ವಿದ್ಯಾರ್ಥಿಗಳಿಗೆ ಗುಲಾಬಿ ಹೂಗಳನ್ನು ನೀಡಿ ಪ್ರೀತಿ ಪೂರ್ವಕವಾಗಿ   ಬರಮಾಡಿಕೊಳ್ಳಲಾಯಿತು. "ವಿದ್ಯೆ ಎಂಬ ದೀವಿಗೆ ಬೆಳಗ ಬನ್ನಿ ಶಾಲೆಗೆ" ಎಂಬ ಘೋಷಣಾ ವಾಕ್ಯದೊಂದಿಗೆ ಜ್ಞಾನ ದೀವಿಗೆಯನ್ನು ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. 


ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀಮತಿ ಯೋಗಿತಾ ಕೆ. [ business operation manager C NS, LLC dubai UAE ] ಇವರು ತಾವು ಈ ಶಾಲೆಯಲ್ಲಿ ವಿದ್ಯಾರ್ಥಿ ಜೀವನದಲ್ಲಿ ಕಳೆದ ಕ್ಷಣಗಳನ್ನು ಸ್ಮರಿಸುತ್ತಾ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವುದರಿಂದ ಮಕ್ಕಳು ಭವಿಷತ್ತಿನಲ್ಲಿ ಸಾಧನೆ ಮಾಡಲಾರರು ಎಂಬ ಮನೋಭಾವನೆಯನ್ನು ಪೋಷಕರು ತಮ್ಮ ಮನಸ್ಸಿನಿಂದ ತೆಗೆದು ಹಾಕಬೇಕು ಎ೦ದು ಕಿವಿಮಾತು ಹೇಳಿದರಲ್ಲದೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. 


ಶ್ರೀರಾಮ್ ಪ್ರಸಾದ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿ ಗಳಿಗೆ  1 ಲಕ್ಷ 10 ಸಾವಿರ ಮೌಲ್ಯದ ನೋಟ್ಸ್ ಪುಸ್ತಕಗಳನ್ನು ವಿತರಿಸಲಾಯಿತು. 


ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಹಿಂದೂ ವಿದ್ಯಾದಾಯಿನೀ ಸಂಘದ ಜೊತೆ ಕಾರ್ಯದರ್ಶಿ ಶ್ರೀ.ಎಂ.ಜಿ.ರಾಮಚಂದ್ರ ಇವರು ವಹಿಸಿದ್ದರು. ಸಂಚಾಲಕಿ. ಪಿ.ಕಸ್ತೂರಿ, ಶಾಲಾ ಮುಖ್ಯ ಶಿಕ್ಷಕರು, ಅಧ್ಯಾಪಕ ವೃಂದದವರು, ಉಪಸ್ಥಿತರಿದ್ದರು. ಶ್ರೀಮತಿ ಶಕು೦ತಳಾ ಕಾಯ೯ಕ್ರಮ ನಿರೂಪಿಸಿದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top