ದಾವಣಗೆರೆ: ನಗರದ ಹೆಸರಾಂತ ‘ರವಿ ಬೆಣ್ಣೆ ದೋಸೆ ಹೋಟೆಲ್’ ಮಾಲೀಕರಾದ ದಿ. ರವಿ ಅವರ ಪುತ್ರ ಶ್ರೀಯುತ ರಾಕೇಶ್ ಅವರ ಪ್ರಾಮಾಣಿಕತೆಯನ್ನು ಮೆಚ್ಚಿ ಲಯನ್ಸ್ ಕ್ಲಬ್ ಸದಸ್ಯರು ಸನ್ಮಾನಿಸಿದರು.
ಇತ್ತೀಚೆಗೆ ಲಯನ್ ಎಚ್.ವಿ. ಮಂಜುನಾಥ್ ಸ್ವಾಮಿ ದಂಪತಿಗಳು ಹೋಟೆಲ್‌ಗೆ ತಿಂಡಿಗೆ ಬಂದಾಗ ಆಕಸ್ಮಿಕವಾಗಿ ₹10,000 ನಗದು ಕಳೆದುಕೊಂಡಿದ್ದರು. ಆ ಹಣ ಇವರ ಹೋಟೆಲ್ ನಲ್ಲಿ ಸಿಕ್ಕ ಕೂಡಲೇ ಮಾಲೀಕ ರಾಕೇಶ್ ಅವರು ಸ್ವತಃ ಹುಡುಕಿಕೊಂಡು ಹೋಗಿ ಸಂಬಂಧಪಟ್ಟವರಿಗೆ ಹಿಂದಿರುಗಿಸುವ ಮೂಲಕ ತಮ್ಮ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.
ತಮ್ಮದೇ ಆದ ಇತಿಹಾಸ ಹೊಂದಿರುವ ಪ್ರತಿಷ್ಠಿತ ಹೋಟೆಲ್‌ನ ಮಾಲೀಕ ಶ್ರೀಯುತ ರಾಕೇಶ್ ರವರ ಈ ಪ್ರಾಮಾಣಿಕತೆಯ ಕಾರ್ಯವನ್ನು ಗುರುತಿಸಿ ದಾವಣಗೆರೆ ಲಯನ್ಸ್ ಕ್ಲಬ್ ಸದಸ್ಯರು ಶ್ರೀಯುತ ರಾಕೇಶ್ ಅವರನ್ನು ಸನ್ಮಾನಿಸಿ ಗೌರವಿಸಿದರು. ಪ್ರಾಮಾಣಿಕತೆಯೇ ದೊಡ್ಡ ಆಸ್ತಿ ಎಂಬುದಕ್ಕೆ ರಾಕೇಶ್ ಅವರ ನಡೆ ಮಾದರಿಯಾಗಿದೆ ಎಂದು ಲಯನ್ಸ್ ಕ್ಲಬ್ ಸದಸ್ಯರು ಶ್ಲಾಘಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


