ರಂಗಕರ್ಮಿ ಅನಂತ ಬಬಲೇಶ್ವರ ಅವರಿಗೆ ದುತ್ತರಗಿ ಟ್ರಸ್ಟಿನಿಂದ ಸನ್ಮಾನ

Upayuktha
0

 


ಹುನಗುಂದ: ಹುನಗುಂದ ರಂಗ ಚಟುವಟಿಕೆಗಳಿಗೆ ಹೆಸರಾದ ನಗರವಾಗಿದೆ. ಬಹುದಿನಗಳಿಂದಲೂ ಇಲ್ಲಿ ವೃತ್ತಿ ಹಾಗೂ ಹವ್ಯಾಸಿ ರಂಗ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಇಂತಹ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀ ಅನಂತ ಬಬಲೇಶ್ವರ ಅವರು ವೃತ್ತಿರಂಗಭೂಮಿ ಹಾಗೂ ಹವ್ಯಾಸಿ ರಂಗಭೂಮಿಯಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅವರೊಬ್ಬ ಒಳ್ಳೆ ಸಂಘಟಿಕರು, ರಂಗ ಚಟುವಟಿಕೆಗಳಿಗೆ ಸಹಕಾರ ನೀಡಿದ್ದಾರೆ. ಇವರು ಶ್ರೇಷ್ಠ ನಾಟಕಗಾರ ಪಿ.ಬಿ ಧುತ್ತರಗಿ ಟ್ರಸ್ಟ್ ನ ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸುಮಾರು ಆರು ದಶಕಗಳ ಅವರ ಶ್ರಮಕ್ಕೆ ಸಿಕ್ಕ ಬೆಲೆ ಇದಾಗಿದೆ ಗೌರವ ಇದಾಗಿದೆ ಎಂದು ಪಿ.ಬಿ. ದುತ್ತರಗಿ ಟ್ರಸ್ಟ್ ನ ಅಧ್ಯಕ್ಷ ಎಸ್ ಕೆ ಕೊನೆಸಾಗರ ಹೇಳಿದರು.


ಇವರು ಶನಿವಾರ ನಗರದ ರಾಘವೇಂದ್ರ ಮಠದಲ್ಲಿ ನಡೆದ ರಂಗ ಸಂಘಟನೆಗಳು ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. 


ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ, ಹವ್ಯಾಸಿ ರಂಗ ಸಂಘಟಕ ಹಾಗೂ ಕಲಾವಿದ ಮಹಾಂತೇಶ ಅವಾರಿ ತಾಲೂಕಿನಲ್ಲಿನ ರಂಗಕರ್ಮಿಗಳನ್ನು ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯವಾಗಿದೆ. ರಂಗ ಚಟುವಟಿಕೆಗಳು ಹೀಗೆ ನಿರಂತರವಾಗಿ ಮುಂದುವರಿಯಬೇಕು. ಅಂತಹ ವಾತಾವರಣವನ್ನು ನಿರ್ಮಿಸುವ ಕಾರ್ಯವಾಗಬೇಕಾಗಿದೆ ಎಂದರು.


ಮಹಾಂತೇಶ ಹಳ್ಳೂರ ಹಾಗೂ ವ್ಯಾಸ ತೀರ್ಥ ಜೋಷಿ ಅನಂತ ಅವರ ರಂಗ ಚಟುವಟಿಕೆ ಕುರಿತು ಮಾತನಾಡಿದರು. ಸಂಗು ಮಠ ಹಾಗೂ ವಾದಿರಾಜ ಗುಡ್ಡದ ವೇದಿಕೆಯಲ್ಲಿದ್ದರು. ವಿಜಯಕುಮಾರ್ ಕುಲಕರ್ಣಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ, ಮಹಾಂತೇಶ ಹಳ್ಳೂರ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top