ಪುತ್ತೂರು: ಮಂಗಳೂರಿನ ಯೇನೆಪೋಯ ದಂತ ಮಹಾವಿದ್ಯಾಲಯದ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಅಕ್ಷತಾ ಕಣಿಯೂರು ಅವರು ಸ್ವಿಟ್ಜರ್ಲ್ಯಾಂಡ್‌ನ ಪ್ರತಿಷ್ಠಿತ ಯೂನಿವರ್ಸಿಟಿ ಹಾಸ್ಪಿಟಲ್ ಬಾಸೆಲ್‌ನ Department of Oral and Cranio & Maxillofacial Surgery (MKG) ನಲ್ಲಿ AO Foundation ವತಿಯಿಂದ ಆಯೋಜಿತವಾದ Cranio&Maxillofacial Surgery Fellowship ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಎಂಟು ವಾರಗಳ ಈ ಫೆಲೋಶಿಪ್ ಅವಧಿಯಲ್ಲಿ ಡಾ. ಅಕ್ಷತಾ ಅವರು Prof. Dr. mult. Florian M. Thieringer ಮಾರ್ಗದರ್ಶನದಲ್ಲಿ ಮುಖ ಹಾಗೂ ದವಡೆಯ ಸಂಕೀರ್ಣ ಶಸ್ತ್ರಚಿಕಿತ್ಸೆಗಳು, 3ಡಿ ವರ್ಚುವಲ್ ಸರ್ಜಿಕಲ್ ಪ್ಲಾನಿಂಗ್, ಮುಖದ ಮೂಳೆಗಳ ಪುನರ್ನಿರ್ಮಾಣ (Reconstructive Surgery), ಟ್ರಾಮಾ ನಿರ್ವಹಣೆ ಹಾಗೂ ಆಧುನಿಕ ಚಿಕಿತ್ಸಾ ತಂತ್ರಜ್ಞಾನಗಳಲ್ಲಿ ವಿಶೇಷ ತರಬೇತಿ ಪಡೆದಿದ್ದಾರೆ.
2020ರಲ್ಲಿ ಕಾಸರಗೋಡಿನಲ್ಲಿ ಕನ್ಸಲ್ಟೆಂಟ್ ಮ್ಯಾಕ್ಸಿಲೋಫೇಶಿಯಲ್ ಸರ್ಜನ್ ಆಗಿ ವೃತ್ತಿಜೀವನವನ್ನು ಆರಂಭಿಸಿದ ಡಾ. ಅಕ್ಷತಾ ಮಂಗಳೂರು ಹಾಗೂ ಕಾಸರಗೋಡು ಸುತ್ತಮುತ್ತಲಿನ ವಿವಿಧ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಲ್ಲಿ ಕನ್ಸಲ್ಟೆಂಟ್ ಮ್ಯಾಕ್ಸಿಲೋಫೇಶಿಯಲ್ ಸರ್ಜನ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕಾಸರಗೋಡಿನ ಉದ್ಯಮಿ ಮಹೇಶ್ ಕಣಿಯೂರು-ವಿಜಯಲಕ್ಷ್ಮೀ ಕಣಿಯೂರು ದಂಪತಿ ಪುತ್ರಿ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



