ದೇಶದ 50,000 ದಾದಿಯರಿಗೆ ಹಿಮಾಲಯ ಬೇಬಿಕೇರ್ ಸಂಸ್ಥೆಯಿಂದ ಗೌರವ ಪ್ರದಾನ

Upayuktha
0

ರಾಷ್ಟ್ರಪತಿ ಭವನದಲ್ಲಿ ನಡೆದ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿ; 15 ಸಾಧಕ ಶುಶ್ರೂಷಕರಿಗೆ ವಿಶೇಷ ಸನ್ಮಾನ



ಮಂಗಳೂರು: ಭಾರತದ ಅತ್ಯಂತ ವಿಶ್ವಾಸಾರ್ಹ ಶಿಶು ರಕ್ಷಣಾ ಉತ್ಪನ್ನ ಬ್ರ್ಯಾಂಡ್‌ ಗಳಲ್ಲಿ ಒಂದಾದ ಹಿಮಾಲಯ ಬೇಬಿಕೇರ್ ದಾದಿಯರನ್ನು ಗೌರವಿಸುವ ನಿಟ್ಟಿನಲ್ಲಿ ದೇಶಾದ್ಯಂತ ಬೃಹತ್ ಅಭಿಯಾನ ಹಮ್ಮಿಕೊಂಡಿದೆ. ಸಂಸ್ಥೆಯು ಈ ಅಭಿಯಾನದ ಭಾಗವಾಗಿ ಭಾರತದ ಆರೋಗ್ಯ ವಲಯಕ್ಕೆ ನಿರಂತರ ಸೇವೆ ಸಲ್ಲಿಸುತ್ತಿರುವ ಸುಮಾರು 50,000 ದಾದಿಯರನ್ನು ಗುರುತಿಸಿ, ಗೌರವಿಸಲಿದೆ.


ಇತ್ತೀಚೆಗೆ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಗೌರವಾನ್ವಿತ ಭಾರತದ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರಿಂದ ಪ್ರದಾನ ಮಾಡಲಾದ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ 2026 ಸಮಾರಂಭದಲ್ಲಿ ಭಾಗವಹಿಸಲು ಟ್ರೇನ್ಡ್ ನರ್ಸಸ್ ಅಸೋಸಿಯೇಷನ್ ಆಫ್ ಇಂಡಿಯಾ ಆಮಂತ್ರಣದ ಮೇರೆಗೆ ಹಿಮಾಲಯ ಬೇಬಿಕೇರ್ ಸಂಸ್ಥೆ ಪಾಲ್ಗೊಂಡಿತ್ತು. ಈ ಸಂದರ್ಭದಲ್ಲಿ, ಶುಶ್ರೂಷಾ ರಂಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಹಾಗೂ ಭಾರತದ ಆರೋಗ್ಯ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ 15 ಸಾಧಕ ದಾದಿಯರನ್ನು ಸಂಸ್ಥೆಯು ಪ್ರತ್ಯೇಕವಾಗಿ ಗೌರವಿಸಿ ಸನ್ಮಾನಿಸಿತು.


ತಾಯಿ, ನವಜಾತ ಶಿಶು ಹಾಗೂ ಸಮುದಾಯದ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಶುಶ್ರೂಷಕರ ಕರುಣೆ, ಸಹಾನುಭೂತಿ ಮತ್ತು ನಿಸ್ವಾರ್ಥ ಸೇವೆಯನ್ನು ಕೊಂಡಾಡುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ದೇಶದ ವಿವಿಧ ಭಾಗಗಳ ಆಸ್ಪತ್ರೆ ಹಾಗೂ ಆರೋಗ್ಯ ಸಂಸ್ಥೆಗಳಲ್ಲಿ 10 ರಿಂದ 25 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿರುವ ದಾದಿಯರನ್ನು ಶ್ಲಾಘನಾ ಕಾರ್ಯಕ್ರಮಗಳು, ಪ್ರಶಂಸಾ ಪತ್ರಗಳು ಹಾಗೂ ವಿಶೇಷ ಉಡುಗೊರೆಗಳ ಮೂಲಕ ಸನ್ಮಾನಿಸಲಾಯಿತು. ಸಮಾಜದ ಯೋಗಕ್ಷೇಮಕ್ಕೆ ಅವರು ನೀಡಿದ ಅಚಲ ಬದ್ಧತೆಗೆ ಕೃತಜ್ಞತೆ ಸಲ್ಲಿಸುವ ಸಂಕೇತವಾಗಿ ಈ ಗೌರವ ಸಮರ್ಪಿಸಲಾಯಿತು.


ಈ ಅಭಿಯಾನದ ಕುರಿತು ಮಾತನಾಡಿದ ಹಿಮಾಲಯ ವೆಲ್‌ನೆಸ್ ಕಂಪನಿಯ ಬೇಬಿಕೇರ್ ವಿಭಾಗದ ನಿರ್ದೇಶಕ ಚಕ್ರವರ್ತಿ ಎನ್. ವಿ. ಅವರು, "ದಾದಿಯರು ನಮ್ಮ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿದ್ದಾರೆ. ಅವರು ಜೀವನದ ಪ್ರತಿಯೊಂದು ಹಂತದಲ್ಲೂ ಕಾಳಜಿ, ಸಾಂತ್ವನ ಮತ್ತು ಭರವಸೆಯನ್ನು ನೀಡುತ್ತಾರೆ. ತಾಯಂದಿರು ಮತ್ತು ನವಜಾತ ಶಿಶುಗಳನ್ನು ಪೋಷಿಸುವಲ್ಲಿ ದಾದಿಯರು ವಹಿಸುವ ಪ್ರಮುಖ ಪಾತ್ರವನ್ನು ಹಿಮಾಲಯ ಬೇಬಿಕೇರ್ ಗೌರವಿಸುತ್ತದೆ. ಭಾರತದ ಶುಶ್ರೂಷಾ ಸಮುದಾಯದ ಕರುಣೆ, ದೃಢತೆ ಮತ್ತು ಅಚಲ ಸಮರ್ಪಣಾ ಮನೋಭಾವಕ್ಕೆ ಈ ಅಭಿಯಾನವು ನಾವು ಸಲ್ಲಿಸುತ್ತಿರುವ ಗೌರವಪೂರ್ವಕ ನಮನವಾಗಿದೆ" ಎಂದು ಹೇಳಿದರು.


ಈ ಮಹತ್ಕಾರ್ಯವು ಆರೋಗ್ಯ ರಕ್ಷಣಾ ವ್ಯವಸ್ಥೆಗೆ ಗಣನೀಯ ಕೊಡುಗೆ ನೀಡುವ ವ್ಯಕ್ತಿಗಳನ್ನು ಗುರುತಿಸುವ ಹಿಮಾಲಯ ಬೇಬಿಕೇರ್‌ ನ ಬದ್ಧತೆಯನ್ನು ಸಾರಿದೆ. ಈ ಬ್ರ್ಯಾಂಡ್, ದಾದಿಯರನ್ನು ಗೌರವಿಸುವ ಮತ್ತು ದೇಶಾದ್ಯಂತ ಸಾಮಾಜಿಕ ಬಾಂಧವ್ಯವನ್ನು ಗಟ್ಟಿಗೊಳಿಸುವ ಇಂತಹ ಕಾರ್ಯಕ್ರಮಗಳಿಗೆ ಮುಂದೆಯೂ ತನ್ನ ಬೆಂಬಲವನ್ನು ನೀಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top